ಕೆಪಿಸಿಸಿ ಅಧ್ಯಕ್ಷ ಹುದ್ದೆ: ಜೂ.14ಕ್ಕೆ ಬೆಂಗಳೂರಿಗೆ ವೇಣುಗೋಪಾಲ್
Recommended Video

ಬೆಂಗಳೂರು, ಜೂನ್ 13: ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕ ಕುರಿತಂತೆ ಭಾರಿ ಚರ್ಚೆ ನಡೆಯುತ್ತಿದೆ. ಹಲವು ಹೆಸರುಗಳು ಕೇಳಿಬಂದಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೂನ್ 14ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಲಿದೆ. ಇದರಲ್ಲಿ ಗುಂಪುಗಾರಿಕೆ ಇಲ್ಲ, ಲೋಕಸಭಾ ಚುನಾವಣೆ ತಯಾರಿ ಆಗಬೇಕಿದೆ, ಪಕ್ಷ ಬಲವರ್ಧನೆ, ಸಂಘಟನೆ ಆಗಬೇಕಿದೆ ಎಂದರು.
ನಾನು ಎಐಸಿಸಿ ನಿರ್ಧಾರಕ್ಕೆ ಸದಾ ಬದ್ಧನಾಗಿರುತ್ತೇನೆ, ಕೆಸಿ ವೇಣುಗೋಪಾಲ್ ಅವರು ನಗರಕ್ಕೆ ಬರುತ್ತಿದ್ದು, ಇದೆಲ್ಲದಕ್ಕೂ ಉತ್ತರ ಸಿಗಲಿದೆ, ಅಧ್ಯಕ್ಷ ಸ್ಥಾನದ ಪೈಪೋಟಿ ಮುಂದಿವರೆದಿದೆ, ಆದರೆ ನಾನಂತೂ ಪೈಪೋಟಿ ಮಾಡುವುದಿಲ್ಲ, ಮುಂದೆಯೂ ಪಕ್ಷ ನೀಡುವ ಆದೇಶಕ್ಕೆ ಬದ್ಧನಾಗಿರುತ್ತೇನೆ ಎಂದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಜಿ. ಪರಮೇಶ್ವರ್ ಡಿಸಿಎಂ ಜತೆಗೆ ಎರಡು ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದಾರೆ, ಹೀಗಾಗಿ ಹೊಸಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಖಂಡಿತವಾಗಿ ನಿಭಾಯಿಸುತ್ತೇನೆ, ಹಿಂದೆನೂ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದರು.











Click it and Unblock the Notifications