ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ವರ್ಷದಲ್ಲಿ ಕೋಲಾರದ ಕೆರೆ ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆ ಪೂರ್ಣ

|
Google Oneindia Kannada News

ಕೋಲಾರ, ಜುಲೈ 07 : 'ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ ಏತ ನೀರಾವರಿ ಯೋಜನೆಯ ಕಾಮಗಾರಿ ಜುಲೈ 11ರಂದು ಆರಂಭವಾಗಲಿದೆ. 2017ರ ಆಗಸ್ಟ್ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ' ಎಂದು ಕೋಲಾರ ಜಿಲ್ಲಾಧಿಕಾರಿ ಕೆ.ವಿ.ತ್ರಿಲೋಕಚಂದ್ರ ಹೇಳಿದ್ದಾರೆ.

ಕೆ.ಸಿ.ವ್ಯಾಲಿ (ಕೋರಮಂಗಲ- ಚಲ್ಲಘಟ್ಟ) ಏತ ನೀರಾವರಿ ಯೋಜನೆಯನ್ನು ನರಸಾಪುರ ಕೆರೆಯಿಂದ ಆರಂಭಿಸಲಾಗುತ್ತದೆ. ಈ ಯೋಜನೆ ಅನ್ವಯ ಕೋಲಾರದ 126 ಕೆರೆಗಳನ್ನು ತುಂಬಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ.[ಕೆ.ಸಿ.ವ್ಯಾಲಿ ಯೋಜನೆಗೆ ಚಾಲನೆಗೆ ಶಂಕು ಸ್ಥಾಪನೆ]

K.V. Thrilokchandra

ಯೋಜನೆ ಅನ್ವಯ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ ಆಯ್ದ 8 ಕೆರೆಗಳನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ. ಅದರಂತೆ ಜುಲೈ 11 ರಿಂದ 15 ರ ಒಳಗಾಗಿ ಈ ಕಾಮಗಾರಿಯನ್ನು ಪ್ರಾರಂಭಿಸಿ ನಂತರ ಉಳಿದ ಕೆರೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. [ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ]

ಯಾವ ಕೆರೆಗಳು? : ಮೊದಲ ಹಂತದಲ್ಲಿ ಕೋಲಾರ ತಾಲೂಕಿನ ನರಸಾಪುರ, ಕೋಡಿಕಣ್ಣೂರು, ಅಮಾನಿಕೆರೆ. ಶ್ರೀನಿವಾಸಪುರ ತಾಲೂಕಿನ ಮುದುವಾಡಿ, ಆಲವಟ್ಟ ಕೆರೆ. ಮಾಲೂರು ತಾಲೂಕಿನ ಶಿವಾರಪಟ್ಟಣ. ಮುಳಬಾಗಿಲು ತಾಲೂಕಿನ ಕೆನ್ಕುಂಟೆ ಕೆರೆ, ಬಂಗಾರಪೇಟೆ ತಾಲೂಕಿನ ಇಜುವನಹಳ್ಳಿ ಕೆರೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತದೆ.

'ಈ ಯೋಜನೆಯನ್ನು ಒಂದು ವರ್ಷದೊಳಗೆ ಮುಗಿಸಬೇಕಾಗಿರುವುದರಿಂದ ಕಾಮಗಾರಿಯನ್ನು 3 ಹಂತಗಳಲ್ಲಿ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರೂಪುರೇಷಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ನೀರಿನ ಶುದ್ಧೀಕರಣಕ್ಕೆ ಯಂತ್ರ ಅಳವಡಿಸುವುದು ಮೊದಲನೇ ಹಂತದ ಕೆಲಸವಾಗಿದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

'ಪೈಪ್‌ ಲೈನ್ ಅಳವಡಿಕೆ ಮಾಡುವುದು, ಆಯ್ದ ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ಎರಡು ಮತ್ತು ಮೂರನೇ ಹಂತದ ಕೆಲಸಗಳಾಗಿವೆ. ಚಲ್ಲಘಟ್ಟ ಸಂಸ್ಕರಣ ನೀರನ್ನು ಕೋಲಾರಕ್ಕೆ ಹರಿಸುವ ಕಾಮಗಾರಿಯು ಪ್ರಗತಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ನೀರಿನ ಶುದ್ಧೀಕರಣ ಯಂತ್ರ ಅಳವಡಿಕೆಯ ಸ್ಥಳಕ್ಕೆ ಹಾಗೂ ಪೈಪ್ ಲೈನ್ ಮೂಲಕ ನೀರು ಬರುವ ಜಾಗಗಳನ್ನು ಭೇಟಿ ನೀಡಿ ಪರಿಶೀಲಿಸಲಾಗಿದೆ' ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.

ಏನಿದು ಯೋಜನೆ? : ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ ಹಾಗೂ ಬೆಳ್ಳಂದೂರಿನ ನೀರು ಸಂಸ್ಕರಣಾ ಘಟಕದಿಂದ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ಕೆರೆಗಳಿಗೆ ಹರಿಸಿ, 126 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅಂದಾಜು ಮೊತ್ತು ಸುಮಾರು 148 ಕೋಟಿ.

English summary
Kolar Deputy commissioner K.V. Thrilokchandra said KC Valley project (Koramangala-Challaghatta) work will begin on July 11, 2016 and the aim is to complete it by August 2017. Under the project sewage water from the Koramangala, Challaghatta and Bellandur in Bengaluru will be pumped to fill tanks in Kolar and Chikkaballapur districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X