ಕೆಜಿಎಫ್ ಕ್ರೀಡಾ ಕೂಟದಲ್ಲಿ ಪೊಲೀಸ್ ಮಕ್ಕಳ ಕಲರವ
ಕೋಲಾರ, ಡಿಸೆಂಬರ್, 21: ಪೊಲೀಸ್ ಕ್ರೀಡಾಕೂಟದ ಅಂಗವಾಗಿ ಮೂರು ದಿನಗಳಿಂದ ಕೆಜಿಎಫ್ ಚಾಂಪೀಯನ್ ರೀಫ್ಸ್ ನ ಡಿ.ಎ.ಆರ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೊಲೀಸ್ ಮಕ್ಕಳ ಕ್ರೀಡಾಕೂಟ ಭಾನುವಾರ ನಡೆದಿದ್ದು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮಕ್ಕಳ ಕ್ರೀಡಾಕೂಟವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದ ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ, ' ಈ ಹಿಂದೆ ಪೊಲೀಸರಿಗೆ ಮಾತ್ರ ವರ್ಷಕೊಮ್ಮೆ ಕ್ರೀಡಾಕೂಟ ಆಯೋಜಿಸಲಾಗುತಿತ್ತು. ಆದರೆ ಈ ಬಾರಿ ಪೊಲೀಸ್ ಮಕ್ಕಳಿಗೂ ಕ್ರೀಡೆ ಏರ್ಪಡಿಸಿರುವುದು ಸಂತಸದ ವಿಚಾರ. ಇದು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.[ಆ ಪುಟ್ಟ ಬಾಲಕನಿಗೆ ಪೊಲೀಸ್ ಅಧಿಕಾರಿಗಳ ಸೆಲ್ಯೂಟ್!]

ಕೋಲಾರ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ|| ಎಂ. ಮಹೇಂದ್ರ ಮಾತನಾಡಿ, ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಕ್ರೀಡೆ ಕಡೆಗೆ ಒಲವು ತೋರುವಂತೆ ಪ್ರೇರೇಪಿಸಬೇಕು. ಚಿಕ್ಕವಯಸ್ಸಿನಿಂದಲೇ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿದ್ದಲ್ಲಿ ದೈಹಿಕವಾಗಿ ಸದೃಢರಾಗುವುದಲ್ಲದೆ, ಮಾನಸಿಕವಾಗಿ ಪ್ರಬಲರಾಗುವ ಎಲ್ಲಾ ಅವಕಾಶಗಳೂ ಇವೆ ಎಂದು ಕಿವಿಮಾತು ಹೇಳಿದರು.[ಪಿಲಿಕುಳ ನಿಸರ್ಗ ಧಾಮದಲ್ಲಿ ಆಯುಷ್ ಹಬ್ಬ ಸಂಭ್ರಮ]
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಚ್. ಆರ್ ಭಗವಾನ್ ದಾಸ್, ಬೆಮೆಲ್ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ರಾಜ್ ಶೇಖರ್, ಅಂತರಾಷ್ಟ್ರೀಯ ಕರಾಟೆ ಪಟು ರಮೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.












Click it and Unblock the Notifications