KCET 2024: ಕೆಸೆಟ್ 2ನೇ ಸುತ್ತಿನ ಸೀಟು ಹಂಚಿಕೆ ಮಾಡಿದ KEA, ಪರಿಶೀಲಿಸುವ ವಿಧಾನ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 18: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಯುಜಿಸಿಇಟಿ ಸೀಟು ಹಂಚಿಕೆ 2024 ಅನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2024 ಪ್ರವೇಶ ಪ್ರಕ್ರಿಯೆಗೆ ಎರಡನೇ ಸುತ್ತಿನ ಸೀಟು ಹಂಚಿಕೆಗಾಗಿ ಬಹು ನಿರೀಕ್ಷಿತ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಯಾರೆಲ್ಲ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದೀರಿ ನೀವೆಲ್ಲ ಅಭ್ಯರ್ಥಿಗಳು ಎಲ್ಲೆಲ್ಲಿ ತಮಗೆ ಸೀಟು ಹಂಚಿಕೆ ಆಗಿದೆ ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ ನೋಡಬಹುದು. ಅದಕ್ಕಾಗಿ ನೀವು ಅಧಿಕೃತ ವೆಬ್‌ಸೈಟ್ kea.kar.nic.in.ಗೆ ಭೇಟಿ ನೀಡಬೇಕು. ಅಭ್ಯರ್ಥಿಗಳು KCET 2ನೇ ಸುತ್ತಿನ ಸೀಟು ಹಂಚಿಕೆ ಪರಿಶೀಲನೆಗಾಗಿ ಈ ಕೆಳಗಿನ ವಿಧಾನಗಳನ್ನು ಪಾಲಿಸಬೇಕು.

KCET 2ನೇ ಸುತ್ತಿನ ಸೀಟು ಹಂಚಿಕೆ ಹೇಗೆ ಪರಿಶಿಸಬೇಕು: ಇಲ್ಲಿದೆ ವಿಧಾನ
* ಮೊದಲು ನೀವು KEA ಅಧಿಕೃತ ವೆಬ್‌ಸೈಟ್‌ಗೆ ಲಿಂಕ್ ಮೇಲೆ https://cetonline.karnataka.gov.in/kea/ ಕ್ಲಿಕ್ ಮಾಡಿ.
* ವೆಬ್‌ಸೈಟ್ ಪರದೆ ತೆರದ ನಂತರ KCET ಸೀಟ್ ಹಂಚಿಕೆ ಫಲಿತಾಂಶ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ಆ ಲಿಂಕ್ ಮೂಲಕ ಪ್ರವೇಶಿಸುತ್ತಿದ್ದಂತೆ ನಿಮ್ಮ ಆಯ್ಕೆ ಮಾಡಿಕೊಂಡ ಕ್ಷೇತ್ರದ CET ಸಂಖ್ಯೆಯನ್ನು ನಮೂದಿಸಿ.
* ಅಲ್ಲಿ ಕೇಳಲಾಗುವ ನಿಗದಿಪಡಿಸಿದ ಕಾಲೇಜು, ಕೋರ್ಸ್ ಮತ್ತು ವರದಿ ಸೂಚನೆ ಸೇರಿದಂತೆ ಸೀಟು ಹಂಚಿಕೆ ಪತ್ರದಲ್ಲಿ ನಮೂದಿಸಲಾದ ಎಲ್ಲ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು.
* ಪರಿಶೀಲನೆ ಬಳಿಕ ನಿಮಗೆ ಬೇಕಾದಲ್ಲಿ ಒಂದು ಕಾಪಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರಮುಖ ಸೂಚನೆಗಳು
ಅಭ್ಯರ್ಥಿಗಳು ಗಮನಿಸಬೇಕಾದ ವಿಷಯವೆಂದರೆ ಇದು ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವಾಗಿದೆ. ಅಭ್ಯರ್ಥಿಗಳು ಇನ್ನೂ ನಿಗದಿಪಡಿಸಿದ ಕಾಲೇಜಿಗೆ ವರದಿ ಮಾಡಿಕೊಳ್ಳದಂತೆ ಕೆಇಎ ಸೂಚನೆ ನೀಡಿದೆ.
ಏಕೆಂದರೆ ಈ ಹಿಂದೆ ಅಭ್ಯರ್ಥಿಗಳು ಒಂದಷ್ಟು ಕೋರಿಕೆ ಮೇಲೆ ಕೇಳಿದ ಕಾಲೇಜುಗಳನ್ನು ಪರಿಶೀಲಿಸಲಾಗುತ್ತದೆ. ಈ ಹಿಂದೆ ಸೆಪ್ಟೆಂಬರ್ 13ರದು ಮಧ್ಯಾಹ್ನ 2:00 ಗಂಟೆಗೆ ಅಭ್ಯರ್ಥಿಗಳು ಬೇಕಾದ ಆಯ್ಕೆಯ ಸ್ಥಳಗಳನ್ನು ಕೌನ್ಸೆಲಿಂಗ್ ವೇಳೆ ನೀಡಿದ್ದರು. ಅವುಗಳ ಪರಿಶೀಲಿಸಿ ಮತ್ತು ಆಕ್ಷೇಪಣೆ ನೋಡಿಕೊಂಡು ಕೆಇಎ ಮತ್ತೊಂದು ಪಟ್ಟಿ ಬಿಡುಗಡೆ ಮಾಡಲಿದೆ.
ಸೀಟು ಹಂಚಿಕೆ: ಆಕ್ಷೇಪಣೆ ಸಲ್ಲಿಸಲು ಅವಕಾಶ
ಸದ್ಯ ಈ ತಾತ್ಕಾಲಿಕ ಸೀಟು ಹಂಚಿಕೆಯು ತಾತ್ಕಾಲಿಕವಾಗಿ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ ನೀವು ಸೆಪ್ಟೆಂಬರ್ 19, ರಂದು ಬೆಳಗ್ಗೆ 10 ಗಂಟೆಗೆ ಮೊದಲು [email protected] ಗೆ ಇಮೇಲ್ ಮಾಡಬಹುದು. ಸೀಟು ಹಂಚಿಕೆಯ ಬಗ್ಗೆ ನಿಮ್ಮ ಆಕ್ಷೇಪಣೆಗಳು ಸಂಪೂರ್ಣ ವಿವರಗಳು ಮತ್ತು ಅಗತ್ಯ ದಾಖಲೆಗಳು ಸಲ್ಲಿಸಬೇಕು ಎಂದು ಕೆಇಎ ಕೇಳಿಕೊಂಡಿದೆ.
ಆಕ್ಷೇಪಣೆಗಳು ಮತ್ತು ದೃಢೀಕರಣ ಪರಿಗಣಿಸಿ ಮುಂದಿನ ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತಿಮ ಸೀಟು ಹಂಚಿಕೆ ಫಲಿತಾಂಶಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಇನ್ನೂ ಮೊದಲ ಸೀಟು ಹಂಚಿಕೆಯ ಬಳಿಕ ಖಾಲಿ ಇರುವ ಸೀಟುಗಳ ಭರ್ತಿಯತ್ತಲೂ ಕೆಇಎ ಗಮನ ಹರಿಸಿದೆ ಎಂದು ಹೇಳಿದೆ..












Click it and Unblock the Notifications