ಕರ್ನಾಟಕದಲ್ಲಿ ಹಲಾಲ್ ಮುಕ್ತ ದೀಪಾವಳಿಗೆ ಹಿಂದೂ ಜನಜಾಗೃತಿ ಸಮಿತಿ ಕರೆ
ಬೆಂಗಳೂರು, ಅಕ್ಟೋಬರ್ 18: ಕರ್ನಾಟಕದಲ್ಲಿ ಈ ವರ್ಷ ಹಲಾಲ್ ಮುಕ್ತ ದೀಪಾವಳಿ ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ. ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಎಲ್ಲಾ ಹಿಂದೂಗಳಿಗೆ ಕರೆ ಕೊಟ್ಟಿದೆ.
ಈ ಕುರಿತು ಮಾತನಾಡಿರುವ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹಲಾಲ್ ಬಹಿಷ್ಕಾರ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ರಾಷ್ಟ್ರದಾದ್ಯಂತ ಹರಡಲಿದೆ ಎಂದಿದ್ದಾರೆ.4
ಪಿಜ್ಜಾ ಹಟ್, ಕೆಎಫ್‌ಸಿ ಅಥವಾ ಮೆಕ್‌ಡೊನಾಲ್ಡ್‌ಗಳಂತಹ ಆಹಾರ ಮಳಿಗೆಗಳು ಹಲಾಲ್ ಆಹಾರವನ್ನು ಮಾತ್ರ ಏಕೆ ನೀಡುತ್ತವೆ ಎಂದು ರಮೇಶ್ ಶಿಂಧೆ ಪ್ರಶ್ನೆ ಮಾಡಿದರು. ಹಿಂದೂ ಗ್ರಾಹಕರಿಗೆ ಹಲಾಲ್ ಆಹಾರವನ್ನು ತಿನ್ನುವಂತೆ ಏಕೆ ಒತ್ತಾಯಿಸಬೇಕು ಎಂದು ಕೇಳಿದರು.

ಹಲಾಲ್ ಉತ್ಪನ್ನ ಬಹಿಷ್ಕರಿಸುವಂತೆ ಕರೆ:
ಹಲಾಲ್ ಆಹಾರ ನೀಡುವ ಸ್ಥಳದಲ್ಲಿ ಹಂದಿಮಾಂಸ ಮತ್ತು ಪೆಪ್ಪೆರೋನಿ ಪಿಜ್ಜಾಗಳನ್ನು ನೀಡಲಾಗುವುದಿಲ್ಲ. ಈ ತಾರತಮ್ಯ ಏಕೆ, ಈ ದೀಪಾವಳಿಯಲ್ಲಿ ನಾವು ಎಲ್ಲಾ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸುತ್ತೇವೆ ಎಂದು ರಮೇಶ್ ಶಿಂಧೆ ಕರೆ ನೀಡಿದರು.
ಕಾನೂನುಬಾಹಿರವಾಗಿ ಹಲಾಲ್ ಪದ್ಧತಿ:
ಹಿಂದೂಗಳಿಗೆ ಮಾತ್ರ ಇಂತಹ ರೂಢಿಗಳು ಏಕೆ. ಹಿಂದೂಗಳು ಜನಸಂಖ್ಯೆಯ ಶೇಕಡಾ 80ರಷ್ಟಿದ್ದಾರೆ. ಹಲಾಲ್ ಪ್ರಮಾಣೀಕರಣವನ್ನು ಕಾನೂನುಬಾಹಿರವಾಗಿ ಮಾಡಲಾಗುತ್ತದೆ. ಇದನ್ನು ತೊಲಗಿಸಲು ಹೋರಾಟ ನಡೆಸಬೇಕಿದ್ದು, ಸರ್ಕಾರದಿಂದ ಯಾವುದೇ ಪ್ರಮಾಣ ಪತ್ರ ನೀಡಿಲ್ಲ. ಆಹಾರ ಪರವಾನಗಿ ನೀಡುವ ಸರ್ಕಾರದ ಎರಡು ಇಲಾಖೆಗಳು FSSAI ಮತ್ತು FDA ಮತ್ತು ಈ ಹಲಾಲ್ ಪ್ರಮಾಣೀಕರಣವು ಕಾನೂನುಬಾಹಿರವಾಗಿದೆ ಎಂದು ಹೇಳಿದರು. ಹಲಾಲ್ ಪ್ರಮಾಣೀಕರಣವು ಮಾಂಸ ರಫ್ತಿಗಾಗಿಯೇ ಹೊರತು ಆಂತರಿಕ ಬಳಕೆಗಾಗಿ ಅಲ್ಲ ಎಂದು ಉಲ್ಲೇಖಿಸಿದರು.

ಹಲಾಲ್ ಕಟ್ ಕುರಿತು ಕೇಂದ್ರಕ್ಕೆ ಪತ್ರ:
ಹಿಂದೂಗಳು ಈ ದೀಪಾವಳಿಯಲ್ಲಿ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನಾವು ಎಲ್ಲಾ ಹಿಂದೂಗಳಿಗೆ ಕರೆ ನೀಡುತ್ತೇವೆ. ಅಕ್ರಮವಾಗಿ ಹಲಾಲ್ ಪ್ರಮಾಣೀಕರಣವನ್ನು ನಿಲ್ಲಿಸಬೇಕು ಮತ್ತು ಈ ಬಗ್ಗೆ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದೇವೆ ಎಂದು ರಮೇಶ್ ಶಿಂಧೆ ಹೇಳಿದರು.












Click it and Unblock the Notifications