Get Updates
Get notified of breaking news, exclusive insights, and must-see stories!

Karnataka weather: ಕೊರೆಯುವ ಚಳಿಯ ನಡುವೆಯೂ ಈ ಜಿಲ್ಲೆಗಳಲ್ಲಿ ಹೊಸ ವರ್ಷದಂದು ಭಾರೀ ಮಳೆ ಮುನ್ಸೂಚನೆ

ಕರ್ನಾಟಕ, ಡಿಸೆಂಬರ್, 31: ಇದೀಗ ರಾಜ್ಯದಲ್ಲಿ ಮಳೆಗಾಲ ಮುಗಿದಿದ್ದು, ಚಳಿಗಾರ ಎಂಟ್ರಿ ಕೊಟ್ಟಿದೆ. ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆಯಾದರೂ ಮಂಜು ಮುಸುಕಿದ ವಾತಾವರಣವೇ ಇರಲಿದ್ದು, ಇದರಿಂದ ಜನರು ಮೈಬೆಚ್ಚಗೆ ಮಾಡಿಕೊಳ್ಳಲು ಸೌದೆ ತಂದು ಬೆಂಕಿ ಕಾಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ನಡುವೆಯೂ 2024 ಜನವರಿ 1 ಅಂದರೆ ಹೊಸವರ್ಷದಂದೇ ಹಲವು ಜಿಲ್ಲೆಗಳಲ್ಲಿ ವರುಣನ ಆಗಮನ ಆಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಹೊಸವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಹಾಗೆಯೇ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಹವಾಮಾನದಲ್ಲಿಯೂ ಬದಲಾವಣೆ ಆಗುವ ಸಾಧ್ಯೆತೆಯಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಂದು ಮಳೆರಾಯನ ಆಗಮನ ಆಗಲಿದೆ ಅಂತಲೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka weather: Heavy rainfall forecast in these districts of state On January 1

ಜನವರಿ 1ರಂದು ಕೊಡಗು ಜಿಲ್ಲೆಯ ಕೆಲವು ಕಡೆ ಮತ್ತು ಜನವರಿ 2ರರಂದು ಕೊಡಗು ಮತ್ತು ಚಿಕ್ಕ ಮಗಳೂರು ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆ ಬೀಳುವಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ.

ಇನ್ನು ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಮುಂದುವರೆಯಲಿದೆ. ಅದರಲ್ಲೂ ವಿಜಯಪುರ, ಕೊಪ್ಪಳ, ಬೀದರ್‌, ಚಿಕ್ಕಮಗಳೂರು, ಕೋಲಾರ ಭಾಗದಲ್ಲಿ ಚಳಿಯ ಪ್ರಮಾಣ ಸ್ವಲ್ಪ ಹೆಚ್ಚಾಗಿಯೇ ಇರಲಿದೆ ಎಂದು ತಿಳಿಸಿದೆ.

ಕಳೆ ಎರಡು ವಾರಗಳಿಂದ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಮಳೆಯಾಗಿಲ್ಲ. ಇದಕ್ಕೂ ಮೊದಲು ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆರಾಯ ಅಬ್ಬರಿಸಿದ್ದ. ಆದರೆ ಇದೀಗ ಹೊಸವರ್ಷದ ದಿನದಂದೇ ಅಂದರೆ ಜನವರಿ 1, 2024ರಂದು ಮಂಜಿನ ನಗರಿ ಕೊಡಗಿನಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಕೊಡಗು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಜನವರಿ 1ರಂದು ಸಂಜೆಯ ನಂತರ ಮಳೆ ಸುರಿಯುವ ನಿರೀಕ್ಷೆಯಿದೆ. ಮಂಗಳವಾರ (ಜನವರಿ 02) ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ರಾಜ್ಯದ ಇತರೆ ಕಡೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ ಎಂದು ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ದಾಖಲು: ರಾಜ್ಯದಲ್ಲಿಯೇ ಬೆಂಗಳೂರು, ಮೈಸೂರು, ಮಂಗಳೂರು ಭಾಗಕ್ಕೆ ಹೋಲಿಕೆ ಮಾಡಿದ್ರೆ ಉತ್ತರ ಭಾಗದಲ್ಲಿಯೇ ಶನಿವಾರ ಹೆಚ್ಚಿನ ಚಳಿ ವಾತಾವರಣ ಕಂಡುಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 10 ಡಿಗ್ರಿ ಸೆಲ್ಸಿಯಸ್‌ನಷ್ಟುಕನಿಷ್ಠ ತಾಪಮಾನ ದಾಖಲು ಆಗಿದೆ.

ಕೊಪ್ಪಳ ಜಿಲ್ಲೆಯಲ್ಲಿ 13.2 ಡಿಗ್ರಿ, ಬೀದರ್‌ 13.5 ಡಿಗ್ರಿ, ಬಾಗಲಕೋಟೆಯಲ್ಲಿ 13.9 ಡಿಗ್ರಿ, ಧಾರವಾಡದಲ್ಲಿ 14.8 ಡಿಗ್ರಿ ಹಾಗೂ ಬೆಳಗಾವಿಯಲ್ಲಿ 15.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಹಾವೇರಿ 15.4 ಡಿಗ್ರಿ, ಗದಗ 16.3 ಡಿಗ್ರಿ, ಬೆಳಗಾವಿಯಲ್ಲಿ 17.5 ಡಿಗ್ರಿ, ರಾಯಚೂರಿನಲ್ಲಿ 17.8 ಡಿಗ್ರಿ, ಕಲಬುರಗಿಯಲ್ಲಿ18.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ದಕ್ಷಿಣ ಒಳನಾಡಿನ ಕೋಲಾರ ಜಿಲ್ಲೆಯ ಚಿಕ್ಕನಹಳ್ಳಿಯಲ್ಲಿ 13.3 ಡಿಗ್ರಿ, ಚಿಕ್ಕಮಗಳೂರಿನಲ್ಲಿ 13.6 ಡಿಗ್ರಿ, ಚಾಮರಾಜನಗರ 15.4 ಡಿಗ್ರಿ, ಮಂಡ್ಯ 15.8 ಡಿಗ್ರಿ ಸೆಲ್ಸಿಯಸ್‌, ಶಿವಮೊಗ್ಗ, ಚಿತ್ರದುರ್ಗ, ಮಡಿಕೇರಿಯಲ್ಲಿ 16.4 ಡಿಗ್ರಿ, ಚಿಂತಾಮಣಿಯಲ್ಲಿ 16.8 ಡಿಗ್ರಿ, ದಾವಣಗೆರೆ 17 ಡಿಗ್ರಿ ಮೈಸೂರಿನಲ್ಲಿ 17.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ ಎಂದು ತಿಳಿಸಿದೆ.

ಕರಾವಳಿಯ ಕಾರವಾರದಲ್ಲಿ 21.2 ಡಿಗ್ರಿ, ಮಂಗಳೂರಿನಲ್ಲಿ 21.5 ಡಿಗ್ರಿ, ಪಣಂಬೂರಿನಲ್ಲಿ 21.8 ಡಿಗ್ರಿ ಮತ್ತು ಹೊನ್ನಾವರದಲ್ಲಿ 22.3 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸವರ್ಷದಂದು ಚಳಿಯ ವಾತಾವರಣವೇ ಇರಲಿದೆ. ಆದರೆ ಮಳೆಯ ಮುನ್ಸೂಚನೆ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+