Anna Bhagya: 22 ಲಕ್ಷ ಕುಟುಂಬಗಳಿಗೆ ಸಿಗದು ತಲಾ 170 ರೂ, ಇದರಲ್ಲಿ ನೀವಿದ್ದೀರಾ? ತಿಳಿಯಿರಿ

ಬೆಂಗಳೂರು, ಜುಲೈ 10: ರಾಜ್ಯದಲ್ಲಿರುವ ಒಟ್ಟು ಅರ್ಹ ಬಡತನ ರೇಖೆಗಿಂತ ಕೆಳಗಿರುವ (BPL) ಫಲಾನುಭವಿಗಳಿಗೆ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯ ಲಾಭ ದೊರೆಯಲಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ, ಇದರಲ್ಲಿ ಲಕ್ಷಾಂತರ ಕುಟುಂಬಗಳು ಯೋಜನೆ ಅನರ್ಹ ಎನ್ನಲಾಗುತ್ತಿದೆ. ಅದರ ಕಾರಣವನ್ನು ಸರ್ಕಾರವೇ ಅಧಿಕೃತವಾಗಿ ತಿಳಿಸಿದೆ.

ಅನ್ನಯಭಾಗ್ಯ ಯೋಜನೆಯಡಿ 4 ಕೋಟಿಗೂ ಅಧಿಕ ಬಿಪಿಎಲ್ ಫಲಾನುಭವಿಗಳಿಗೆ ಸರ್ಕಾರ ತಲಾ 10 ಕೇಜಿ ಅಕ್ಕಿ ಪೂರೈಸುವುದಾಗಿ ಭರವಸೆ ನೀಡಿತ್ತು. ಇದರಲ್ಲಿ ಅಕ್ಕಿ ಕೊರೆತೆ ಹಿನ್ನೆಲೆ ಐದು ಕೆ.ಜಿ ಮಾತ್ರವೇ ಪೂರೈಸಿ, ಇನ್ನೈದು ಕೇಜಿ ಅಕ್ಕಿಯ ಹಣವನ್ನು ಅರ್ಹರ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಆದರೆ BPL ಕಾರ್ಡುದಾರರ ಪೈಕಿ ಸುಮಾರು 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆಗಳನ್ನೇ ಹೊಂದಿಲ್ಲ ಎಂದು ತಿಳಿದು ಬಂದಿದೆ. ಈ ಕಾರಣ ಕರ್ನಾಟಕ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ತಕ್ಷಣವೇ ಪ್ರಯೋಜನಗಳನ್ನು ಪಡೆಯುವುದಿಲ್ಲ ಎಂದು ಸರ್ಕಾರ ಹೇಳಿದೆ.

Karnatakas 22 Lakh Families Not Eligible For Get Immediately Cash Under Anna Bhagya Scheme

ಸದ್ಯ ಬಿಪಿಎಲ್ ಕಾರ್ಡುದಾರರು ತಲಾ ಐದು ಕೇಜಿ ಅಕ್ಕಿ ಪಡೆಯುತ್ತಿದ್ದಾರೆ. ಅವರಿಗೆ ಹೆಚ್ಚುವರಿಯಾಗಿ ನೀಡುವ ಐದು ಕೇಜಿ ಅಕ್ಕಿ ಬದಲಾಗಿ ಅರ್ಹರ ಖಾತೆ ಹಣ ಜಮೆ ಮಾಡುವ ಪ್ರಕ್ರಿಯೆಗೆ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆ ಇದೆ. ಐದು ಕೇಜಿ ಅಕ್ಕಿ ಯೋಜನೆಯ ಲಾಭವನ್ನು ಸರ್ಕಾರ ಡಿಬಿಟಿ (ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ) ಮೂಲಕ ಒದಗಿಸಲಿದೆ.

ಲಿಂಕ್ ಆಗದವರಿಗೆ ಹಣ ಸದ್ಯಕ್ಕಿಲ್ಲ

ಇನ್ನೂ ಅಂತ್ಯೋದಯ ಅನ್ನ ಯೋಜನೆಯಡಿ ಕರ್ನಾಟಕದಲ್ಲಿ ನೋಂದಾಯಿಸಿಕೊಂಡು ಒಟ್ಟು 1.28 ಕೋಟಿ ಪಡಿತರ ಚೀಟಿಗಳಲ್ಲಿ 99 ಪ್ರತಿಶತದಷ್ಟು ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ (ಸೀಡ್) ಮಾಡಲಾಗಿದೆ. 1.28 ಕೋಟಿ ಪಡಿತರಲ್ಲಿ 1.06 ಕೋಟಿ (ಶೇಕಡಾ 82) ಅರ್ಹರು ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಲಾಗಿದೆ.

Karnatakas 22 Lakh Families Not Eligible For Get Immediately Cash Under Anna Bhagya Scheme

ಹೀಗೆ ಬ್ಯಾಂಕ್ ಖಾತೆ, ಆಧಾರ್ ಪಡಿತರ ಲಿಂಕ್ ಇರುವವರಿಗೆ ಹಣ ಜಮೆ ಮಾಡಲಾಗುವುದು. ಇನ್ನುಳಿದವರಿಗೆ ಹೊಸ ಖಾತೆಗಳನ್ನು ತೆರೆಯಲು ಸರ್ಕಾರ ತಿಳಿಸುತ್ತದೆ ಎಂದು ಅಧಿಕೃತ ಹೇಳಿಕೆ ಹೇಳುತ್ತದೆ.

ಒಟ್ಟು 1.27 ಕೋಟಿ ಪಡಿತರ ಚೀಟಿಗಳು ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರಾಗಿ (HoH) ನೇಮಿಸಲಾಗಿದೆ.ಅವರಲ್ಲಿ 94 ಪ್ರತಿಶತ ಮಹಿಳೆಯರು ಮತ್ತು ಐದು ಪ್ರತಿಶತ ಪುರುಷರು ಎಂದು ವಿಭಜಿಸಲಾಗಿದೆ. ಈ ಮುಖ್ಯಸ್ಥನ ಬ್ಯಾಂಕ್ ಖಾತೆಗಳಿಗೆ ಯೋಜನೆಯ ಹೆಚ್ಚುವರಿಗೆ ಅಕ್ಕಿಯ ಹಣ ತಲಾ 170 ರೂಪಾಯಿಯನ್ನು ನೇರವಾಗಿ ವರ್ಗಾಯಿಸಲಾಗುತ್ತದೆ.

ಹೆಚ್ಚುವರಿಗೆ ಅಕ್ಕಿಗೆ ಪೂರೈಕೆಗೆ ಎದುರಾದ ಕೊರತೆ

ಮುಖ್ಯಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹಾತ್ವಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಗೆ ಘೋಷಿಸಿದ್ದ ಹೆಚ್ಚುವರಿ ಐದು ಅಕ್ಕಿ ಪೂರೈಕೆಗೆ ಅಕ್ಕಿ ಲಭ್ಯವಾಗಿಲ್ಲ. ಹೀಗಾಗಿ ಕೊರತೆ ಎದುರಿಸುತ್ತಿರುವುದರಿಂದ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ನಗದು ನೀಡಲು ಕಳೆದ ವಾರ ಸರ್ಕಾರ ನಿರ್ಧರಿಸಿದೆ.

ರಾಜ್ಯದ ಸರ್ಕಾರ ಕೇಂದ್ರದೊಂದಿಗೆ ಈ ಹಿಂದೆ ಮಾತನಾಡಿತ್ತು. ಮನವಿ ಮೇರೆಗೆ ಹೆಚ್ಚುವರಿ ಅಕ್ಕಿ ಪೂರೈಸಲು ಮೊದಲು ಒಪ್ಪಿಗೆ ನೀಡಿದ್ದ ಕೇಂದ್ರ ಬಿಜೆಪಿ ನಂತರ ಕೈ ಚೆಲ್ಲಿತು. ಹೀಗಾಗಿ ಅನ್ನಭಾಗ್ಯ ಯೋಜನೆಯಡಿ ಸಿಗಬೇಕಿದ್ದ ಹೆಚ್ಚುವರಿ ಅಕ್ಕಿ ಸಿಗುತ್ತಿಲ್ಲ. ಈ ವಿಚಾರದಲ್ಲಿ ಕೇಂದ್ರವು ಸೇಡಿನ ರಾಜಕಾರಣ ಮಾಡುತ್ತಿ, ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುವ ಜೊತೆಗೆ ಬಡವರ ವಿರೋಧ ನಿಲುವು ತಾಳಿದೆ ಎಂದು ರಾಜ್ಯದ ಸಿಎಂ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು.

ಪ್ರತಿ ಕಿಲೋಗೆ ₹34 ನಂತೆ ಫಲಾನುಭವಿಗಳ ಖಾತೆಗೆ ನಗದು ಜಮಾ ಮಾಡಲಾಗುತ್ತದೆ. 15 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮುನಿಯಪ್ಪ ಭರವಸೆ ನೀಡಿದ್ದರು. ಈ ಯೋಜನೆಯು 4.41 ಕೋಟಿ ಫಲಾನುಭವಿಗಳನ್ನು ತಲುಪುವ ನಿರೀಕ್ಷೆಯಿದೆ. j

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+