ರೈಲು ಪ್ರಯಾಣಿಕರಿಗೆ ಪ್ರಮುಖ ಸೂಚನೆ: ಕರ್ನಾಟಕದ 11 ವಿಶೇಷ ರೈಲುಗಳು ರದ್ದು
ಬೆಂಗಳೂರು ಜೂನ್ 13: ಬೆಂಗಳೂರಿನಿಂದ ಪ್ರಯಾಣ ಮಾಡಲು ರೈಲನ್ನು ಅವಲಭಿಸಿರುವ ಪ್ರಯಾಣಿಕರಿಗೆ ಪ್ರಮುಖ ಸೂಚನೆಯನ್ನು ರೈಲ್ವೇ ಇಲಾಖೆ ನೀಡಿದೆ. ಬೆಂಗಳೂರಿನಿಂದ ಹೊರಡುವ ಕೆಲ ಮಾರ್ಗದ ರೈಲುಗಳು ರದ್ದಾಗಿದ್ದು ಪ್ರಯಾಣಿಕರು ಗಮನಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
11 ವಿಶೇಷ ರೈಲುಗಳು ತಾಂತ್ರಿಕ ದೋಷದಿಂದಾಗಿ ರದ್ದಾಗಿರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ. ಮುಂದಿನ ಆದೇಶದವರೆಗೂ ಈ ರೈಲುಗಳು ರದ್ದಾಗಲಿದ್ದು ಪ್ರಯಾಣಿಕರು ಈ ಬಗ್ಗೆ ಗಮನಿಸಬೇಕು ಎಂದು ತಿಳಿಸಲಾಗಿದೆ. ಹಾಗಾದರೆ ರದ್ದಾಗಿರುವ ರೈಲುಗಳ ಸಂಖ್ಯೆ ಅವುಗಳ ಮಾರ್ಗಗಳ ಬಗ್ಗೆ ಈಗ ತಿಳಿಯೋಣ.

ರದ್ದಾದ ರೈಲುಗಳು ವಿವರ:-
*ರೈಲು ಸಂಖ್ಯೆ 08543 ವಿಶಾಪಟ್ಟಣಂ ಸೆ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ( ಎಸ್‌ಎಂವಿಡಿ) ಬೆಂಗಳೂರು ರೈಲನ್ನು ಜೂನ್ 16ರಂದು ರದ್ದು ಮಾಡಲಾಗಿದೆ.
*ರೈಲು ಸಂಖ್ಯೆ 06218 ಗಯಾ-ಯಶವಂತಪುರ ರೈಲನ್ನು ಜೂನ್ 17ರಂದು ರದ್ದಾಗಲಿದೆ.
*ರೈಲು ಸಂಖ್ಯೆ 06521 ಎಸ್‌ಎಂವಿಟಿ ಬೆಂಗಳೂರು-ಗುವಾಹಟಿ ರೈಲು ಜೂನ್ 18 ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 06565 ಎಸ್‌ಎಂವಿಟಿ ಬೆಂಗಳೂರು-ಮಾಲ್ಡ್‌ಟೌನ್ ರೈಲನ್ನು ಜೂನ್ 19ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 08845 ಸಂತ್ರಗಾಚ್ ಎಸ್‌ಎಂವಿಟಿ ಬೇಂಗಳೂರು ರೈಲನ್ನು ಜೂನ್ 21ರಂದು ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 06566 ಮಾಲ್ಡ್‌ಟೌನ್-ಎಸ್‌ಎಂವಿಟಿ ಬೆಂಗಳೂರು ರೈಲನ್ನು ಜೂನ್ 22ರಮದು ರದ್ದುಗೊಳಿಸಲಾಗಿದೆ.
*ರೈಲು ಸಂಖ್ಯೆ 06522 ಎಸ್‌ಎಂವಿಟಿ ಬೆಂಗಳೂರು ಗುವಾಹಟಿ ರೈಲು ಜೂನ್ 22ರಂದು ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 08846 ಎಸ್‌ಎಂವಿಟಿ ಬೆಂಗಳೂರು-ಸಂತ್ರಗಾಚ್ ರೈಲನ್ನು ಜೂನ್ 23ರಂದು ರದ್ದುಗೊಳಿಸಲಾಗಿದೆ.
*ಭಗತ್ ಕಿ ಕೋಠಿ-ಎಸ್‌ಎಂವಿಟಿ ಬೆಂಗಳೂರು ರೈಲು ಜೂನ್ 20, 23, 27, 30ರಂದು ರದ್ದಾಗಲಿದೆ.
ಬೇಸಿಗೆ ರಜೆ ಹಾಗೂ ಪ್ರಯಾಣಿಕರ ದಟ್ಟಣೆಯ ಹಿನ್ನೆಲೆ ಮಾರ್ಚ್‌ನಲ್ಲಿ ಹಲವು ರಾಜ್ಯಗಳಿಗೆ ವಿಶೇಷ ರೈಲುಗಳನ್ನು ಆರಂಭಿಸಲಾಗಿತ್ತು. ಸದ್ಯ ಪ್ರಯಾಣಿಕರ ಬೇಡಿಕೆ ಕಡಿಮೆಯಾದ ಹಿನ್ನೆಲೆ ಈ ರೈಲುಗಳನ್ನು ಮುಂದಿನ ಆದೇಶದವರೆಗೂ ರದ್ದು ಮಾಡಲಾಗಿದೆ.
ರೈಲು ಸಂಚಾರ ಸಮಯ ಬದಲಾವಣೆ
ಆಗಸ್ಟ್ 31ರ ವರೆಗೆ ಮಾನ್ಸೂನ್ ವೇಳಾಪಟ್ಟಿಯಂತೆ ರೈಲುಗಳು ಸಂಚಾರ ನಡೆಸಲಿದೆ. ಮಂಗಲೂರು-ಗೋವಾ ವಂದೇ ಭಾರತ್ ಸೇರಿದಂತೆ 38 ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಅಲ್ಲದೆ ಮಳೆಗಾಲದಲ್ಲಿ ರೈಲುಗಳ ವೇಗದಲ್ಲೂ ಕಡಿಮೆಯಾಗಲಿದೆ.
ಎರ್ನಾಕುಳಂ-ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್, ಮುಂಬಾಯಿ-ಗೋವಾ ವಂದೇ ಭಾರತ್ ಮತ್ತು ಮಂಗಳೂರು-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್, ತಿರುವನಂತಪುರ-ಲೋಕಮಾನ್ಯತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಸಮಯ ಬದಲಾಗಲಿದೆ.












Click it and Unblock the Notifications