ಮಳೆ.. ಮಳೆ.. ಮುಂದಿನ 24 ಗಂಟೆ ಭಾರಿ ಭರ್ಜರಿ ಮಳೆ!
ಕರ್ನಾಟಕದಲ್ಲಿ ಭರ್ಜರಿ ಮಳೆ ಬೀಳುತ್ತಿದ್ದು, ಕರ್ನಾಟಕದ ಜಲಾಶಯಗಳಿಗೆ ಕೂಡ ಭರ್ಜರಿ ನೀರು ಹರಿದು ಬರುತ್ತಿದೆ. ಹೀಗಾಗಿ ಕರ್ನಾಟಕದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಇದೇ ಸಮಯದಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಭಾರಿ ಮಳೆ ಬೀಳಲಿದೆ? ಮುಂದೆ ಓದಿ.
ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ, ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನೆಂದರೆ ಕರ್ನಾಟಕದಲ್ಲಿ ಮಳೆ ಭಾರಿ ಆರ್ಭಟ ತೋರಿಸುತ್ತಿದ್ದು ಇದರ ಜೊತೆಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ಅಬ್ಬರ ಪರಿಣಾಮ ಈಗಾಗಲೇ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಕೂಡ ಬರುತ್ತಿದೆ.

ಇದೇ ಸಮಯದಲ್ಲಿ ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ ಮಳೆ ಬೀಳಿದೆ ಎಂದು ಇದೀಗ ವಾರ್ನಿಂಗ್ ಕೊಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಮಳೆ ಸುರಿಯಲಿದೆ? ಭಾರಿ ಮಳೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಜಿಲ್ಲೆಗಳು ಯಾವುವು? ಬನ್ನಿ ಈ ಬಗ್ಗೆ ಮಾಹಿತಿ ಮುಂದೆ ತಿಳಿಯೋಣ.
ಯಾವೆಲ್ಲಾ ಜಿಲ್ಲೆಗೆ ಮಳೆ ಎಂಟ್ರಿ?
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಲೆನಾಡು, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಮಳೆ ಅಬ್ಬರ ಹಲವು ಅವಾಂತರ ಸೃಷ್ಟಿ ಮಾಡುವ ಆತಂಕವು ಆವರಿಸಿದೆ.
ಬೆಂಗಳೂರಿನಲ್ಲೂ ಭಾರಿ ಮಳೆ!
ಬೆಂಗಳೂರಿಗೂ & ಭರ್ಜರಿ ಮಳೆಗೂ ಭಾರಿ ನಂಟು ಇದೆ. ಹೀಗಾಗಿಯೇ ಪ್ರತಿಬಾರಿ ಮಳೆ ಆಗಮನ ಆದಾಗಲೂ ಬೆಂಗಳೂರಲ್ಲಿ ವರುಣದೇವ ಅಬ್ಬರಿಸುತ್ತಾನೆ. 2024ರಲ್ಲೂ ಹೀಗೆ ಭರ್ಜರಿ ಮಳೆಯ ಸಿಂಚನ ಬೆಂಗಳೂರಿಗೆ ಆಗಲಿದೆ. ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸಲಿದ್ದಾನೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಭಾರಿ ಮಳೆ ಬಗ್ಗೆ ಎಚ್ಚರಿಕೆ ವಹಿಸಿ. ಹಾಗೇ ಹೊರ ಹೋಗುವ ಸಮಯದಲ್ಲಿ ತಪ್ಪದೆ ಕೊಡೆ ತೆಗೆದುಕೊಂಡು ಹೋಗಿ. ಭಾರಿ ಗಾಳಿ & ಮಳೆ ಬೀಳು ವೇಳೆ, ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಕೆಳಗೆ ನಿಲ್ಲಬೇಡಿ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗಲಿದೆ. ಹಾಗೇ ಕಾಂಪೌಂಡ್ ಪಕ್ಕ ಹೋಗುವಾಗ ಕೂಡ ಎಚ್ಚರಿಕೆ ವಹಿಸಿ.












Click it and Unblock the Notifications