ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕದ ಯಾತ್ರಿಗಳು ಸಂಕಷ್ಟದಲ್ಲಿ
ಬೆಂಗಳೂರು, ಜುಲೈ 02: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ 200 ಮಂದಿ ಯಾತ್ರಿಗಳು ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮಾನಸ ಸರೋವರ ಯಾತ್ರೆಯ ಹಾದಿಯಲ್ಲಿ ನೇಪಾಳದ ಸಿಮಿಕೋಟ್ನ ಎಂಬಲ್ಲಿ ಭಾರಿ ಮಳೆ ಮತ್ತು ಮಂಜಿನಿಂದಾಗಿ ಯಾತ್ರಾರ್ತಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಯಾತ್ರಿಗಳೊಂದಿಗೆ ಸಂಪರ್ಕವನ್ನೂ ಕಡಿದುಕೊಂಡಿದ್ದಾರೆ.

ಮೈಸೂರು, ರಾಮನಗರ, ಚನ್ನಪಟ್ಟಣದ ನಿವಾಸಿಗಳೇ ಹೆಚ್ಚಿಗಿದ್ದಾರೆ ಎನ್ನಲಾಗಿದ್ದು, ಯಾತ್ರಾರ್ತಿಗಳ ನೆರವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಯ ಕರ್ನಾಟಕ ಸ್ಥಾನಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಅಲ್ಲದೆ ನೇಪಾಳದ ಭಾರತ ರಾಯಭಾರಿಯೊಂದಿಗೂ ಮಾತನಾಡಿದ್ದಾರೆ.
ಕರ್ನಾಟಕದ ಎಲ್ಲಾ ಯಾತ್ರಾರ್ತಿಗಳು ಸುರಕ್ಷಿತವಾಗಿಯೇ ಇದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಹೇಳಿದ್ದಾರೆ.
ನೇಪಾಳದಲ್ಲಿ ಸಿಲುಕಿಕೊಂಡಿರುವ ನಿಮ್ಮವರ ಬಗ್ಗೆ ಮಾಹಿತಿ ಪಡೆಯಲು 009779868253838 ಗೆ ಕರೆ ಮಾಡಿ ಮಲ್ಲೇಶ್ ಅಥವಾ ರಾಧಾ ಅವರಿಗೆ ಫೋನ್ ನೀಡುವಂತೆ ಹಿಂದಿಯಲ್ಲಿ ಕೇಳಿದರೆ ಕನ್ನಡಿಗರಿಗೆ ಫೋನ್ ನೀಡುತ್ತಾರೆ.












Click it and Unblock the Notifications