KEA PGAyush 2025: ಪಿಜಿ ಆಯುಷ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನ: ನೋಂದಣಿ ಶುಲ್ಕ, ವಿವರ
ಬೆಂಗಳೂರು, ನವೆಂಬರ್ 09: 2025ನೇ ಸಾಲಿನ ಸ್ನಾತಕೋತ್ತರ ಆಯುಷ್ (PGAyush 2025) ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಆನ್ ಲೈನ್ ಮೂಲಕ ಅರ್ಜಿ ಕರೆದಿದೆ. ಎಐಎಪಿಜಿಇಟಿ-2025ರಲ್ಲಿ ಅರ್ಹತೆ ಪಡೆದಿರುವ ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿ ಆಧರಿಸಿದ ಈ ಕೂಡಲೇ ಅರ್ಜಿ ಸಲ್ಲಿಸುವಂತೆ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಸ್ನಾತಕೋತ್ತರ ಆಯುಷ್ (PGAyush 2025) ಕೋರ್ಸುಗಳ ಪ್ರವೇಶ ಬಯಸುವ ಅಭ್ಯರ್ಥಿಗಳು ಇದೇ ನವೆಂಬರ್ 10ರ ಸಂಜೆ 4ರೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ನೋಂದಣಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ 2,000 ಇದ್ದು (ರೂ 1,000 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಣಡ, ಪ್ರವರ್ಗ-1 ಅಭ್ಯರ್ಥಿಗಳಿಗೆ), ಇದನ್ನು ನವೆಂಬರ್10ರ ಸಂಜೆ 6 ರೊಳಗೆ ಆನ್ ಲೈನ್ ಮೂಲಕ ಪಾವತಿಸುವಂಥೆ ತಿಳಿಸಿದ್ದಾರೆ.

ವೇಳಾಪಟ್ಟಿ, ದಾಖಲಾತಿ ಪರಿಶೀಲನೆ, ಸಲ್ಲಿಸಬೇಕಾದ ಮೂಲ ದಾಖಲಾತಿಗಳು ಮತ್ತಿತರ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) http://kea.kar.nic.in ನಲ್ಲಿ ಗಮನಿಸಬಹುದು. ಎಐಎಪಿಜಿಇಟಿ-25ರ ಮಾಹಿತಿ ಪುಸ್ತಕದಲ್ಲಿ ನೀಡಿರುವ ಅರ್ಹತಾ ಷರತ್ತುಗಳು ಹಾಗೂ ಇನ್ನಿತರ ಮಾಹಿತಿಯನ್ನೂ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.
AACCC, ಆಯುಷ್ ಸಚಿವಾಲಯ, ನವದೆಹಲಿ ಇವರ ಮಾರ್ಗದರ್ಶಿ ಸೂತ್ರಗಳ ಅನ್ವಯ, ಸರ್ಕಾರವು ತನ್ನ ಆದೇಶ ಸಂಖ್ಯೆ ಆಕುಕ 70 ಪಿಟಿಡಿ 2017 ಬೆಂಗಳೂರು ದಿನಾಂಕ 06-09-2017 ಹಾಗು ಆಯುಷ್ ಇಲಾಖೆಯ ಪತ್ರ 24-09-2025 ಅನ್ವಯ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕಾಗಿ AIAPGET-2024 ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಅನ್ನು ನಡೆಸಲು ಪ್ರಾಧಿಕಾರಕ್ಕೆ ಆದೇಶಿಸಿದೆ.
ಕರ್ನಾಟಕ ಆಯುಷ್ ಇಲಾಖೆಯ ದಿನಾಂಕ 24-09-2025 ರ ಪತ್ರದ ಅನ್ವಯ, ಸರ್ಕಾರಿ ಮಹಾವಿದ್ಯಾಲಯಗಳ ಶೇ.85% (ಭಾರತ ಸರ್ಕಾರ ಶೇ.15% ಹೊರತುಪಡಿಸಿ) ಹಾಗೂ ಖಾಸಗಿ ಮಹಾವಿದ್ಯಾಲಯಗಳಲ್ಲಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಪದ್ಧತಿಯ ಶೇ.100 ರಷ್ಟು ಸೀಟುಗಳನ್ನು, ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಶೇ.25% ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಂಚಿಕೆ ಮಾಡಲಾಗುವುದು. AIAPGET-2024 ರಲ್ಲಿ ಅರ್ಹತೆಯನ್ನು ಪಡೆದಿರುವ ಎಲ್ಲ ಅರ್ಭರ್ಥಿಗಳು ಪಿಜಿಆಯುಷ್ ಸೀಟುಗಳಿಗೆ ನೋಂದಾಯಿಸಲಾಗುವುದು. SC/ST/Cat-1/2A/2B/3A/3B ಅರ್ಹತಾ ಮಾನದಂಡಗಳು ಕರ್ನಾಟಕದ SC/ST/OBC ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಿ.
ಅಭ್ಯರ್ಥಿಯ ಅರ್ಹತೆಯು ತಾತ್ಕಾಲಿಕವಾಗಿರುತ್ತದೆ ಮತ್ತು AIAPGET-2025 ರ ಮಾಹಿತಿ ಪುಸ್ತಕದಲ್ಲಿ ನೀಡಿರುವ ಅರ್ಹತಾ ಷರತ್ತುಗಳಿಗೆ ಒಳಪಟ್ಟಿರುತ್ತದೆ ಹಾಗೆಯೇ ಪ್ರವೇಶವು ಸಂಬಂಧಿಸಿದ NCISM / NCH / ಸರ್ಕಾರ / ಅರ್ಹತಾ ಪ್ರಾಧಿಕಾರ / ವಿಶ್ವವಿದ್ಯಾನಿಲಯ ಅನುಮೋದನೆಗೆ ಒಳಪಟ್ಟಿರುತ್ತದೆ. ನೋಂದಣಿ ಮಾಡುವುದರಿಂದಾಗಲೀ ಅಥವಾ ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಳ್ಳುವುದರಿಂದಾಗಲೀ ಕರ್ನಾಟಕದ ಆಯುಷ್ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಯಾವುದೇ ಹಕ್ಕನ್ನು ಪಡೆಯುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಲು ಕೋರಿದೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
NHAI ನಿಂದ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ: ತಿಂಗಳಿಗೆ ₹20,000 ಸ್ಟೈಪೆಂಡ್, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications