ಶಾಲಾ & ಕಾಲೇಜು ಮಕ್ಕಳಿಗೆ ದಸರಾ ರಜೆ ಸಮಯದಲ್ಲೇ ಭರ್ಜರಿ ಸುದ್ದಿ ಕೊಟ್ಟ ಸರ್ಕಾರ! SSLC And PUC Exam
ಶಾಲಾ & ಕಾಲೇಜು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಆಧಾರವಾಗಿ ಇರುವುದೇ SSLC ಹಾಗೂ PUC ಪರೀಕ್ಷೆಗಳು. ಯಾಕಂದ್ರೆ ಎಸ್‌ಎಸ್‌ಎಲ್ ಪರೀಕ್ಷೆ ಫಲಿತಾಂಶ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಮಕ್ಕಳ ಪೋಷಕರು ಕೂಡ ಎಸ್‌ಎಸ್‌ಎಲ್ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಿ ಗೆಲ್ಲಿಸುತ್ತಾರೆ. ಹೀಗಿದ್ದಾಗಲೇ, ಶಾಲಾ & ಕಾಲೇಜು ಮಕ್ಕಳಿಗೆ ದಸರಾ ರಜೆ ಸಮಯದಲ್ಲೇ ಭರ್ಜರಿ ಸುದ್ದಿ ಕೊಟ್ಟ ಸರ್ಕಾರ!
ಹೌದು, ಪ್ರತಿಯೊಬ್ಬ ವಿದ್ಯಾರ್ಥಿಗೂ SSLC ಎನ್ನುವುದು ಹೇಗೆ ಒಂದು ಪ್ರಮುಖ ಘಟ್ಟವೋ ಅದೇ ರೀತಿ ಪಿಯುಸಿ ಕೂಡ ಬಹುಮುಖ್ಯ. ಇಡೀ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಶೈಕ್ಷಣಿಕ ವಿಚಾರದಲ್ಲಿ, ಭಾರಿ ದೊಡ್ಡ ಹೆಸರನ್ನು ಕೂಡ ಮಾಡಿದೆ. ಹೀಗಾಗಿ ಸರ್ಕಾರ ಕೂಡ ಅತ್ಯಂತ ಕಾಳಜಿ ವಹಿಸಿಯೇ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ. ಸಾಕಷ್ಟು ಸೌಲಭ್ಯಗಳನ್ನು ಕೂಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕಾರಣಕ್ಕೆ ಒದಗಿಸಲಾಗುತ್ತಿದೆ. ಇಂತಹ ಸಮಯದಲ್ಲೇ, ಶಾಲಾ & ಕಾಲೇಜು ಮಕ್ಕಳಿಗೆ ದಸರಾ ರಜೆಯ ವೇಳೆ ಸರ್ಕಾರ ಕೊಟ್ಟ ಗುಡ್ ನ್ಯೂಸ್ ಏನು ಗೊತ್ತಾ?

ಪರೀಕ್ಷೆ ಬಗ್ಗೆ ಭರ್ಜರಿ ಸುದ್ದಿ!
ಅಂದಹಾಗೆ ಇದೀಗ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ 2026 ಎಸ್‌ಎಸ್‌ಎಲ್‌ಸಿ & ದ್ವಿತೀಯ ಪಿಯುಸಿ ಪರೀಕ್ಷೆ-1 ಹಾಗೂ 2ರ ತಾತ್ಕಾಲಿಕ ವೇಳಾಪಟ್ಟಿ ರಿಲೀಸ್ ಮಾಡಿದೆ. ಅಧಿಕೃತ ವೆಬ್‌ಸೈಟ್ ಆಗಿರುವ, www.kseab.karnataka.gov.in ನಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮಂಡಳಿ ಪ್ರಕಟಿಸಿದ 2026ರ ಎಸ್‌ಎಸ್‌ಎಲ್‌ಸಿ & ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಯ ವಿಚಾರ ಸಂಬಂಧ ಇದೀಗ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 2025 ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 09 ತನಕ ಕಾಲಾವಕಾಶ ನೀಡಿರುತ್ತಾರೆ.
ಸಂಪರ್ಕ ಮಾಡಬೇಕಾದ ವಿಳಾಸ ಯಾವುದು?
ಹೀಗೆ 2026 ಎಸ್‌ಎಸ್‌ಎಲ್‌ಸಿ & ದ್ವಿತೀಯ ಪಿಯುಸಿ ಪರೀಕ್ಷೆ-1 & 2ರ ತಾತ್ಕಾಲಿಕ ವೇಳಾಪಟ್ಟಿ ಸಂಬಂಧ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಮಂಡಳಿಯ ಇ-ಮೇಲ್ ವಿಳಾಸ: [email protected] ಗೆ ಸಂಪರ್ಕಿಸಬಹುದು. ಇದರ ಜೊತೆಗೆ ಹಾರ್ಡ್ ಕಾಪಿಯನ್ನ ಕೂಡ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು 560003 ಈ ವಿಳಾಸಕ್ಕೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೇ ಇಲ್ಲಿ, ಕೊನೆಯ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.












Click it and Unblock the Notifications