ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪ್ರವೇಶ ಪತ್ರ; ಡೌನ್‌ಲೋಡ್ ಮಾಡುವುದು ಹೇಗೆ?

ಕರ್ನಾಟಕ, ಅ. 27: ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಶಿಕ್ಷಕರಾಗಿ ನೇಮಿಸಲು ಪ್ರತಿ ವರ್ಷ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಈ ವರ್ಷ ನವೆಂಬರ್ 6 ರಂದು ನಡೆಯಲಿದೆ. ಕರ್ನಾಟಕ ಶಿಕ್ಷಣ ಇಲಾಖೆ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದೆ.

ನವೆಂಬರ್ 06 ರಂದು ಬೆಳಗ್ಗೆ 9.00 ರಿಂದ 12ರವರೆಗೆ ಮತ್ತು ಮಧ್ಯಾಹ್ನ 1.30 ರಿಂದ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತದೆ. ಪ್ರವೇಶ ಪತ್ರಗಳನ್ನು ಅಕ್ಟೋಬರ್ 21 ರಿಂದ ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

*ಪ್ರವೇಶ ಪತ್ರಗಳನ್ನು ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?*

1. ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಯು, sts.karnataka.gov.in/TET/ ಅಥವಾ schooleducation.kar.nic.in ನಲ್ಲಿ ಹಾಲ್ ಟಿಕೆಟ್‌ಗಳನ್ನು ಪಡೆಯಬಹುದು.

2. ಈ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಪ್ರವೇಶ ಪತ್ರ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

Karnataka TET 2022: Education Department Released Admit Cards

4. ಇದರಿಂದ ಅಪ್ಲಿಕೇಶನ್ ಐಡಿ ಮತ್ತು ನಿಮ್ಮ ಜನ್ಮ ದಿನಾಂಕದಂತಹ ವಿವರಗಳನ್ನು ಭರ್ತಿ ಮಾಡಬೇಕಾದ ಪುಟ ತೆರೆದುಕೊಳ್ಳುತ್ತದೆ.

5. ಇದಾದ ಬಳಿಕ ಪ್ರವೇಶ ಕಾರ್ಡ್/ಹಾಲ್ ಟಿಕೆಟ್ ಪರದೆಯ ಮೇಲೆ ಕಾಣಿಸುತ್ತದೆ. ಇದರಲ್ಲಿ ನಿಮ್ಮ ರೋಲ್ ಸಂಖ್ಯೆ, ನಿಮ್ಮ ಪರೀಕ್ಷಾ ಕೇಂದ್ರದ ವಿಳಾಸ, ಪರೀಕ್ಷೆಯ ಮಾರ್ಗಸೂಚಿಗಳು ಮುಂತಾದ ವಿವರಗಳು ಇರುತ್ತವೆ.

6. ಈ ಫೈಲ್ ಅನ್ನು ಸೇವ್ ಮಾಡಿಕೊಳ್ಳಿ. ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ತಮ್ಮ ಪ್ರವೇಶ ಕಾರ್ಡ್‌ಗಳ ಭೌತಿಕ ಪ್ರತಿಯನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬೇಕು.

Karnataka TET 2022: Education Department Released Admit Cards

ಶಿಕ್ಷಕರಾಗಲು ಅರ್ಹತೆ ಪಡೆಯಲು, ಅಭ್ಯರ್ಥಿಗಳು ಒಟ್ಟು 150 ರಲ್ಲಿ ಕನಿಷ್ಠ 90 ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಬೇಕು. 60 ಪ್ರತಿಶತ ಅಂಕಗಳನ್ನು ಪಡೆದುಕೊಳ್ಳಬೇಕು. NCTE ನಿಗದಿಪಡಿಸಿರುವ ಮಾರ್ಗಸೂಚಿ ಅನ್ವಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ನಿಗದಿಪಡಿಸಲಾಗುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಾತಾವಧಿಯವರಿಗೆ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ಅರ್ಹತೆ ಪಡೆದವರು ಮತ್ತೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆಯಿಲ್ಲ. ಒಂದು ವೇಳೆ ಹೆಚ್ಚು ಅಂಕ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಮಾತ್ರ ಮತ್ತೆ ಪರೀಕ್ಷೆ ಬರೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+