ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಈ ಹಣ್ಣು ಮಾರಿದ್ರೆ ಲೈಸನ್ಸ್ ರದ್ದು: ಆಹಾರ ಇಲಾಖೆ ಎಚ್ಚರಿಕೆ!

ಬೆಂಗಳೂರು: ಆನ್‌ಲೈನ್‌ ಶಾಪಿಂಗ್‌ ವೇದಿಕೆಗಳಲ್ಲಿ ವಿಷಕಾರಿ ದತ್ತೂರ ಹಣ್ಣು ಮತ್ತು ಬೀಜಗಳನ್ನು ಆಹಾರ ಹಾಗೂ ಮಾನವ ಸೇವನೆಗಾಗಿ ಮಾರಾಟ ಮಾಡಿರುವುದು ಪತ್ತೆಯಾಗಿದ್ದು, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FDA) ಕಠಿಣ ಕ್ರಮ ಕೈಗೊಂಡಿದೆ. Amazon, Swiggy Instamart ಹಾಗೂ BigBasket ಸಂಸ್ಥೆಗಳ ಆಹಾರ ಪರವಾನಗಿ ಮತ್ತು ನೋಂದಣಿಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಆನ್‌ಲೈನ್‌ ಮೂಲಕ ವಿಷಕಾರಿ ದತ್ತೂರ (Datura) ಹಣ್ಣು ಮತ್ತು ಬೀಜಗಳನ್ನು ಮಾನವ ಸೇವನೆಗಾಗಿ ಮಾರಾಟ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FDA) ಕಠಿಣ ಕ್ರಮ ಕೈಗೊಂಡಿದೆ. Amazon, Swiggy Instamart ಮತ್ತು BigBasketಗೆ ನೀಡಲಾಗಿದ್ದ ಆಹಾರ ಪರವಾನಗಿ ಹಾಗೂ ನೋಂದಣಿಗಳನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ.

Karnataka Suspends Food Licences of Amazon Instamart BigBasket Over Datura Sale

ವಿಭಾಗೀಯ ತನಿಖೆ ವೇಳೆ ಈ ಮೂರು ಇ-ಕಾಮರ್ಸ್‌ ವೇದಿಕೆಗಳಲ್ಲಿ ದತ್ತೂರ ಹಣ್ಣು ಮತ್ತು ಬೀಜಗಳನ್ನು ಆಹಾರ ಹಾಗೂ ಮಾನವ ಬಳಕೆಗಾಗಿ ಮಾರಾಟಕ್ಕೆ ಇಡಲಾಗಿತ್ತು ಎಂಬುದು ಪತ್ತೆಯಾಗಿದೆ. ಕೆಲವು ಪ್ಯಾಕೆಟ್‌ಗಳ ಮೇಲೆ FSSAI ಪರವಾನಗಿ ಅಥವಾ ನೋಂದಣಿ ಸಂಖ್ಯೆಗಳೂ ಕಂಡುಬಂದಿವೆ.

ದತ್ತೂರ ವಿಷಕಾರಿ; ಸಾರ್ವಜನಿಕ ಆರೋಗ್ಯಕ್ಕೆ ಅಪಾಯ

ದತ್ತೂರ ವಿಷಕಾರಿ ಸಸ್ಯವಾಗಿದ್ದು, ಅದರ ಹಣ್ಣು ಮತ್ತು ಬೀಜಗಳ ಸೇವನೆ ಗಂಭೀರ ಆರೋಗ್ಯ ಅಪಾಯವನ್ನು ಉಂಟುಮಾಡಬಹುದು ಎಂದು FDA ತಿಳಿಸಿದೆ. ಹೀಗಾಗಿ ಮಾನವ ಸೇವನೆಗಾಗಿ ದತ್ತೂರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಎಲ್ಲಾ ಆನ್‌ಲೈನ್‌ ಲಿಸ್ಟಿಂಗ್‌ಗಳು ಹಾಗೂ ಜಾಹೀರಾತುಗಳನ್ನು ತಕ್ಷಣ ತೆಗೆದುಹಾಕುವಂತೆ ಮೂರು ಕಂಪನಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಧತ್ತೂರ ಉತ್ಪನ್ನಗಳನ್ನು ಆಹಾರವಾಗಿ ಮಾರಾಟ, ವಿತರಣೆ ಹಾಗೂ ಪ್ರದರ್ಶನ ಮಾಡುವುದನ್ನೂ ನಿಲ್ಲಿಸುವಂತೆ ಆದೇಶಿಸಲಾಗಿದೆ.

ಆನ್‌ಲೈನ್‌ ವೇದಿಕೆಗಳಿಗೆ ಧತ್ತೂರ ಉತ್ಪನ್ನಗಳನ್ನು ಪೂರೈಸುತ್ತಿದ್ದ ವ್ಯಾಪಾರಿಗಳು ಹಾಗೂ ಸಂಸ್ಥೆಗಳ ಆಹಾರ ಪರವಾನಗಿ ಮತ್ತು ನೋಂದಣಿಗಳನ್ನೂ ಅಮಾನತುಗೊಳಿಸಲು FDA ಆದೇಶಿಸಿದೆ. ಸಂಬಂಧಪಟ್ಟ ಕಂಪನಿಗಳು ಹಾಗೂ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳ ಕುರಿತು ತಕ್ಷಣ Compliance Report ಸಲ್ಲಿಸಬೇಕು. ವರದಿಗಳನ್ನು ಪರಿಶೀಲಿಸಿದ ಬಳಿಕ ಅಮಾನತು ತೆರವುಗೊಳಿಸುವ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

Amazon, Instamart, BigBasket ಹೇಳಿದ್ದೇನು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೂರು ಇ-ಕಾಮರ್ಸ್‌ ಕಂಪನಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದವು. Amazon ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ. Swiggy Instamart ಧತ್ತೂರ ಉತ್ಪನ್ನಗಳ ಲಿಸ್ಟಿಂಗ್‌ ಮತ್ತು ಮಾರಾಟದ ವಿರುದ್ಧ ಕೈಗೊಂಡ ಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದೆ, ಹೆಚ್ಚುವರಿ ಸಮಯ ಕೋರಿದೆ.

BigBasket ಮಾತ್ರ ಧತ್ತೂರ ಹಣ್ಣು ಮತ್ತು ಬೀಜಗಳ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ FDAಗೆ ತಿಳಿಸಿದೆ. ಇನ್ನು ಮುಂದೆ ಇಂತಹ ಉತ್ಪನ್ನಗಳ ಲಿಸ್ಟಿಂಗ್‌ ಇದ್ದರೆ Not for Human Consumption (ಮಾನವ ಸೇವನೆಗೆ ಅಲ್ಲ) ಎಂಬ ಸ್ಪಷ್ಟ ಲೇಬಲ್‌ ಹಾಕುವುದಾಗಿ ತಿಳಿಸಿದೆ.

ಆನ್‌ಲೈನ್‌ ಶಾಪಿಂಗ್‌ ವೇದಿಕೆಗಳಲ್ಲಿ ವಿಷಕಾರಿ ವಸ್ತುಗಳು ಆಹಾರ ಉತ್ಪನ್ನಗಳ ರೂಪದಲ್ಲಿ ಮಾರಾಟವಾಗುತ್ತಿರುವುದು ಪತ್ತೆಯಾಗಿರುವುದು ಇದೀಗ ಆನ್‌ಲೈನ್‌ ಆಹಾರ ಸುರಕ್ಷತೆ ಹಾಗೂ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+