ಮಹದಾಯಿ ಹೋರಾಟ : ರೈತರ ಬಿಡುಗಡೆಗೆ ಆಗ್ರಹ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಗದಗ, ಆಗಸ್ಟ್ 08 : ಮಹದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಹೋರಾಟ ನಡೆಸಿದ ರೈತರನ್ನು ಬಂಧಿಸಿರುವುದು ಖಂಡನಾರ್ಹ, ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಯುವಶಕ್ತಿ ವೇದಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ಗದಗದಲ್ಲಿ ಸೋಮವಾರ ಪತ್ರಿಭಟನೆ ನಡೆಸಿದ ಮಾತನಾಡಿದ ವೇದಿಕೆಯ ಉಪಾಧ್ಯಕ್ಷ ಮುತ್ತಣ್ಣ ಸಿ. ಅನವಾಲ ಅವರು, 'ಮಹದಾಯಿಯ ವಿಚಾರದಲ್ಲಿ ನ್ಯಾಯಾಲಯದಲ್ಲಿ ತೀರ್ಪು ಕರ್ನಾಟಕ ಪರವಾಗುತ್ತದೆ ಎಂಬ ಆಶಾಭಾವನೆಯಿಂದ ಕಾದಿದ್ದ ನಮ್ಮವರು ತೀರ್ಪಿನಲ್ಲಿ ನಮಗೆ ಅನ್ಯಾಯ ಆದ ಬಳಿಕ ಮನನೊಂದು ನಡೆಸಿದ ಹೋರಾಟದಲ್ಲಿ ಕೆಲ ಕಿಡಿಗೇಡಿಗಳು ಗೊಂದಲವನ್ನು ಸೃಷ್ಠಿಸಿ ಅನಾಹುತಗಳನ್ನು ಮಾಡಿದ್ದಾರೆ' ಎಂದರು.[ಮಹದಾಯಿ: ಸರ್ವಪಕ್ಷಗಳ ಸಭೆ ತೆಗೆದುಕೊಂಡ ನಿರ್ಧಾರವೇನು?]

kalasa banduri

'ಹೋರಾಟದ ಸಮಯದಲ್ಲಿ ಜನತೆಯನ್ನು ಬಲಿಪಶು ಮಾಡಲಾಗಿದೆ. ರೈತರು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಹಿಂದೂಪರ ಸಂಘಟನೆ ಹಾಗೂ ವಿದ್ಯಾರ್ಥಿಗಳು ಸ್ವಾರ್ಥ ರಹಿತವಾಗಿ ಹೋರಾಟ ಮಾಡಿದ್ದಾರೆ' ಎಂದರು.[ಮಹದಾಯಿ ಹೋರಾಟ : ರೈತರ ಬಿಡುಗಡೆ ಬಗ್ಗೆ ಆ.10ರಂದು ತೀರ್ಮಾನ]

'ಈ ಸರ್ಕಾರದ ಆಡಳಿತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ತಮ್ಮ ವೈಯಕ್ತಿಕ ವೈಷಮ್ಯವನ್ನು ಇಲ್ಲಿ ಸಮಾಜಘಾತಕರು, ಹೋರಾಟಗಾರ ಮೇಲೆ ಅಮಾಯಕರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಜನಸ್ನೇಹಿಯಾದ ಪೊಲೀಸ್ ಮತ್ತು ಜನತೆ ಮಧ್ಯೆ ಗಲಭೆ ಎಬ್ಬಿಸುತ್ತಿದ್ದಾರೆ' ಎಂದು ಆರೋಪಿಸಿದರು.[ಯಮನೂರು ರೈತರಿಗೆ ಸಾಂತ್ವನ ಹೇಳಿದ ವಾಟಾಳ್ ನಾಗರಾಜ್]

kalasa banduri2

ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಅಂಬಿಗೇರ, ಪ್ರಧಾನ ಕಾರ್ಯದರ್ಶಿ ರುಸ್ತುಂ ಚಳಗೇರಿ, ಬಸವರಾಜ ಕುದರಿ, ಸಂಘಟನೆಯ ಮಹಿಳಾ ಮುಖಂಡರಾದ ಮಂಜುಳಾ ಕಲಕೇರಿ, ಶೋಭಾ ಕೊಪ್ಪನ್ನವರ, ಕವಿತಾ, ಉಮಾ, ಖಲಂದರ ಖಾಜಿ, ಮಹೇಶ ಹೊಸಳ್ಳಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Yuva shakti vedike demand justice and freedom to farmers who arrested during the protest against Mahadayi tribunal order.
Please Wait while comments are loading...