ಕರ್ನಾಟಕ: ಪೊಲೀಸರ ಆತ್ಮಹತ್ಯೆ ಆಘಾತಕಾರಿ ಅಂಕಿ ಅಂಶ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜುಲೈ 12: ವಾರದೊಳಗೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣವನ್ನು ಕಂಡು ಕರ್ನಾಟಕ ಬೆಚ್ಚಿದೆ. ಕರ್ನಾಟಕ ಅಸೆಂಬ್ಲಿಯಲ್ಲಿ ಖಾಕಿಗೆ ನ್ಯಾಯ ಸಿಗಬೇಕು ಎಂದು ಖಾದಿ ತೊಟ್ಟವರು ಮಾತಿನ ಚಕಮಕಿ ನಡೆಸಿದ್ದಾರೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ವಿಡಿಯೋದಲ್ಲಿರುವ ಮೂವರು ಅಧಿಕಾರಿಗಳು ಹಾಗೂ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಲಾಗುತ್ತಿದೆ.['ಮುಖ್ಯಮಂತ್ರಿಗಳು ಕೇಳಿದರೆ ಒಂದು ನಿಮಿಷದಲ್ಲಿ ರಾಜೀನಾಮೆ ಕೊಡುವೆ']

ಆದರೆ, ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಯ ಅಂಕಿ ಅಂಶಗಳನ್ನು ತೆಗೆದು ನೋಡಿದರೆ ಕಳೆದ 12 ವರ್ಷಗಳಲ್ಲಿ ಸುಮಾರು 120ಕ್ಕೂ ಅಧಿಕ ಅಧಿಕಾರಿಗಳು ಸಾವನ್ನಪ್ಪಿರುವ ಪ್ರಕರಣಗಳು ಕಣ್ಮುಂದೆ ಬರುತ್ತದೆ. [ಹಂದಿಗುಂದಿ ಗ್ರಾಮದ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ]

ಆತ್ಮಹತ್ಯೆಗೆ ಕಾರಣಗಳು ಬೇರೆ ಬೇರೆ ಇರುವುದು ಗಮನಾರ್ಹ. ಕಡಿಮೆ ಸಂಬಳ, ರಾಜಕೀಯ ಒತ್ತಡ ಹಾಗೂ ಹಿರಿಯ ಅಧಿಕಾರಿಗಳಿಂದ ಕಿರುಕುಳ ಪ್ರಮುಖ ಕಾರಣಗಳಾಗಿವೆ.

ಅಂಕಿ ಅಂಶ ಸರಿಯಾದ ದಾಖಲಾತಿ ಇಲ್ಲ

ಅಂಕಿ ಅಂಶ ಸರಿಯಾದ ದಾಖಲಾತಿ ಇಲ್ಲ

ರಾಷ್ಟೀಯ ಕ್ರಿಮಿನಲ್ ರೆಕಾರ್ಡ್ಸ್ ಬ್ಯುರೋ (NCRB) ಬಳಿ ಕಳೆದ 10 ವರ್ಷಗಳ ದಾಖಲೆ ಮಾತ್ರ ಲಭ್ಯವಿದೆ. 2003 ರಿಂದ 2013ರ ಅವಧಿಯಲ್ಲಿ 122 ಮಂದಿ ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, 2014 ರಿಂದ 2016 ಅವಧಿಯ ಅಂಕಿ ಅಂಶ ಕಲೆಹಾಕಿ ಕೂಡಿಸಿದರೆ ಮೊತ್ತ ದ್ವಿಗುಣವಾಗಲಿದೆ.ಇವೆಲ್ಲವೂ ಅಧಿಕೃತ ದಾಖಲಾದ ಪ್ರಕರಣಗಳಾಗಿವೆ

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ವಿಡಿಯೋ ಸಾಕ್ಷಿ ಇದೆ

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ವಿಡಿಯೋ ಸಾಕ್ಷಿ ಇದೆ

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ವಿಡಿಯೋ ಸಾಕ್ಷಿ ಇದೆ. ರಾಜಕೀಯ ಒತ್ತಡ, ಹಿರಿಯ ಅಧಿಕಾರಿಗಳು ಹಾಗೂ ಅಂದಿನ ಗೃಹ ಸಚಿವ ಕೆಜೆ ಜಾರ್ಜ್ ಅವರ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ.

ರಾಜಕೀಯ ಒತ್ತಡ, ಕಿರುಕುಳ ಪ್ರಮುಖ ಕಾರಣ

ರಾಜಕೀಯ ಒತ್ತಡ, ಕಿರುಕುಳ ಪ್ರಮುಖ ಕಾರಣ

ಆತ್ಮಹತ್ಯೆಗೆ ಶರಣಾದ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರ ಪ್ರಕಾರ, ರಾಜಕೀಯ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳವೇ ಮುಖ್ಯ ಕಾರಣ ಎನ್ನಬಹುದು. ಸಂಬಳ ಕಡಿಮೆ, ವರ್ಗಾವಣೆ ಕಿರಿಕಿರಿ ಇದ್ದರೂ ಎಲ್ಲವನ್ನು ಸಹಿಸಿಕೊಂಡು ಕಾರ್ಯ ನಿರ್ವಹಿಸುವ ಅನೇಕ ಮಂದಿ ಸಿಬ್ಬಂದಿಗಳಿದ್ದಾರೆ.

ವಯಸ್ಸಿನ ಮಿತಿ ಇಲ್ಲ

ವಯಸ್ಸಿನ ಮಿತಿ ಇಲ್ಲ

ಆತ್ಮಹತ್ಯೆಗೆ ಶರಣಾಗುವವರ ಪೈಕಿ 35 ರಿಂದ 45 ವರ್ಷಗಳ ಅಂತರದ ಸಿಬ್ಬಂದಿಯೇ ಅಧಿಕ. 40 ವರ್ಷ ಮೇಲ್ಪಟ್ಟರು ಕಡಿಮೆ ಸಂಬಳದ ಆರೋಪ ಮಾತ್ರ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿತ್ತು.ಆದರೆ, ಪ್ರತಿಭಟನೆಯ ಕಿಚ್ಚನ್ನು ಆರಂಭದಲ್ಲೇ ಹೊಸಕಿ ಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The incidents in which two police officers from Karnataka committed suicide in a span of a week has hogged headlines. Cop suicides are nothing new in the state. In the past 12 years the state has witnessed over 120 cop suicides.
Please Wait while comments are loading...