Breaking News: ಭಾಷಣ ಓದದೇ ಹೊರನಡೆದ ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಕೆಂಡಾಮಂಡಲ, ಹೈಡ್ರಾಮಾ
ಬೆಂಗಳೂರು: ರಾಜ್ಯದಲ್ಲಿ 2026 ವರ್ಷದ ಮೊದಲ ಜಂಟಿ ಅಧಿವೇಶನ ಆರಂಭವಾಗಿದೆ. 'ಜಿ ರಾಮ್ ಜಿ' ಯೋಜನೆ ಹೆಸರು ಬದಲಾವಣೆಗೆ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ಅದನ್ನು ಅಧಿವೇಶನದ ಮೊದಲ ದಿನದ ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ ಭಾಷಣ ಓದದೇ ರಾಜ್ಯಪಾಲರು ಅಧಿವೇಶನದಿಂದ ಹೊರ ನಡೆದರು. ಅವರ ಈ ನಡೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕರ ಪೈಕಿ ಮಾಜಿ ಸಚಿವ ಬಿ.ಕೆ ಹರಿಪ್ರಸಾದ್ ರಾಜ್ಯಾಪಾಲರನ್ನು ಅಡ್ಡಿಗಟ್ಟಿ ತಡೆಯಲು ಮುಂದಾದ ಬೆಳವಣಿಗೆ ಗುರುವಾರ ಸದನದಲ್ಲಿ ನಡೆಯಿತು.
ಸದನದಿಂದ ರಾಜ್ಯಪಾಲರು ಹೊರ ನಡೆಯುತ್ತಿದ್ದಾಗ, ಅವರನ್ನು ತಡೆಯಲು ಶಾಸಕ ಬಿ.ಕೆ.ಹರಿಪ್ರಸಾದ್ ಮುಂದಾಗಿದ್ದಾರೆ. ರಾಜ್ಯಪಾಲರನ್ನು ಅಡ್ಡಗಟ್ಟಿ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಜೊತೆಗೆ ಅವರು ಹೊರ ನಡೆದಿದ್ದಾರೆ. ಈ ವೇಳೆ ಹರಿಪ್ರಸಾದ್ ಅವರ ಶರ್ಟ್ ಹರಿದಿದೆ. ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ನಾಯಕರು, ಸಂವಿಧಾನ ನಿಯಮ ಉಲ್ಲಂಘಿಸಿದ್ದಾರೆ ಎಂದು ಘೋಷಣೆ ಕೂಗಿದರು.

ರಾಜ್ಯಪಾಲರು ಹೊರ ನಡೆಯುವಾಗ ಬಿಕೆ ಹರಿಪ್ರಸಾದ್ ಅವರು ಮಾತ್ರವಲ್ಲದೇ ಇತರ ನಾಯಕರು ಅಡ್ಡಗಟ್ಟಲು ಪ್ರಯತ್ನಿಸಿದರು. ಒಟ್ಟಾರೆ ಇಂದಿನ ಜಂಟಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಚುಟುಕು ಭಾಷಣ ಬಳಿಕ ಹೈಡ್ರಾಮಾವೇ ನಡೆಯಿತು.
'ಎಂನರೇಗಾ' ಯೋಜನೆ ಹೆಸರನ್ನು 'ಜಿ ರಾಮ್ ಜಿ' ಎಂದು ಬದಲಾವಣೆ ಮಾಡಿದ್ದನ್ನು ಕಾಂಗ್ರೆಸ್ ಆಕ್ಷೇಪಿಸಿತ್ತು. ಅದರ ಬಗೆಗಿನ ಅಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸೇರಿಸಿತ್ತು. ರಾಜ್ಯಪಾಲರು ಭಾಷಣದ ಮೊದಲ ಹದಿಮೂರು ಸಾಲು ಓದಿ, ನನ್ನ ಸರ್ಕಾರಕ್ಕೆ ಶುಭಾಷಯವೆಂದು ಒಂದೆರಡು ನಿಮಿಷ ಮಾತನಾಡಿ ಭಾಷಣ ಅಂತ್ಯಗೊಳಿಸಿ ಹೊರ ನಡೆದರು. ಇದರಿಂದ ಸಂವಿಧಾನದ ನಿಯಮ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ರಾಜ್ಯಪಾಲರು ಕೇಂದ್ರ ಬಿಜೆಪಿ ಪರ ನಿಲುವು ತಾಳಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದೆಲ್ಲ ಕೈ ನಾಯಕರು ದೂರಿದರು.
ಇದೆಲ್ಲ ಹೈಡ್ರಾಮಾ ನಡೆದ ಬೆನ್ನಲ್ಲೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ, ಸದನದಲ್ಲಿ ನಾಯಕರು ನಡೆದುಕೊಂಡ ರೀತಿಗೆ ಬೇಸರ ಹೊರ ಹಾಕಿದರು. ಸದನದಲ್ಲಿ ಕಾಂಗ್ರೆಸ್ ನಾಯಕರು ಗೂಂಡಾಗಿರಿ ನಡೆಸುತ್ತಿದ್ದಾರೆ. ರಾಜ್ಯಪಾಲರನ್ನು ಅಡ್ಡಗಟ್ಟುವುದು, ಒತ್ತಾಯಿಸುವು ನಡೆ ಸರಿಯಲ್ಲ. ಜನ ಬೆಂಬಲ ಇದೆ ಎಂದು ಸರ್ಕಾರದ ಏನೆ ಮಾಡಿದರು ಜನ ಸಹಿಸಲ್ಲ. ಸರ್ಕಾರದ ನಡೆಯನ್ನು ಜನ ನೋಡುತ್ತಿದ್ದಾರೆ, ಬುದ್ಧಿ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಹ ಕಾಂಗ್ರೆಸ್ ನಾಯಕರ ನಡೆಗೆ ಅಸಮಾಧಾನ ಹೊರ ಹಾಕಿದರು.
-
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications