Karnataka Weather 2025: ರೈತರ ಪಾಲಿಗೆ ಮಳೆ ವರದಾನವಾಯಿತಾ? ಕೃಷಿಗೆ, ಅಂತರ್ಜಲಕ್ಕೆ ಜೀವ ತುಂಬಿದ ವರ್ಷ
ಬೆಂಗಳೂರು: ಭೌಗೋಳಿಕವಾಗಿ ರಾಜ್ಯದ ಬಹುಪಾಲು ಕೃಷಿ ಪ್ರಧಾನವಾಗಿದೆ. ವ್ಯವಸಾಯ ನಂಬಿಕೊಂಡ ರೈತಾಪಿ ಕುಟುಂಬಗಳು ಹೆಚ್ಚಿವೆ. ಆಹಾರ ಉತ್ಪಾದನೆ, ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ 2025ರಲ್ಲಿ ಹವಾಮಾನವು ರೈತರಿಗೆ ಎಷ್ಟು ಪೂರಕ ಫಲಿತಾಂಶ ನೀಡಿದೆ. ಪೂರ್ವ ಮುಂಗಾರು (ಮಾರ್ಚ್-ಮೇ), ಮುಂಗಾರು ಮಳೆ (ಜೂನ್-ಸೆಪ್ಟಂಬರ್) ಹಾಗೂ ಹಿಂಗಾರು ಮಳೆ (ಅಕ್ಟೋಬರ್-ಡಿಸೆಂಬರ್) ಎಷ್ಟು ದಾಖಲಾಗಿದೆ. ಖಾರಿಫ್ ಮತ್ತು ರಾಬಿ ಬೆಳೆಗಳ ಮೇಲೆ ಏನೆಲ್ಲ ಪ್ರಭಾವ ಬೀರಿತು. ಅಂತರ್ಜಲ ಮರುಪೂರಣ, ಅಧಿಕ ಮಳೆ, ಮಳೆ ಕೊರತೆ ಕಂಡ ಜಿಲ್ಲೆಗಳ ವಿವರ ಈ ಲೇಖನದಲ್ಲಿದೆ.
ರಾಜ್ಯದ ಹವಾಮಾನ ಇಲಾಖೆ ಪ್ರಕಾರ, 2025ರ ಡಿಸೆಂಬರ್ 23ರವರೆಗಿನ ಅಂಕಿ ಸಂಖ್ಯೆಗಳನ್ನು ಇಲ್ಲಿ ಕೊಡಲಾಗಿದೆ. ಎಲ್ಲ ಮಳೆಗಳು ಕೃಷಿ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಿವೆ. ಈ ಅವಧಿಯಲ್ಲಿ ಪೂರ್ವ ಮುಂಗಾರು ಮಳೆ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಯಿತು. ವಾಡಿಕೆಯಷ್ಟು ಮುಂಗಾರು ಮಳೆ ಬಂದರೆ, ಹಿಂಗಾರು ಮಳೆ ನಿರೀಕ್ಷೆಯಷ್ಟು ಬಾರದ ರಾಬಿ ಬೆಳೆಗೆ ಅಹಿತಕರ ವಾತಾವರಣ ನಿರ್ಮಿಸಿತು. ರಾಜ್ಯದಲ್ಲಿ ವಾಡಿಕೆ ಮಳೆಗಿಂತ (1,152 ಮಿ.ಮೀ.) ಅತ್ಯಧಿಕ 1,319 ಮಿ.ಮೀ. ಮಳೆ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಶೇ.15 ರಷ್ಟು ಅಧಿಕ ಮಳೆ ಎಂದು TNIE ವರದಿ ಮಾಡಿದೆ.

ರಾಜ್ಯದಲ್ಲಿ ಪ್ರವೇಶವಾರು ಕೃಷಿ ಭೂಮಿಗಳು ಈ ವರ್ಷ ಉತ್ತಮ ಮಳೆ ಕಂಡಿವೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ 712 ಮಿ.ಮೀ.ಗಿಂತ ಶೇ.4ರಷ್ಟು ಅಧಿಕ ಅಂದರೆ 741 ಮಿ.ಮೀ. ಮಳೆ ದಾಖಲಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಸಾಮಾನ್ಯ 700 ಮಿ.ಮೀಗಿಂತ ಶೇ. 21ರಷ್ಟು ಅಧಿಕ 848 ಮಿ.ಮೀ. ಮಳೆ ಆಗಿದೆ. ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು 2,129 ಮಿ.ಮೀ. (+9%) ಮಳೆ ಹಾಗೂ ಮೂರು ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಒಟ್ಟು 4,184 ಮಿ.ಮೀ. ಅಧಿಕ (+19%) ಮಳೆ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ನಿರೀಕ್ಷೆಗಿಂತಲೂ ಶೇ.149% ಪೂರ್ವ ಮುಂಗಾರು ಮಳೆ
ಈ ವರ್ಷ ಮಳೆಗಾಲ ಅವಧಿಗೂ ಮುನ್ನವೇ ಆರಂಭವಾಗಿದೆ. ಪೂರ್ವ ಮುಂಗಾರು ಮಳೆ ಅಸಾಧಾರಣವಾಗಿ ಹೆಚ್ಚಿನ ಮಳೆ ಸುರಿಸಿತು. ಮಾರ್ಚ್ -ಮೇ ಅವಧಿಯಲ್ಲಿ ಪೂರ್ವ ಮುಂಗಾರು ನಿರೀಕ್ಷಿತ 115 ಮಿ.ಮೀ. ಗಿಂತ ಶೇ.149ರಷ್ಟು ಅಧಿಕ ಅಂಧರೆ 286 ಮಿ.ಮೀ. ಮಳೆ ಆಗಿದೆ. ಇದು ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಯಿತು. ಒಣಗಿದ ನೆಲಗಳು ಸಂತೃಪ್ತಗೊಂಡು ಹಸಿರು ಕಂಡವು. ಪೂರ್ವ ಮುಂಗಾರು ಉತ್ತಮವಾಗಿದ್ದರಿಂದಲೇ ಮುಂಗಾರು ಆರಂಭದ ಜೂನ್ ತಿಂಗಳಲ್ಲಿ ಕೆಆರ್ಎಸ್, ಕಬಿನಿ, ಹಾರಂಗಿ ಹಾಗೂ ಇತರ ಜಲಾಶಯಗಳು ಭರ್ತಿಯಾದವು. ನದಿಗಳ ಒಳಹರಿವು ಹೆಚ್ಚಾಯಿತು. ಇದು ಸಹ ನೀರಾವರಿ ಕೃಷಿಗೆ ಪೂರಕ ವಾತಾವರಣ ನಿರ್ಮಿಸಿತು.

ಉತ್ತರ ಒಳನಾಡಿನಲ್ಲಿ ಶೇ.21ಅಧಿಕ ಮಳೆ
ರಾಬಿ ಬೆಳೆಗೆ ಕೃಪೆ ತೋರುವ ಮುಂಗಾರು ಮಳೆ (ನೈಋತ್ಯ ಮಾನ್ಸೂನ್) ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿತ್ತು. ಅಷ್ಟಾಗಿ ಅಬ್ಬರಿಸಲಿಲ್ಲ. ವಾಡಿಕೆ 852 ಮಿಮೀ.ನಷ್ಟು 882 ಮಿ.ಮೀ.ಮಳೆ (+4%) ಮಳೆ ದಾಖಲಾಗಿದೆ. ಹೀಗಾಗಿ ಇದು ಸಾಮಾನ್ಯ ಮಳೆ ಎಂದು ಪರಿಗಣಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಶೇಕಡಾ ಅಧಿಕ ಮಳೆ (+21%) ಆಗಿದ್ದರ ಹಿನ್ನೆಲೆ ರೈತರು ಬೆಳೆದ ಮೆಕ್ಕೆಜೋಳ, ಕಬ್ಬು, ಹೆಸರು, ಸೋಯಾ ಇನ್ನಿತರ ಬೆಳೆಗಳು ನಿರೀಕ್ಷೆಯಷ್ಟು ಫಸಲು ನೀಡಿವೆ. ರೈತರ ಮೊಗದಲ್ಲಿ ಒಂದಷ್ಟು ಮಂದಹಾಸ ಮೂಡಿತು. ಅದೇ ಹಿಂಗಾರು ಮಳೆಯು ನಿರೀಕ್ಷೆಯಷ್ಟು ಆಗದೇ ರಾಬಿ ಬೆಳೆಗಳಿಗೆ ಪೂರಕವಾಗಿರಲಿಲ್ಲ. ಆದರೆ ಸಕಾಲಕ್ಕೆ ಬಿದ್ದ ಚಳಿಯ ತಂಪು ಹಿಂಗಾರು ಬೆಳೆಗಳಿಗೆ ಆಸರೆ ಆಯಿತು. ನೀರಾವರಿ ಕೃಷಿಗೆ ನದಿಗಳ ನೀರು ಸಾಕಷ್ಟಿದೆ.
ಕರಾವಳಿಗೆ ಮಾತ್ರ ಶೇ.3 ಅಧಿಕ ಹಿಂಗಾರು ಮಳೆ ಬಿದ್ದಿದೆ. ಉಳಿದಂತೆ ಉತ್ತರ ಒಳನಾಡಿಗೆ ನಿರೀಕ್ಷೆಗಿಂತ ಶೇ. 9ರಷ್ಟು ಕಡಿಮೆ, ಮಲೆನಾಡಿನಲ್ಲಿ ಶೇ. 7ರಷ್ಟು ಕಡಿಮೆ ಮಳೆ ದಾಖಲಾಗಿದೆ. ಒಟ್ಟಾರೆ 2025ರ ಅಕ್ಟೋಬರ್-ಡಿಸೆಂಬರ್ 23 ರವರೆಗಿನ ಹಿಂಗಾರು ಮಳೆ ಕೊರತೆ ಸೃಷ್ಟಿಸಿದೆ. 181ಮಿ.ಮೀ. ಬದಲಾಗಿ ಕೇವಲ 149 ಮಿ.ಮೀ. ದಾಖಲಾಗುವ ಮೂಲಕ ಶೇ.17ರಷ್ಟು ಮಳೆ ಕೊರತೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕೃಷಿ ಮೇಲೆ ಮುಂಗಾರು ಪ್ರಭಾವ: ಇಳುವರಿ ಏರಿಕೆ
ಋತುವಿನ ಅವಧಿಗೆ ಬದಲಾಗಿ ತಿಂಗಳ ಮಳೆ ಅವಧಿಯಲ್ಲಿ ಉತ್ತಮ, ಸಾಧಾರಣ ಮಳೆ ದಾಖಲಾತಿ ಕಂಡು ಬಂದಿದೆ. ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಒಟ್ಟಾರೆ ರಾಜ್ಯದ ಹವಾಮಾನ ಸ್ಥಿತಿಗತಿ ಮತ್ತು ಮಳೆಯು ಕೃಷಿ ಕಾರ್ಯಾಚರಣೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಆಗಿ ಸಮಸ್ಯೆ ಆಯಿತು. ಮಳೆಯಿಂದಾಗಿ ಖಾರಿಫ್ ಉತ್ಪಾದನೆ ಹೆಚ್ಚಾಗಿದೆ. ಆದರೆ ತೊಗರಿಗೆ ಅಧಿಕ ನೀರು ಬೇಕಾಗಿದ್ದರಿಂದ ಮುಂಗಾರು ವೇಳೆ ಕೊಂಚ ಕಳಪೆ ಉಂಟಾಗಿದ್ದು, ತೊಗರಿ ಇಳುವರಿಯಲ್ಲಿ ಶೇ. 25 ರಿಂದ 30ರಷ್ಟು ಕುಸಿತಕ್ಕೆ ಕಾರಣವಾಯಿತು.
ಅನಿಯಮಿತ ಮಳೆಗೆ ಒಳನಾಡು ಜಿಲ್ಲೆಗಳಲ್ಲಿ ಮೆಕ್ಕೆಜೋಳ, ರಾಗಿ ಮತ್ತು ದ್ವಿದಳ ಧಾನ್ಯಗಳ ನಿರೀಕ್ಷಿತ ಇಳುವರಿ ಕಂಡು ಬಂತು ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಿ ತೊಗರಿ ಹಾಗೂ ಇತರ ಧಾನ್ಯಗಳ ಕೊಯ್ಲಿಗೆ ಅನುಕೂಲವಾಯಿತು. ರಾಬಿ ಋತುವಿನ ಹೊತ್ತಿಗೆ ಸರಿಯಾಗಿ ಹಿಂಗಾರು ಮಳೆ ಬರಲಿಲ್ಲ. ಮಣ್ಣಿನಲ್ಲಿ ಉಳಿದ್ದ ತೇವಾಂಶ ಮತ್ತು ಚಳಿಗಾಲ ಕಾರಣ ಬೆಳೆಗಳಿಗೆ ತೊಂದರೆ ಆಗಲಿಲ್ಲ. ನಿರೀಕ್ಷಿತ ರಾಬಿ ಬೆಳೆ ಬೆಳೆಯಲಾಗಿದೆ. ಉತ್ತಮ ಇಳುವರಿ ನಿರೀಕ್ಷೆ ಇದೆ.
ವಾಣಿಜ್ಯ ಬೆಳೆಗಳಿಗೆ ಕಳೆತಂದ ಮುಂಗಾರು
ಮಳೆ ಪ್ರಯೋಜನ ಪಡೆದ ವಾಣಿಜ್ಯ ಬೆಳೆ ಕಬ್ಬು ಬೆಳೆಯಲ್ಲಿ ಶೇ 10 ರಿಂದ 15 ರಷ್ಟು ಇಳುವರಿ ಏರಿತು. ಇದು ಸಕ್ಕರೆ ಉತ್ಪಾದನೆಯ ಹೆಚ್ಚಳಕ್ಕೆ ಪೂರಕವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆಗಳು ಕಾಫಿ ಬೆಳೆಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿವೆ. ಈ ಬಾರಿ ಉತ್ಪಾದನೆ ಶೇಕಡಾ 20 ರಷ್ಟು ಏರಿಕೆ ಆಗುವ ಸಂಭವವಿದೆ ಎಂದು ಊಹಿಸಲಾಗಿದೆ.
ಕರ್ನಾಟಕದ 2025 ರ ಹವಾಮಾನ ಪರಿಸ್ಥಿತಿಗಳು ಕೊಂಚ ಸವಾಲಿನ ಮಧ್ಯ ಕೃಷಿಗೆ ಮಾತ್ರವಲ್ಲದೇ ಅಂತರ್ಜಲ ಮರುಪೂರಣ, ನದಿ, ಕೆರೆ, ಜಲಾಶಯಗಳಿಗೆ ಜೀವ ಕಳೆ ತಂದು ಕೊಟ್ಟಿದೆ. ಕೃಷಿ ಆದಾಯ, ವ್ಯಾಪಾರ ವಹೀವಾಟು ಸುಧಾರಿಸಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ












Click it and Unblock the Notifications