ಅಲ್ಲಲ್ಲಿ ಮಳೆ, ಸಿಡಿಲಿಗೆ ಯುವಕ ಬಲಿ, ಜಲಾಶಯದ ನೀರಿನ ಮಟ್ಟ

Posted By: Gururaj
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14 : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಬಾಗಲಕೋಟೆಯಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ.

ಕಲಬುರಗಿ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಗದಗ ಜಿಲ್ಲೆಗಳಲ್ಲಿ ಮಂಗಳವಾರ ಸಂಜೆ ಮತ್ತು ಬುಧವಾರ ಭಾರೀ ಮಳೆಯಾಗಿದೆ. ಧಾರವಾಡದಲ್ಲಿ ಬೆಣ್ಣೆಹಳ್ಳ, ತುಪ್ಪರಿಹಳ್ಳ ಮೈದುಂಬಿ ಹರಿಯುತ್ತಿದೆ.

Karnataka water level of dams September 14, 2017

ಬಾಗಲಕೋಟೆಯ ಕೆರೂರಿನಲ್ಲಿ ಬುಧವಾರ ಸಂಜೆ ಒಂದೂವರೆ ತಾಸು ಮಳೆಯಾಗಿದೆ. ಬಾದಾಮಿ ತಾಲೂಕಿನ ತಪ್ಪಸಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಕಕನಗೌಡ ಸಿದ್ಧಪ್ಪ (20) ಎಂಬ ಯುವಕ ಮೃತಪಟ್ಟಿದ್ದಾನೆ.

ಮಂಗಳವಾರ ಹಿರೇಕೆರೂರು ತಾಲೂಕಿನಲ್ಲಿ 8.7 ಸೆಂ.ಮೀ ಮಳೆ ಸುರಿದಿದ್ದು, 150 ಹೆಕ್ಟೇರ್ ಬೆಳೆ ಹಾನಿಯಾಗಿದೆ. 10 ಮನೆಗಳಿಗೆ ಹಾನಿಯಾಗಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1795.20
ಸುಪಾ 1849.92 1792.82
ವಾರಾಹಿ 1949.50 1923.72
ಹಾರಂಗಿ 2859.00 2857.14
ಹೇಮಾವತಿ 2922.00 2889.12
ಕೆಆರ್‌ಎಸ್ 124.80 104.40
ಕಬಿನಿ 2284.00 2278.95
ಭದ್ರಾ 2158.00 2136.66
ತುಂಗಭದ್ರಾ 1633.00 1624.86
ಘಟಪ್ರಭಾ 2175.00 2155.13
ಮಲಪ್ರಭಾ 2079.50 2055.45
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1615.50

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi, Belagavi, Gadag, Haveri, Dharwad received heavy rain fall on September 12 and 13, 2017. Water level all dams in Karnataka has increased considerably.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ