Karnataka Temperature: ಬೇಸಿಗೆ ಆರಂಭ, ಗರಿಷ್ಠ 50 ° C ಉಷ್ಣಾಂಶ ದಾಖಲು, ಮುನ್ಸೂಚನೆ ಏನಿದೆ? ತಿಳಿಯಿರಿ

ಕರ್ನಾಟಕದಲ್ಲಿ ದಿನೇ ದಿನೇ ಬಿಸಲಿನ ಕಾವು ಹೆಚ್ಚಾಗುತ್ತಿದೆ. ಇತ್ತ ಬೇಸಿಗೆಯ ಆರಂಭವನ್ನು ಅಧಿಕೃತಪಡಿಸಿರುವ ಭಾರತೀಯ ಹವಾಮಾನ ಇಲಾಖೆ (IMD)ಯು ಅತ್ಯಧಿಕ ಉ‍ಷ್ಣಾಂಶದ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರು, ಮಾರ್ಚ್ 01: ಕರ್ನಾಟಕದಲ್ಲಿ ದಿನೇ ದಿನೇ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಇತ್ತ ಬೇಸಿಗೆಕಾಲದ ಆರಂಭವನ್ನು ಅಧಿಕೃತಪಡಿಸಿರುವ ಭಾರತೀಯ ಹವಾಮಾನ ಇಲಾಖೆ (IMD)ಯು ಅತ್ಯಧಿಕ ಉ‍ಷ್ಣಾಂಶದ ದಾಖಲಾಗುವ ಬಗ್ಗೆ ಮುನ್ಸೂಚನೆಯನ್ನು ನೀಡಿದೆ.

ಮಾರ್ಚ್, ಏಪ್ರೀಲ್ ಹಾಗೂ ಮೇ ಈ ಮೂರು ತಿಂಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲವಾಗಿದೆ. ಆದರೆ ಈ ಭಾರಿ ಅತ್ಯಧಿಕ ಬಿಸಿಲು ಬೀಳಲಿದೆ. ಕಳೆದ ಫೆಬ್ರವರಿಯಲ್ಲಿ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಬಿಸಿಲು ಕ್ರಮೇಣ ಏರತೊಡಗಿತು. ಆದರೆ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಹೆಚ್ಚಾಗಿರಲಿಲ್ಲ. ಆದರೆ ಮುಂದಿನ 90ದಿನ ಕರ್ನಾಟಕ ಅತ್ಯಧಿಕ ಬಿಸಲಿಗೆ ಸಾಕ್ಷಿಯಾಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನ ಮತ್ತು ಹವಾಮಾನ ತಜ್ಞ ಡಾ.ಪ್ರಸಾದ್ ಎಚ್ಚರಿಕೆ ನೀಡಿದರು.

Karnataka Temperature: 50°C Temperature Will Be Record In Current Summer Season Expect

ಒಟ್ಟು ಬೇಸಿಗೆ ಅವಧಿ ಮೂರು ತಿಂಗಳಲ್ಲಿ ಅದರಲ್ಲೂ ಏಪ್ರೀಲ್‌ನಲ್ಲಿ ಕರ್ನಾಟಕದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ಕಂಡು ಬರುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಸಾಮಾನ್ಯ/ವಾಡಿಕೆಗಿಂತಲೂ ಅಧಿಕ ಬಿಸಿಲು ಬೀಳಲಿದೆ. ಅಂದರೆ ಗರಿಷ್ಠ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಚಾಮರಾಜನಗರ, ರಾಮನಗರ ಮತ್ತಿತರ ಕಡೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ. ಉಳಿದ ಜಿಲ್ಲೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತಾಪಮಾನ ಕಂಡು ಬರಲಿದೆ. ಇನ್ನು ರಾಜ್ಯದ ಕನಿಷ್ಠ ತಾಪಮಾನ ನೋಡುವುದಾದರೆ ಮೂರು ತಿಂಗಳು ಕರಾವಳಿಯಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯವೆಂಬಂತೆ ಕನಿಷ್ಠ ಉಷ್ಣಾಂಶ ಕಂಡು ಬರಲಿದೆ.

Karnataka Temperature: 50°C Temperature Will Be Record In Current Summer Season Expect

ಶೀತ ಅಲೆ ಮುನ್ನೆಚ್ಚರಿಕೆ!

ಮಾರ್ಚ್‌ನಲ್ಲಿ ರಾಜ್ಯದ ಯಾವ ಭಾಗದಲ್ಲಿಯೂ ಶೀತ ಅಲೆಯ ಮುನ್ನೆಚ್ಚರಿಕೆ ಇಲ್ಲ. ಆದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧಡೆ ಶೀತ ಅಲೆ ಕಂಡು ಬರಲಿದೆ. ಈ ವೇಳೆ ಬೆಳಗ್ಗೆ ಮತ್ತು ಸಂಜೆ ಚಳಿ, ಮಂಜು, ಕಂಡು ಬರುವ ಸಾಧ್ಯತೆ ಇದೆ.

ಮಾರ್ಚ್‌ನಲ್ಲಿ ಮಳೆ ನೋಡುವುದಾದರೆ ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಹಾಸನ, ಮೈಸೂರು ಸಾಮಾನ್ಯದಿಂದ ತುಸು ಹೆಚ್ಚು ಮಳೆ ಆಗಬಹುದು. ಇನ್ನೂ ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಅತೀ ಕನಿಷ್ಠ ಮಳೆ ಬೀಳುವ ಸಾಧ್ಯತೆ ಶೇ. 50ರಷ್ಟಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+