ಚನ್ನಪಟ್ಟಣದ ಗೊಂಬೆ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಬಹುಮಾನ
ಬೆಂಗಳೂರು, ಜ.30 : ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಕುರಿತ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ. ಮಹಾರಾಷ್ಟ್ರಕ್ಕೆ ಮೊದಲ ಮತ್ತು ಛತ್ತೀಸ್‌ಗಢ ರಾಜ್ಯಕ್ಕೆ ಎರಡನೇ ಬಹುಮಾನ ಸಿಕ್ಕಿದೆ.
ಜನವರಿ 31ರಂದು ನಡೆಯುವ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಬಹುಮಾನಗಳನ್ನು ವಿತರಣೆ ಮಾಡಲಿದ್ದಾರೆ. ಚನ್ನಪಟ್ಟಣದ ಸ್ತಬ್ಧಚಿತ್ರದಲ್ಲಿ 4ರಿಂದ 10 ಅಡಿಗಳ ಎತ್ತರದ ಒಟ್ಟು 42 ಬೊಂಬೆಗಳು ಮತ್ತು ಆಟಿಕೆಗಳನ್ನು ಅಳವಡಿಸಲಾಗಿತ್ತು. 4 ಬೊಂಬೆಗಳು ಬ್ಯಾಟರಿ ನೆರವಿನಿಂದ ತಿರುಗುತ್ತಿದ್ದವು. [ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರ ನೋಡಿ]

ಮಹಾರಾಷ್ಟ್ರ ರಾಜ್ಯ ನಿರ್ಮಿಸಿದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಫಂಡರಾಪುರದ ಯಾತ್ರೆ ಕುರಿತು ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಮತ್ತು ಛತ್ತೀಸ್‌ಗಢ ರಾಜ್ಯದ ಮಾಲೂತಿ ದೇವಸ್ಥಾನಗಳ ಕುರಿತ ಸ್ತಬ್ಧಚಿತ್ರಕ್ಕೆ ಎರಡನೆಯ ಬಹುಮಾನ ದೊರೆತಿದೆ. [ಚಿತ್ರಗಳಲ್ಲಿ ನೋಡಿ : ಒಬಾಮಾ ಭಾರತ ಭೇಟಿ ಮೊದಲ ದಿನ]
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳೂ ಸೇರಿದಂತೆ ಒಟ್ಟು 25 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಅವರು ಈ ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿದ್ದರು. [ಗಣತಂತ್ರ ದಿನ ಸಂಭ್ರಮದಲ್ಲಿ ಒಬಾಮಾ, ಮೋದಿ]
ಚನ್ನಪಟ್ಟಣದ ಬೊಂಬೆಗಳ ಸ್ತಬ್ಧ ಚಿತ್ರ ಮಕ್ಕಳ ಲೋಕವನ್ನು ಪ್ರತಿಬಿಂಬಿಸಿತ್ತು. 42 ಬೊಂಬೆ ಹಾಗೂ ಆಟಿಕೆಗಳು ಈ ಸ್ತಬ್ಧದ ಜೊತೆಗೆ ಕನ್ನಡದ ಜನಪ್ರಿಯ ಶಿಶುಗೀತೆ 'ಆನೆ ಬಂತೊಂದಾನೆ' ಗೀತೆಯ ಸಾಲುಗಳ ಸಂಗೀತವೂ ಬಿತ್ತರಗೊಂಡಿತ್ತು. ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ರಾವ್ ಅವರು ಈ ಸಂಗೀತ ಸಂಯೋಜನೆ ಮಾಡಿದ್ದರು.

ಅಂದಾಗೆ 2014ರಲ್ಲಿ ಕರ್ನಾಟಕದ ಟಿಪ್ಪು ಸುಲ್ತಾನ್ ಕುರಿತ ಸ್ತಬ್ಧಚಿತ್ರ, 2013ರಲ್ಲಿ ಕಿನ್ನಾಳ ಕಲೆಯ ಸ್ತಬ್ಧಚಿತ್ರ, 2012ರಲ್ಲಿ ದಕ್ಷಿಣ ಕನ್ನಡದ ಭೂತಾರಾಧನೆಯ ಸ್ತಬ್ಧಚಿತ್ರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು.
-
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications