KPSC ಬಳಿಕ VAO ಪರೀಕ್ಷೆಯಲ್ಲೂ ಅಕ್ರಮ?:13 ವರ್ಷಗಳ ಬಳಿಕ ಪಿಯು ಪಾಸ್ ಆದವ ಸರ್ಕಾರಿ ಎಕ್ಸಾಂನಲ್ಲಿ ಟಾಪ್‌!

ಬೆಂಗಳೂರು: ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ (KPSC) ಪರೀಕ್ಷೆಗಳಲ್ಲಿ ಅಕ್ರಮ ಘಟನೆ ಮಾಸುವ ಮುನ್ನವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KES) ಇತ್ತೀಚೆಗೆ ರಾಜ್ಯ ಕಂದಾಯ ಇಲಾಖೆಯಲ್ಲಿನ ಉಳಿಕೆ ವೃಂದದ ಗ್ರಾಮ ಆಡಳಿತಾಧಿಕಾರಿ (VAO Exam 2026) ಹುದ್ದೆಗಳಿಗೆ ನಡೆಸಿದ್ದ ಲಿಖಿತ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿವೆ.

ಹಾವೇರಿ ಮೂಲದ ವ್ಯಕ್ತಿಯೊಬ್ಬರು ಜನ್ಮ ವರ್ಷ 1994. ಆ ವರ್ಷ ಹುಟ್ಟಿದ ವ್ಯಕ್ತಿ 2026 ರಲ್ಲಿ ತಡವಾಗಿ ಪಿಯುಸಿ ಪಾಸ್ ಆಗಿದ್ದಾರೆ. ಅಂಥವರು ಕಠಿಣ VAO ಪ್ರಶ್ನೆಯನ್ನು ಬರೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆಂದರೆ ಹೇಗೆ ಸಾಧ್ಯ?. ಇದಕ್ಕೆ ಸಂಬಂಧಿಸಿದಂತೆ ಆ ಅಭ್ಯರ್ಥಿಯ OMR ಶೀಟ್, ಅವರು ಪಡೆದ ಅಂಕಗಳ ಹಂಚಿಕೊಳ್ಳಲಾಗಿದೆ. ಪರೀಕ್ಷೆ ಅಕ್ರಮ ಸಂಬಂಧ KEA ಸಹ ಅಕ್ರಮ ಸತ್ಯ ಎಂದು ಹೇಳಿದೆ.

Karnataka VAO Exam Scam

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ನಡೆದ ಪರೀಕ್ಷೆಗಳನ್ನು ಅಕ್ಟೋಬರ್ 10ರಂದು ನಡೆದಿತ್ತು. ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಬಿಡುಗಡೆ ಬಳಿಕ ಆಕ್ಷೇಪಣೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ಪರಿಷತ್ ಹಾಗೂ ಒಂದಷ್ಟು ಅಭ್ಯರ್ಥಿಗಳು ಅಕ್ರಮ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಪುರಾವೆಗಳನ್ನು 'ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಾಕಷ್ಟು ರಿಪೋಸ್ಟ್ ಆಗುವ ಜೊತೆಗೆ ರಾಜ್ಯ ಸರ್ಕಾರ ಹಾಗೂ ಕೆಇಎಗೆ ಟ್ಯಾಗ್ ಮಾಡಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮತ್ತು ಅಕ್ರಮ ವಿರುದ್ಧ ತನಿಖೆ, ಕ್ರಮಕ್ಕೆ ಆಗ್ರಹಿಸಿದ್ದಾರೆ.

VAO ಪರೀಕ್ಷೆ ಅಕ್ರಮ ಆರೋಪ: ಅಷ್ಟಕ್ಕೂ ಆಗಿದ್ದೇನು?

VAO ಪರೀಕ್ಷೆ ಎದುರಿಸಿದ್ದ 31 ವರ್ಷ ವಯಸ್ಸಿನ (1994ರಲ್ಲಿ ಹುಟ್ಟಿದ ವ್ಯಕ್ತಿ) ಹಾವೇರಿಯ ಅಭ್ಯಥಿಯೊಬ್ಬರು 13 ವರ್ಷಗಳ ಬಳಿಕ 2026ರಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದು, ಅದರಲ್ಲಿ ಅವರು ಶೇ. 49 ಅಂಕ ಪಡೆದಿದ್ದಾರೆ. ಅವರು ಇತ್ತೀಚೆಗೆ ನಡೆದಿದ್ದ KSRP ಪೋಲೀಸ್ ಕಾನ್ಸ್‌ಟೇಬ್‌ ಪರೀಕ್ಷೆಯಲ್ಲಿ 25 ಅಂಕಗಳನ್ನು ಪಡೆದಿದ್ದರು. ಪಿಯುಸಿ ಪಾಸ್ ಮಾಡುವುದಕ್ಕೇ ಇಷ್ಟೊಂದು ವರ್ಷ ತೆಗೆದುಕೊಂಡಿರುವ ಈ ವ್ಯಕ್ತಿಯು ಇತ್ತೀಚಿನ ಕಠಿಣ VAO ಪರೀಕ್ಷೆಯಲ್ಲಿ 151.25 ಅಂಕಗಳು ಪಡೆದಿದ್ದಾದರೂ ಹೇಗೆ? ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಇದೇ ವ್ಯಕ್ತಿಯು ಪೋಲೀಸ್ ಕಾನ್ಸ್‌ಟೇಬ್ ಪರೀಕ್ಷೆಯಲ್ಲಿ OMRನಲ್ಲಿ 5ನೇ ಆಯ್ಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿದ್ದು ಪತ್ತೆ ಆಗಿದೆ. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ 151.25 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. VAO ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಒಂದೇ ಒಂದು ಪ್ರಶ್ನೆಗೂ ಗುರುತಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ ಎಂದು ಹಲವರು ದೂರಿದ್ದಾರೆ.

13 ವರ್ಷದ ನಂತರ ಪಿಯು ಪಾಸ್, ಸರ್ಕಾರಿ ಎಕ್ಸಾಂನಲ್ಲಿ ಟಾಪ್!

ಈ ಅಂಕಗಳ ವ್ಯತ್ಯಾಸಕ್ಕೆ ಕಾರಣವೇನು? ಸ್ವಲ್ಪವೂ (IQ) ಜ್ಞಾನವಿಲ್ಲದ ಈ ವ್ಯಕ್ತಿ ಇಂತಹ ಸಾಧನೆ ಮಾಡಲು ಹೇಗೆ ಸಾಧ್ಯ 18 ವರ್ಷಗಳಿಗೆ ಉತ್ತೀರ್ಣವಾಗಬೇಕಾದ ಪಿಯುಸಿಯನ್ನು 13 ವರ್ಷಗಳ ನಂತರ ಬರೆದು ಅದು ಕೂಡ 6 ತಿಂಗಳಲ್ಲಿ ಸರ್ಕಾರಿ ಹುದ್ದೆಗೆ ಉನ್ನತ ಅಂಕ ಪಡೆಯುವುದು ಅಸಾಧ್ಯ ಭ್ರಷ್ಟಚಾರದ ಅನುಮಾನ ದಟ್ಟವಾಗಿದ್ದು ತನಿಖೆ ನಡೆಯಲೇಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿ ಒತ್ತಾಯಿಸಲಾಗಿದೆ.

ವಾರಕ್ಕೊಂದು ಯೂಟ್ಯೂಬ್ ವಿಡಿಯೋ ಮೂಲಕ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ IAS ಅಧಿಕಾರಿಗಳಿಂದಲೂ ಈ ಪ್ರಕರಣದ ಕುರಿತು ಸ್ಪಷ್ಟನೆ ಮತ್ತು ಪಾರದರ್ಶಕ ತನಿಖೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಈ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮನವಿ ಮಾಡಿದೆ. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಗ್ಧ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೃಹತ್ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ.

ಖರ್ಗೆ ಅವರೇ ಪಾರದರ್ಶಕತೆ ಎಲ್ಲಿ?

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಮಾಸುವ ಮುನ್ನವೇ ರಾಜ್ಯದ ಮತ್ತೊಂದು ಪ್ರಮುಖ ಪರೀಕ್ಷೆಯಲ್ಲಿ ಈ ರೀತಿಯ ಅಕ್ರಮ, ಭ್ರಷ್ಟಾಚಾರ ವಾಸನೆ ಬಂದಿದೆ. ಪಾರದರ್ಶಕತೆ ಬಗ್ಗೆ ಮಾತನಾಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಎಲ್ಲಿದೆ ಪಾರದರ್ಶಕತೆ? ಎಂದು ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಲಾಗಿದೆ.

ಪರೀಕ್ಷಾ ಅಕ್ರಮ ಒಪ್ಪಿಕೊಂಡ KEA!

ಪರೀಕ್ಷಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯ ನಿರ್ವಾಹಕ ಪ್ರಸನ್ನ ಕುಮಾರ್ ಅವರು, ಸಾರ್ವಜನಿಕರಲ್ಲಿ, ಪರೀಕ್ಷಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ. VAO ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಎಂಬುದು ಮೇಲ್ನೋಟಕೆ ಕಾಣುವ ಸತ್ಯವಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ಮೇಲೆ KSVS ವಿದ್ಯಾರ್ಥಿ ಸಮೂಹ ಸೇರಿದಂತೆ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳು ನಂಬಿಕೆ ಇಟ್ಟಿದ್ದಾರೆ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಹಲವು ಸುಧಾರಣೆಗಳನ್ನು ತಂದಿರುವ ಕೀರ್ತಿ ನಿಮಗೆ ಸಲ್ಲುತ್ತದೆ. ಅದಕ್ಕಾಗಿ ನಿಮಗೆ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಮೂರು ದಿನಗಳಲ್ಲಿ ತನಿಖೆ ನಡೆಸಿ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಪಷ್ಟ ಉತ್ತರ ನೀಡಿ ಕೆಇಎ ಮೇಲೆ ವಿದ್ಯಾರ್ಥಿಗಳು ಇಟ್ಟಿರುವ ನಂಬಿಕೆಯನ್ನು ಉಳಿಸಿ ಕೊಳ್ಳಬೇಕೆಂದು ಮನವಿ ಮಾಡುತ್ತವೆ. ಮುಂದೆ ಸಾಲು ಸಾಲು ನೇಮಕಾತಿಗಳಿದ್ದು ಭ್ರಷ್ಟಾಚಾರ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಕೆಇಎಗೆ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+