ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ

ಬೆಂಗಳೂರು, ಸೆಪ್ಟೆಂಬರ್ 06 : ಕೆಲಕಾಲ ಮುನಿಸಿಕೊಂಡಿದ್ದ ವರುಣ ಮನ್ನಿಸಿದ್ದರಿಂದಲೋ ಏನೋ ರಾಜ್ಯದೆಲ್ಲೆಡೆ ಅತ್ಯುತ್ತಮವಾಗಿ ಮಳೆಯಾಗುತ್ತಿದ್ದು, ಕರ್ನಾಟಕದ ಬಹುತೇಕ ಅಣೆಕಟ್ಟುಗಳು ತುಂಬುವ ಹಂತಕ್ಕೆ ಬಂದಿರುವುದು ಸಂತಸದ ಸಂಗತಿ.

ಮಳೆಯಿಂದಾಗಿ ಮಡಿಕೇರಿಯ ಮಂದಿ ಹರ್ಷಗೊಂಡಿದ್ದರೂ, ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ನೀರುಣಿಸುವ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ತುಂಬುವುದಕ್ಕೆ ಇನ್ನೂ ಸ್ವಲ್ಪ ದಿನ ಕಾಣಬೇಕು.

Karnataka water level of dams and rain details

ಕಳೆದ 24 ಗಂಟೆಗಳಲ್ಲಿ ಕರ್ನಾಟಕ ಪಶ್ಚಿಮ ಭಾಗದಲ್ಲಿ ಅಷ್ಟು ಮಳೆ ಸುರಿಯಲಿದ್ದರೂ, ಮಧ್ಯ ಮತ್ತು ಪೂರ್ವ ಭಾಗದಲ್ಲಿ ಧರೆಗೆ ಸಾಕಷ್ಟು ನೀರುಣಿಸಿದ್ದಾನೆ ಮಳೆರಾಯ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸುಳೇಕಲ್ ಎಂಬಲ್ಲಿ ಅತೀಹೆಚ್ಚು 11.3 ಸೆಂ.ಮೀ. ಮಳೆ ಸುರಿದಿದೆ.

ಇನ್ನು ಬೆಂಗಳೂರಿನಲ್ಲಿಯೂ ಮಳೆಯ ಆರ್ಭಟ ಮುಂದುವರಿದಿದೆ. ಮಂಗಳವಾರ ದಿನದಲ್ಲಿ ಮಳೆ ಕಾಣೆಯಾಗಿ ಬಿಸಿಲು ಇಣುಕಿದ್ದರೂ, ರಾತ್ರಿ ತಂಪೇರಿದ ನಂತರ ಮಳೆ ಜಿನುಗುತ್ತಲೇ ಇತ್ತು. ಕರ್ನಾಟಕ ವಿಕೋಪ ನಿರ್ವಹಣಾ ಸಂಸ್ಥೆಯ ಪ್ರಕಾರ, ಯಶವಂತಪುರದ ಹೆರೋಹಳ್ಳಿ ಎಂಬಲ್ಲಿ ಗರಿಷ್ಠ 3.2 ಸೆಂ.ಮೀ. ಮಳೆಯಾಗಿದೆ.

ಉತ್ತರ ಕರ್ನಾಟಕದಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ, ಮಲಪ್ರಭಾ, ವರದಾ ನದಿ ಸೇರಿದಂತೆ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ರಾಜ್ಯಾದ್ಯಂತ ಇರುವ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕೆಳಗಿನಂತಿದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1794.85
ಸುಪಾ 1849.92 1793.21
ವಾರಾಹಿ 1949.50 1923.49
ಹಾರಂಗಿ 2859.00 2857.06
ಹೇಮಾವತಿ 2922.00 2892.68
ಕೆಆರ್‌ಎಸ್ 124.80 100.35
ಕಬಿನಿ 2284.00 2277.23
ಭದ್ರಾ 2158.00 2134.41
ತುಂಗಭದ್ರಾ 1633.00 1624.35
ಘಟಪ್ರಭಾ 2175.00 2152.40
ಮಲಪ್ರಭಾ 2079.50 2054.65
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1615.00
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+