ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ಗೆದ್ದವರು ಬಿದ್ದವರು, ಎಲ್ರೂ ನಮ್ಮವರೇ!

By ಎಲೆಕ್ಷನ್ ಡೆಸ್ಕ್
|
Google Oneindia Kannada News

ಬೆಂಗಳೂರು, ಫೆ. 23: ಮುಂದಿನ ವಿಧಾನಸಭೆ ಚುನಾವಣೆಗೆ ಮುನ್ನಡಿ ಬರೆಯಲಿರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಕುಟುಂಬ ರಾಜಕೀಯದ ಮೂಲಕ ರಾಜಕಾರಣಗಳ ಸಂತತಿ ಈ ಬಾರಿ ಇನ್ನಷ್ಟು ವೃದ್ಧಿಸಿದೆ.

ಹಾಲಿ, ಮಾಜಿ ಶಾಸಕ, ಸಚಿವ, ಸಂಸದರ, ಮುಖ್ಯಮಂತ್ರಿಗಳ ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಹೆಂಡತಿ, ಗಂಡ, ಅಕ್ಕ, ತಂಗಿ, ಸೋದರ ಮಾವ, ಮೊಮ್ಮಗ, ಸೋದರ ಸಂಬಂಧಿಗಳು ಕಣದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ, ಬಿಜೆಪಿಯ ತಂತ್ರಗಾರಿಕೆ, ಎಚ್ ಡಿ ಕುಮಾರಸ್ವಾಮಿ ಅವರ ಕಿಂಗ್ ಮೇಕರ್ ಸ್ಥಾನಕ್ಕೆ ಭಾರಿ ಪೆಟ್ಟು ನೀಡುವಂಥ ಸ್ಥಿತಿಯನ್ನು ರಿಸಲ್ಟ್ ಬೋರ್ಡ್ ತೋರಿಸುತ್ತಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಿಗೆ ಫೆಬ್ರವರಿ 13, 20ರಂದು ಚುನಾವಣೆ ನಡೆದಿತ್ತು. [ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ LIVE]

ಈ ಹಿಂದಿನ ಬಲಾಬಲ : ಕಾಂಗ್ರೆಸ್ 07; ಬಿಜೆಪಿ 12; ಜೆಡಿಎಸ್ 3; ಅತಂತ್ರ 8.
ಈಗಿನ ಫಲಿತಾಂಶ : 30 ಜಿಲ್ಲೆಗಳ ಒಟ್ಟು 1083 ಸ್ಥಾನಗಳ ಫಲಿತಾಂಶ ಹೊರ ಬಂದಿದ್ದು, 30 ಜಿಲ್ಲೆಗಳಲ್ಲಿ ಕಾಂಗ್ರೆಸ್ 11 (+4), ಬಿಜೆಪಿ 07 (-5), ಜೆಡಿಎಸ್ 02 (-1), ಇತರೆ 10 (+2) ಸ್ಥಾನ ಗೆದ್ದಿರುವುದು ಸರ್ವತಂತ್ರ ಅತಂತ್ರ ಗಣತಂತ್ರವಾಗಿ ಕಾಣಿಸುತ್ತಿದೆ. [ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ LIVE]

Karnataka Zilla Panchayat

ರಾಜಕೀಯದ ಹೊಸ ಕುಡಿಗಳ ಪಟ್ಟಿ ನೋಡಿ:

* ಹಾಸನದ ಹಳೆಕೋಟೆ ಜಿ.ಪಂ: ಶಾಸಕ ಎಚ್. ಡಿ ರೇವಣ್ಣ ಅವರ ಪತ್ನಿ, ಜೆಡಿಎಸ್ ಅಭ್ಯರ್ಥಿ ಭವಾನಿ ರೇವಣ್ಣ ಅವರಿಗೆ ಜಯ

* ಕೋಲಾರ-ವಂಡಾರಹಳ್ಳಿ: ಶಾಸಕಿ ವೈ ರಾಮಕ್ಕ ಅವರ ಮೊಮ್ಮಗಳು ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಗಿಗೆ ಜಯ

* ದಾವಣಗೆರೆ-ಹೊಸಕೆರೆ ಜಿ.ಪಂ : ಮಾಜಿ ಸಿಎಂ ಜೆ.ಎಚ್ ಪಟೇಲ್ ಅವರ ಮೊಮ್ಮಗ ತೇಜಸ್ವಿ ಪಟೇಲ್ (ಪಕ್ಷೇತರ)ಗೆ ಜಯ

* ಚಿಕ್ಕಬಳ್ಳಾಪುರ : ಶಾಸಕ ಸುಧಾಕರ್ ಅವರ ತಂದೆ, ಕಾಂಗ್ರೆಸ್ ಅಭ್ಯರ್ಥಿ ಕೇಶವರೆಡ್ಡಿ ಭರ್ಜರಿ ಜಯ.

* ದಾವಣಗೆರೆ ನ್ಯಾಮತಿ: ಮಾಜಿ ಸಚಿವ ರೇಣುಕಾಚಾರ್ಯ ಅವರ ಸಹೋದರನ ಪತ್ನಿ ಬಿಜೆಪಿಯ ಉಮಾ ರಮೇಶ್ ಗೆ ಜಯ.

* ಚಿಕ್ಕಮಗಳೂರು, ಆಲ್ದೂರು ಜಿಪಂ: ಜೆಡಿಎಸ್‍ ಶಾಸಕ ಬಿಬಿ ನಿಂಗಯ್ಯ ಅವರ ಪುತ್ರ ನಿಖಿಲ್ ಚಕ್ರವರ್ತಿ ಗೆಲುವು

* ಶಿವಮೊಗ್ಗ, ಹಾವಿನಹಳ್ಳಿ ಜಿಪಂ : ಸ್ಪೀಕರ್ ಕಾಗೋಡು ಅವರ ತಮ್ಮ ಕಾಂಗ್ರೆಸ್ಸಿನ ಕಾಗೋಡು ಅಣ್ಣಾಜಿಗೆ ಗೆಲುವು

* ಮಂಡ್ಯ, ಚಿನಕುರಳಿ ಜಿಪಂ: ಜೆಡಿಎಸ್ ನ ಅಶೋಕ್ (ಪುಟ್ಟರಾಜು ಅಣ್ಣನ ಮಗ) ಗೆಲುವು

* ಹಾವೇರಿ ಜಿಲ್ಲೆ ಹೀರೂರು ಜಿಪಂ: ರಾಘವೇಂದ್ರ ತಹಸೀಲ್ದಾರ್(ಸಚಿವ ಮನೋಹರ್ ತಹಸೀಲ್ದಾರ್) ಗೆ ಜಯ

* ಮೈಸೂರು ಬಿರಿಹುಂಡಿ ಜಿಪಂ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೋದರ ಸಂಬಂಧಿ ಕಾಂಗ್ರೆಸ್ಸಿನ ಕೆಂಚಪ್ಪಗೆ ಸೋಲು

* ಬಾಗಲಕೋಟೆ ದನ್ನೂರು ಜಿಪಂ : ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಗೆ ಜಯ

* ಶಿವಮೊಗ್ಗ, ಹೊಳಲೂರು: ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮಗ ಕೆ.ಇ.ಕಾಂತೇಶ್‌ಗೆ ಜಯ

* ಹೊಸಪೇಟೆ ಹಂಪಿನಗರ ಜಿ.ಪಂ : ಮಾಜಿ ಸಚಿವ ಆನಂದ್ ಸಿಂಗ್ ಸಂಬಂಧಿ ಪ್ರವೀಣ್ ಸಿಂಗ್ ಗೆ ಗೆಲುವು

* ಬಳ್ಳಾರಿ ರೂಪನಗುಡಿ ಜಿ.ಪಂ: ಅಲ್ಲಂ ವೀರಭದ್ರಪ್ಪ ಅವರ ಪುತ್ರ ಅಲ್ಲಂ ಪ್ರಕಾಶ್ ಗೆ ಗೆಲುವು.

* ಶಾಸಕ ಕೆ.ಎಚ್ ಕುಮಾರಸ್ವಾಮಿ ಪತ್ನಿ ಚಂಚಲ ಗೆಲುವು.

* ಬಾಗಲಕೋಟೆ: ಶಾಸಕ ಎಚ್.ವೈ.ಮೇಟಿ ಅವರ ಪುತ್ರಿ ಗಂಗೂಬಾಯಿ ಮೇಟಿಗೆ ಜಯ.

* ಮಧುಗಿರಿ ಶಾಸಕ ರಾಜಣ್ಣ ಪತ್ನಿಗೆ ಗೆಲುವು.

* ಮೈಸೂರಿನ ಕೆ..ಆರ್. ನಗರ ತಾಲ್ಲೂಕಿನ ಭೇರ್ಯ ಕ್ಷೇತ್ರ : ಮಾಜಿ ಸಚಿವ ಎಚ್ ವಿಶ್ವನಾಥ್ ಪುತ್ರ ಅಮೀತ್ ಗೆ ಜಯ.

* ಕೊಪ್ಪಳ ಸಂಸದ ಕರಡಿ ಸಂಗಣ್ಣ ಪುತ್ರ ಗವಿಸಿದ್ದಪ್ಪ ಕರಡಿ ಲೇಬಗೇರಿ ಕ್ಷೇತ್ರದಿಂದ ಗೆಲುವು.

* ಸಚಿವ ಎಚ್ ಆಂಜನೇಯ ಅವರ ಸೊಸೆ ಸವಿತಾಗೆ ತಾಳ್ಯ ಜಿಪಂ ಕ್ಷೇತ್ರದಿಂದ ಜಯ.

* ಸಚಿವ ಎ.ಮಂಜು ಪುತ್ರ ಮಂಥರ್ ಗೌಡಗೆ ಜಯ.

KH Muniyappa


ಹಾಲಿ ಮಾಜಿ ಶಾಸಕ ಮತ್ತು ಸಚಿವರ ಸಂಬಂಧಿಗಳು ಪರಾಭವ.

* ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಪುತ್ರಿ ರೂಪಗೆ ಸೋಲು.

* ದಾವಣಗೆರೆ-ಹರಪನಹಳ್ಳಿ-ಕಂಚಿಕೆರೆ : ಸಚಿವ ಪಿಟಿ ಪರಮೇಶ್ವರ್ ನಾಯಕ್ ಪುತ್ರನಿಗೆ ಸೋಲು, ಬಿಜೆಪಿಯ ಸಿದ್ದಪ್ಪಗೆ ಗೆಲುವು

* ಮಾಜಿ ಸಿಎಂ ಧರಂಸಿಂಗ್ ಅಣ್ಣನ ಮಗ ಸಂಜಯ್ ಸಿಂಗ್ ಗೆ ಸೋಲು.

* ಶಾಸಕ ರಾಜಾ ವೆಂಕಟಪ್ಪ ಪುತ್ರ ವೇಣುಗೋಪಾಲ್ ಗೆ ಸೋಲು.

* ಶಾಸಕ ಮಾಲೀಕಯ್ಯ ಗುತ್ತೇದಾರ್ ಸಹೋದರ ಮಾಜಿ ಕಲಬುರಗಿ ಜಿಪಂ ಅಧ್ಯಕ್ಷ ನಿತೀನ್ ಗುತ್ತೇದಾರ್ ಗೆ ಸೋಲು.

* ಗುಬ್ಬಿ ಶಾಸಕ ಶ್ರೀನಿವಾಸನ್ ಅವರ ಹೆಂಡತಿಗೆ ಸೋಲು.

* ತುಮಕೂರು ಜೆಡಿಎಸ್ ಶಾಸಕ ಡಿ.ನಾಗರಾಜ ಪುತ್ರ ರವಿ ಮತ್ತು ಪುತ್ರಿ ವಿಶಾಲಗೆ ಸೋಲು.

* ಎಮ್ ಎಲ್ ಸಿ ಸಿಎಂ ಇಬ್ರಾಹಿಂ ಸಹೋದರ ಸಾಧಿಕ್ ಗೆ ಸೋಲು.

* ಬಾಗೂರು ಜಿಪಂ ಕ್ಷೇತ್ರ: ಶಾಸಕ ಬಾಲಕೃಷ್ಣ ಅವರ ಪತ್ನಿ ಕುಸುಮಾಗೆ ಸೋಲು

* ಲಿಂಗಸೂರು ಶಾಸಕ ಮಾನಪ್ಪ ವಜ್ಜಲ್ ಸಹೋದರನಿಗೆ ಸೋಲು.

* ಮೈಸೂರು: ಹುಣಸೂರು ತಾಲ್ಲೂಕು ಬಿಳಿಕೆರೆ ಕ್ಷೇತ್ರ: ಶಾಸಕ ಜಿ.ಟಿ ದೇವೆಗೌಡ ಪತ್ನಿ ಲಲಿತಾಗೆ ಸೋಲು

* ಶಾಸಕ ಅನೀಲ್ ಲಾಡ್ ಸಹೋದರ ಪುತ್ರನಿಗೆ ಸೋಲು.

* ಯಲಹಂಕ ಶಾಸಕ ವಿಶ್ವನಾಥ್ ಪತ್ನಿ ವಾಣಿಶ್ರಿಗೆ ಸೋಲು.

* ಶಿವಮೊಗ್ಗ ಶಾಸಕಿ ಶಾರದಾ ಪೂರ್ಯ ನಾಯಕ್ ಪುತ್ರ ದೀಪಕ್ ನಾಯಕ್ ಗೆ ಸೋಲು.

* ಔರದ್ ಶಾಸಕ ಪ್ರಭು ಚವಾಣ್ ಪುತ್ರ ಮಾರುತಿ ಚವಾಣ್ ಗೆ ಸೋಲು.

* ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿಗೆ ಮುಷ್ಠಿಗೇರಿ ಜಿ.ಪಂ ಕ್ಷೇತ್ರದಲ್ಲಿ ಸೋಲು

* ದಕ್ಷಿಣ ಕನ್ನಡ ಜಿ.ಪಂ: ಸಜಿಪಮುನ್ನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿಗೆ ಸೋಲು.

English summary
Karnataka Zilla Panchayat election results 2016. Prominent winners and Losers. Husband, Wife, SIL, MIL, FIL, Uncle, Son, Daughter, Grand Son, Brothers and Sisters. ALL in the family. Results of 30 ZPs declared. ZP Stand : Congress 11(+4), BJP 08 (-4), JDs 02(-1), Others 9 (+1)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X