ಕರ್ನಾಟಕದಲ್ಲಿ ಓಡಾಡುವ ಓಲಾಕ್ಕೆ ಸಿಕ್ತು ಪರವಾನಗಿ

Written By:
Subscribe to Oneindia Kannada

ಬೆಂಗಳೂರು, ಜೂನ್, 22: ಕ್ಯಾಬ್ ಸೇವೆಯಲ್ಲಿ ಹೆಸರು ಮಾಡಿದ ಓಲಾಕ್ಕೆ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಪರವಾನಗಿಯನ್ನು ನೀಡಿದೆ. 2016 ರ ಸಾರಿಗೆ ನಿಯಮಗಳ ಅನ್ವಯ ಪರವಾನಗಿಯನ್ನು ನೀಡಿದೆ.

ನಾವು ಓಲಾಕ್ಕೆ ಪರವಾನಗಿ ನೀಡಿದ್ದು ಇನ್ನು ಮುಂದೆ ಕಾನೂನು ಬದ್ಧವಾಗಿಯೇ ಸೇವೆ ನೀಡುವಂತೆ ಸೂಚನೆ ನೀಡಿದ್ದೇವೆ ಎಂದು ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.[ಆನ್‌ಲೈನ್ ಟ್ಯಾಕ್ಸಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಮೂಗುದಾರ]

taxi

ಆದರೆ ಮತ್ತೊಂದು ಟ್ಯಾಕ್ಸಿ ಸೇವೆ ಉಬರ್ ಗೆ ಇನ್ನು ಪರವಾನಗಿ ಸಿಕ್ಕಿಲ್ಲ. ಲೈಸನ್ಸ್ ಸಿಕ್ಕಿದ್ದರೂ ಸಹ ಓಲಾ ಈ ಬಗ್ಗೆ ಯಾವ ಹೇಳಿಕೆಯನ್ನು ನೀಡಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಹೈ ಕೋರ್ಟ್ ಆದೇಶದ ಅನ್ವಯ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ವಿವಿಧ ನಿಯಮಾವಳಿಗಳನ್ನು ಬಿಡುಗಡೆ ಮಾಡಿತ್ತು. ಓಲಾ ಮತ್ತು ಉಬರ್ ಚಾಲಕರು ಮತ್ತು ಪಡೆದುಕೊಳ್ಳುತ್ತಿರುವ ಬಾಡಿಗೆ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿತ್ತು.[ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?]

ಚಾಲಕರು ಕನ್ನಡ ಬಲ್ಲವರಾಗಿರಬೇಕು, ಚಾಲಕರ ವಿವರಗಳುಳ್ಳ ಫಲಕವನ್ನು ಕಡ್ಡಾಯವಾಗಿ ಅಳವಡಿಸಿರಬೇಕು ಎಂಬ ನಿಯಮಗಳನ್ನು ಹೇಳಲಾಗಿತ್ತು.

ತಂತ್ರಜ್ಞಾನ ಮತ್ತು ಮೊಬೈಲ್ ಆಧಾರಿತವಾಗಿ ಕೆಲಸ ಮಾಡುವ ಟ್ಯಾಕ್ಸಿ ಸೇವೆಗಳನ್ನು ಕಾನೂನಿನ ಅಡಿಯಲ್ಲಿ ತರುವ ಕೆಲಸ ಮಾಡಲು ಮುಂದಾದ ಸರ್ಕಾರಕ್ಕೆ ಆರಂಭಿಕ ಜಯ ಸಹ ಸಿಕ್ಕಂತೆ ಆಗಿದೆ. ಮೊಬೈಲ್ ಅಪ್ಲಿಕೇಶನ್ ಆಧಾರದಲ್ಲಿ ಕೆಲಸ ಮಾಡುತ್ತಿರುವ ಇನ್ನುಳಿದ ಸೇವೆಗಳನ್ನು ಸರ್ಕಾರ ಸದ್ಯವೇ ಕಾನೂನಿನ ಅಡಿಯಲ್ಲಿ ತರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka state transport department has issued a licence to cab aggregator Ola (ANI Technologies Pvt. Ltd) under the Karnataka On-Demand Transportation Technology Aggregators Rules 2016. However, Uber Technologies Inc. is yet to obtain a licence as it is yet to furnish all the required details.
Please Wait while comments are loading...