ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಒಂದರಲ್ಲಿ ಬಿಜೆಪಿಗೆ ಗೆಲುವು
ಬೆಂಗಳೂರು, ಆ.25 : ಭಾರೀ ಕುತೂಹಲ ಕೆರಳಿಸಿದ್ದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, ಶಿಕಾರಿಪುರ ಕ್ಷೇತ್ರವನ್ನು ಬಿ.ಎಸ್.ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಚಿಕ್ಕೋಡಿ-ಸದಲಗಾ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಸಾಧಿಸಿದೆ. ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಸಮಯ 12.10 : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿ ಅವರು ಸುಮಾರು 31,149 ಮತಗಳ ಅಂತದಿಂದ ಜಯಗಳಿಸಿದ್ದಾರೆ.
ಸಮಯ 11.47 : "ಶಿಕಾರಿಪುರದಲ್ಲಿ ಅಪ್ಪ ಮಕ್ಕಳು ಹಣದ ಹೊಳೆ ಹರಿಸಿ ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧದ ಹೋರಾಟವನ್ನು ನಾನು ಮುಂದುವರೆಸುತ್ತೇನೆ" ಎಂದು ಶಿಕಾರಿಪುರದಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಹೇಳಿದ್ದಾರೆ.
ಸಮಯ 11.45 : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿ 23 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
ಸಮಯ 11 .35 : ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ 6,430 ಮತಗಳಿಂದ ಗೆಲವು ಸಾಧಿಸಿದ್ದಾರೆ.
ಸಮಯ 11.30 : "ಬಳ್ಳಾರಿಯಲ್ಲಿ ಕಾಂಗ್ರೆಸ್ ಹಣ ಮತ್ತು ತೋಳ್ಬಲದಿಂದಾಗಿ ಗೆಲುವು ಸಾಧಿಸಿದೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ" ಎಂದು ಸಂಸದ ಬಿ.ಶ್ರೀರಾಮುಲು ಹೇಳಿದ್ದಾರೆ.
ಸಮಯ 11.25 : 5,527 ಮತಗಳ ಅಂತರ ಕಾಯ್ದುಕೊಂಡ ಬಿ.ವೈ.ರಾಘವೇಂದ್ರ.
ಸಮಯ 11.11 : ಶಿಕಾರಿಪುರದಲ್ಲಿ 13 ನೇ ಸುತ್ತಿನ ಮತ ಎಣಿಕೆ ವೇಳೆ ಬಿಜೆಪಿಯ ಬಿ.ವೈ.ರಾಘವೇಂದ್ರ 4,336 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ನಾಲ್ಕು ಸುತ್ತುಗಳ ಎಣಿಕೆ ಬಾಕಿ ಇದೆ.
ಸಮಯ 11 ಗಂಟೆ : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗಣೇಶ್ ಹುಕ್ಕೇರಿ - 44,772 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - 30,147 ಮತಗಳನ್ನು ಪಡೆದಿದ್ದಾರೆ.
ಸಮಯ 10.50 : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿ 12,447 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 7ನೇ ಸುತ್ತಿನ ಮತ ಎಣಿಕೆ ನಡೆಯುತ್ತಿದೆ.
ಸಮಯ 10.46 : ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ - 44,026 ಮತಗಳನ್ನು ಪಡೆದಿದ್ದರೆ, ಶಾಂತವೀರಪ್ಪ ಗೌಡ ಅವರು 40,694 ಮತಗಳನ್ನು ಪಡೆದಿದ್ದಾರೆ.
ಸಮಯ 10.30 : 9ನೇ ಸುತ್ತಿನ ಮತ ಎಣಿಕೆ ಬಳಿಕವೂ ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಹಿನ್ನಡೆ ಅನುಭವಿಸಿದ್ದಾರೆ.
ಸಮಯ 10.11 : ಬಳ್ಳಾರಿಯಲ್ಲಿ ರೆಡ್ಡಿಗಳ ಕೋಟೆ ಛಿದ್ರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಗೆಲುವು ಸಾಧಿಸಿದ್ದಾರೆ.

ಸಮಯ 10.10 : ಸಣ್ಣ-ಪುಟ್ಟ ಅಸಮಾಧಾನಗಳ ನಡುವೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದೇವೆ. ನಾವು ಪ್ರಭಾವಿಗಳಲ್ಲದಿದ್ದರೂ ಜನರು ನಮಗೆ ಬೆಂಬಲ ನೀಡಿದ್ದಾರೆ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಹೇಳಿದ್ದಾರೆ.
ಸಮಯ 10 ಗಂಟೆ : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಗಣೇಶ್ ಹುಕ್ಕೇರಿ - 23,978 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ 16 ಮತಗಳನ್ನು ಪಡೆದಿದ್ದಾರೆ.

ಸಮಯ 9.50 : ಶಿಕಾರಿಪುರ ಕ್ಷೇತ್ರದಲ್ಲಿ ಪಡೆದ ಮತಗಳು ಬಿ.ವೈ.ರಾಘವೇಂದ್ರ 30, 023, ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ 27,908 ಮತಗಳು.
ಸಮಯ 9.48 : ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ 10ನೇ ಸುತ್ತಿನ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ 20 ಮತಗಳ ಮುನ್ನಡೆ ಪಡೆದಿದ್ದಾರೆ. ಕೇವಲ 5 ಸುತ್ತಗಳ ಎಣಿಕೆ ಬಾಕಿ. ಬಿಜೆಪಿ ಅಭ್ಯರ್ಥಿ ಓಬಳೇಶ್‌ಗೆ ಭಾರೀ ಹಿನ್ನಡೆ.

ಸಮಯ 9.44 : ಚಿಕ್ಕೋಡಿ-ಸದಲಗಾ : ಚಿಕ್ಕೋಡಿ-ಸದಲಗಾ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿ - 19,145 ಮತಗಳು, ಬಿಜೆಪಿ ಅಭ್ಯರ್ಥಿ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - 11,753 ಮತಗಳು
ಸಮಯ 9.41 : ಶಿಕಾರಿಪುರ ಬಿ.ವೈ.ರಾಘವೇಂದ್ರ 21, 800 ಮತ್ತು ಶಾಂತವೀರಪ್ಪ ಗೌಡ 20,126 ಮತಗಳನ್ನು ಪಡೆದಿದ್ದಾರೆ.
ಸಮಯ 9.35 : 5ನೇ ಸುತ್ತಿನ ಮತ ಎಣಿಕೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ 2,751 ಮತಗಳ ಮುನ್ನಡೆ.

ಸಮಯ 9.30 : ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ 18,000 ಮತಗಳ ಮುನ್ನಡೆ, ಶಿಕಾರಿಪುರದಲ್ಲಿ ಬಿಜೆಪಿಗೆ ಮನ್ನಡೆ, ಚಿಕ್ಕೋಡಿ-ಸದಲಗಾ ಕಾಂಗ್ರೆಸ್‌ಗೆ ಮುನ್ನಡೆ
ಸಮಯ 9.21 : ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ 15,198 ಮತಗಳ ಮುನ್ನಡೆ ಪಡೆದಿದ್ದಾರೆ.
ಸಮಯ 9.20 : ಚಿಕ್ಕೋಡಿ-ಸದಲಗಾ ಮತಗಳ ವಿವರ ಗಣೇಶ್ ಹುಕ್ಕೇರಿ - 12,972, ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - 7,908
ಸಮಯ 9.12 : ಶಿಕಾರಿಪುರ ಕ್ಷೇತ್ರದ ಮತಗಳು ಬಿ.ವೈ.ರಾಘವೇಂದ್ರ 12, 102, ಶಾಂತವೀರಪ್ಪ ಗೌಡ 10,759 4ನೇ ಸುತ್ತಿನಲ್ಲೂ ಬಿ.ವೈ.ರಾಘವೇಂದ್ರ ಮುನ್ನಡೆ.

ಸಮಯ 9.05 : ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ 4 ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ 8,458 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
ಸಮಯ 9 ಗಂಟೆ : ಶಿಕಾರಿಪುರದಲ್ಲಿ ಅಭ್ಯರ್ಥಿಗಳು ಪಡೆದ ಮತಗಳು ಬಿ.ವೈ.ರಾಘವೇಂದ್ರ 7829 ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ 6,937
ಸಮಯ 8.55 : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗಣೇಶ್ ಹುಕ್ಕೇರಿ ಅವರಿಗೆ 5008 ಮತಗಳ ಮುನ್ನಡೆ

ಸಮಯ 8.53 : "ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲವಿದೆ, 40 ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಈ ಬಾರಿ ಶಿಕಾರಿಪುರ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ" ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಹೇಳಿಕೆ.
ಸಮಯ 8.48 : ಶಿಕಾರಿಪುರ ಕ್ಷೇತ್ರದಲ್ಲಿ 2 ನೇ ಸುತ್ತಿನಲ್ಲೂ ಬಿ.ವೈ.ರಾಘವೇಂದ್ರ ಅವರಿಗೆ ಮುನ್ನಡೆ ಪಡೆದ ಮತಗಳು 4,279.
ಸಮಯ 8.30 : ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಎಣಿಕೆ ಮುಕ್ತಾಯ ಬಿಜೆಪಿಯ ಒಬಳೇಶ್ 4300 ಮತಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ 6000 ಮತಗಳು
ಸಮಯ 8.35 : ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಕ್ಕೇರಿ ಅವರಿಗೆ 1787 ಮತಗಳ ಮುನ್ನಡೆ.
ಸಮಯ 8.30: ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರು 2488 ಮತಗಳನ್ನು ಪಡೆದಿದ್ದು, 565 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಕೃಷ್ಣ ಮುನ್ನಡೆ

ಸಮಯ 8.20 : ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಮುನ್ನಡೆ, ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಓಬಳೇಶ್ ಮುನ್ನಡೆ
ಸಮಯ 8.10 : ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ವಿರುದ್ಧ ಆರಂಭಿಕ ಮುನ್ನಡೆ
ಬೆಳಗ್ಗೆ 8 ಗಂಟೆ : ಮೂರು ಕ್ಷೇತ್ರಗಳಲ್ಲಿ ಮೊದಲು ಅಂಚೆ ಮತಗಳ ಎಣಿಗೆ ಆರಂಭ, ಶಿಕಾರಿಪುರದಲ್ಲಿ ಯಾವುದೇ ಅಂಚೆ ಮತ ಚಲಾವಣೆಯಾಗಿಲ್ಲ. ಚಿಕ್ಕೋಡಿಯಲ್ಲಿ 1 ಅಂಚೆ ಮತ ಮಾತ್ರ ಚಲಾವಣೆ.
ಹಿಂದಿನ ಸುದ್ದಿ : ಚಿಕ್ಕೋಡಿಯ ಆರ್.ಡಿ. ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮತ್ತು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ನಡುವಿನ ಪ್ರತಿಷ್ಠೆಯ ಹೋರಾಟ ಇದಾಗಿದ್ದು ಯಾರಿಗೆ ಗೆಲುವು? ಎಂಬುದು 12 ಗಂಟೆಯ ವೇಳೆಗೆ ತಿಳಿಯುವ ಸಾಧ್ಯತೆ ಇದೆ.

ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಶಿಕಾರಿಪುರ
ಬಿ.ವೈ.ರಾಘವೇಂದ್ರ - ಬಿಜೆಪಿ
ಶಾಂತವೀರಪ್ಪ ಗೌಡ - ಕಾಂಗ್ರೆಸ್
ಸಕಲೇಶ್ ಹುಲ್ಮಾರ್ - ಕರ್ನಾಟಕ ಜನತಾ ಪಕ್ಷ
ಬಳ್ಳಾರಿ ಗ್ರಾಮಾಂತರ
ಓಬಳೇಶ್ - ಬಿಜೆಪಿ
ಎನ್.ವೈ.ಗೋಪಾಲಕೃಷ್ಣ - ಕಾಂಗ್ರೆಸ್
ಬಿ.ರಘು - ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ
ಜಿ.ಚಂದ್ರಶೇಖರ - ಪಕ್ಷೇತರ
ಬಿ.ರಾಮುಡು - ಪಕ್ಷೇತರ ಸೇರಿ ಒಟ್ಟು 5 ಅಭ್ಯರ್ಥಿಗಳು.
ಚಿಕ್ಕೋಡಿ-ಸದಲಗಾ
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - ಬಿಜೆಪಿ
ಗಣೇಶ್ ಪ್ರಕಾಶ ಹುಕ್ಕೇರಿ - ಕಾಂಗ್ರೆಸ್
ಬಿ.ವೆಂಕಟೇಶ್ - ಕರುನಾಡ ಪಾರ್ಟಿ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.












Click it and Unblock the Notifications