ಪೊಲೀಸ್ ಇಲಾಖೆ ಸೇರಲು ಇಲ್ಲಿದೆ ಸುವರ್ಣಾವಕಾಶ
ಬೆಂಗಳೂರು, ಮಾರ್ಚ್1- ಕಾನೂನು ಸುವ್ಯವಸ್ಥೆ ಕಾಪಾಡುವ ಶಿಸ್ತಿನ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪೇದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸ್ಪೆಷಲ್ ರಿಸರ್ವ್ ಪೊಲೀಸ್ ಇಲಾಖೆಗೆ (KSRP) ಈ ನೇಮಕಾತಿ ನಡೆಯಲಿದ್ದು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಗೆ ತಕ್ಷಣಕ್ಕೆ 1,000 ಕ್ಕೂ ಹೆಚ್ಚು ಮಂದಿ ಬೇಕಾಗಿದ್ದಾರೆ ಎಂದು ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಪೊಲೀಸ್ ಉಪ ಮಹಾನಿರ್ದೇಶಕ ಕಚೇರಿಯು (ಕಾರ್ಲಟನ್ ಹೌಸ್) ಇಂದು ಪತ್ರಿಕಾ ಜಾಹೀರಾತು ನೀಡಿದೆ. ಕರ್ನಾಟಕದ 6 ಬೆಟಾಲಿಯನ್ ಗಳಿಗೆ ಅನ್ವಯವಾಗುವಂತೆ ಈ ನೇಮಕಾತಿ ನಡೆಯಲಿದೆ.

ವಯೋಮಿತಿ ಸಾಮಾನ್ಯ ವರ್ಗಕ್ಕೆ 18 ರಿಂದ 25 ವರ್ಷ. ಮೀಸಲಾತಿಯನ್ವಯ ರಿಯಾಯಿತಿಯೂ ಇರುತ್ತದೆ. ಶೈಕ್ಷಣಿಕ ಅರ್ಹತೆ- ಎಸ್ಎಸ್ಎಲ್ ಸಿ ಪಾಸಾಗಿರಬೇಕು. ಗಮನಿಸಿ, ಆನ್ ಲೈನ್ ಮೂಲಕವಷ್ಟೇ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 30, 2014. ಬೆಳಗಾವಿ, ಮೈಸೂರು, ಮಂಗಳೂರು, ಶಿವಮೊಗ್ಗ, ಶಿಗ್ಗಾಂವ್ ಮತ್ತು ಹಾಸನ KSRP ಬೆಟಾಲಿಯನ್ ಗಳಿಗೆ ಈ ನೇಮಕಾತಿ ನಡೆಯುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ http://www.ksp.gov.in/home/index.php











Click it and Unblock the Notifications