1750 ಸೀಟುಗಳಿಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟ: ಸೆ.14ರಿಂದ ದಾಖಲೆ ಪರಿಶೀಲನೆ

ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 1750 ಸೀಟು ಹಂಚಿಕೆಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದೆ. ಅದರಲ್ಲಿ ಯೋಗ, ನ್ಯಾಚುರೋಪಥಿ, ಆಯುರ್ವೇದ, ಯುನಾನಿ, ಹೋಮಿಯೋಪಥಿ ಕೋರ್ಸ್ ಗಳನ್ನು ಒಳಗೊಂಡಿದೆ.

ಹಾಗಾದರೆ ಯಾವ ಕೋರ್ಸ್ ಗಳಿಗೆ ಎಷ್ಟು ಸೀಟುಗಳಿವೆ ಎಂದು ನೋಡುವುದಾದರೆ ಆಯುಷ್ ನಲ್ಲಿ 965, ಹೋಮಿಯೋಪಥಿಯಲ್ಲಿ 235, ನ್ಯಾಚುರೋಪಥಿಯಲ್ಲಿ 230, ಯುನಾನಿಯಲ್ಲಿ 111 ಸೀಟುಗಳು ಲಭ್ಯವಿದೆ. ವಿಶೇಷ ವರ್ಗದ ಆಯುರ್ವೇದದಲ್ಲಿ 31, ಹೋಮಿಯೋಪಥಿಯಲ್ಲಿ 7, ಯುನಾನಿಯಲ್ಲಿ 6 ಹಾಗೂ ನ್ಯಾಚುರೋಪಥಿಯಲ್ಲಿ 8 ಸೀಟುಗಳು ಲಭ್ಯವಿದೆ.

ಇದರಲ್ಲಿ ಕೆಲವು ಇಯಮಗಳಿವೆ, ಒಂದೊಮ್ಮೆ ವೈದ್ಯಕೀಯ ಹಾಗೂ ವೆಟರ್ನರಿ ಕಾಲೇಜಿನಲ್ಲಿ ಈಗಾಗಲೇ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದರೆ ಅಂತಹ ವಿದ್ಯಾರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುವುದಿಲ್ಲ, ವೇಳಾಪಟ್ಟಿಯನ್ನು ಕೂಡ ವೆಬ್‌ಸೈಟ್ ನಲ್ಲಿ ಹಾಕಲಾಗಿದೆ.

Kea announced seat matrix for 1750 ayush seats

ಸೆಪ್ಟೆಂಬರ್ 1ರಿಂದ 4ರವರೆಗೆ ಆಯುಷ್ ಕೋರ್ಸ್ ಗಳ ಪ್ರವೇಶಕ್ಕಾಗ ಹೊಸದಾಗಿ ಅರ್ಜಿ ಸಲ್ಲಿಸಿದವರು ಸೆಪ್ಟೆಂಬರ್ 14ರಂದು ಬೆಳಗ್ಗೆ 10.30ಕ್ಕೆ ಯಾವುದಾದರೂ ಸಹಾಯಕ ಕೇಂದ್ರದಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಅಲ್ಲದೆ ಈಗಾಗಲೇ ನೀಟ್ ರೋಲ್ ನಂಬರ್ ನೀಡಿ ದಾಖಲೆ ಪರಿಶೀಲನೆಗೆ ಹಾಜರಾಗಿರುವ ಅಭ್ಯರ್ಥಿಗಳು ಕೂಡ ಸೆಪ್ಟೆಂಬರ್ 14ರಂದು ದಾಖಲೆ ಪರಿಶೀಲನೆಗೆ ಹಾಜರಾಗಬೇಕು.

ಆಪ್ಷನ್ ಎಂಟ್ರಿ ದಾಖಲಿಸಲು ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 16ರವರೆಗೆ ಅವಕಾಶ ನೀಡಲಾಗಿದೆ. ಪ್ರವೇಶ ಡೌನ್‌ ಲೋಡ್ ಮಾಡಿಕೊಳ್ಳಲು ಮತ್ತು ಶುಲ್ಕ ಪಾವತಿಸಲು ಸೆಪ್ಟೆಂಬರ್ 17ರಿಂದ 19 ವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ www.kea.kar.nic.in ನಲ್ಲಿ ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+