ಭಾರತದ ಹಗುರ ರಿವಾಲ್ವರ್ ನಿದಾರ್ ಖರೀದಿದಾರರಲ್ಲಿ ಕರ್ನಾಟಕದವರೇ ಫಸ್ಟ್
ಬೆಂಗಳೂರು, ಜುಲೈ 28: ದೇಶದ ತುಂಬ ಹಗುರವಾದ ರಿವಾಲ್ವರ್ 'ನಿದಾರ್' ಪಶ್ಚಿಮ ಬಂಗಾಲದ ಇಷಾಪುರ್ ನಲ್ಲಿ ಸ್ಥಳೀಯವಾಗಿ ನಿರ್ಮಾಣ ಮಾಡಲು ಆರಂಭಿಸಿದ ಎರಡು ವರ್ಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹ್ಯಾಂಡ್ ಗನ್ ಗಳ ಖರೀದಿ ಮಾಡಿರುವವರು ಕರ್ನಾಟಕದವರು ಎಂಬ ಸಂಗತಿ ಬಯಲಾಗಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ನೀಡಿದ ಮಾಹಿತಿಯಲ್ಲಿ ಈ ಅಂಶ ತಿಳಿದುಬಂದಿದೆ. .22 ಕ್ಯಾಲಿಬರ್ ನಿದಾರ್ ಅನ್ನು 2016ರಲ್ಲಿ ನಿರ್ಮಿಸಲು ಆರಂಭಿಸಲಾಯಿತು. ಈ ವರೆಗೆ 200 ನಿರ್ಮಿಸಿದ್ದು, ಆ ಪೈಕಿ 196 ಮಾರಾಟವಾಗಿವೆ. ಅವುಗಳಲ್ಲಿ ಅತಿ ಹೆಚ್ಚು ಖರೀದಿ ಮಾಡಿರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವರ ಇಂತಿವೆ.
ಕರ್ನಾಟಕ 37
ಚಂಡೀಗಢ 30
ಹರಿಯಾಣ 30
ದೆಹಲಿ 16
ಪಶ್ಚಿಮ ಬಂಗಾಲ 16
ಪಂಜಾಬ್ 15
ಉತ್ತರಪ್ರದೇಶ 12

ನಿದಾರ್ ಬಹಳ ಕಡಿಮೆ ಬೆಲೆ ಹಾಗೂ ತೂಕದ ರಿವಾಲ್ವರ್. ಬೆಲೆ 44 ಸಾವಿರ ರುಪಾಯಿ ಹಾಗೂ ತೂಕ 250 ಗ್ರಾಮ್. ಅಧಿಕಾರಿಗಳ ಪ್ರಕಾರ, ವೃತ್ತಿಪರರು ಹಾಗೂ ಕಚೇರಿಗೆ ಹೋಗುವವರಿಗೆ ಆತ್ಮರಕ್ಷಣೆಗೆ ಉಪಯೋಗವಾಗಲಿ ಎಂದು ರೂಪಿಸಲಾಗಿದೆ. ಇದನ್ನು ಪುರುಷರು-ಮಹಿಳೆಯರು ಇಬ್ಬರೂ ಬಳಸಬಹುದು.
ಈ ರಿವಾಲ್ವರ್ ನಲ್ಲಿ ಎಂಟು ಸುತ್ತು ಗುಂಡು ಹಾರಿಸಬಹುದು. ಒಂದು ಸಣ್ಣ ಪರ್ಸ್ ಹ್ಯಾಂಡ್ ಬ್ಯಾಗ್ ನಲ್ಲಿ ಅಥವಾ ಟ್ರೌಷರ್ ನ ಪಾಕೆಟ್ ನಲ್ಲಿ ಅಥವಾ ಜಾಕೆಟ್ ನಲ್ಲಿ ನಿದಾರ್ ರಿವಾಲ್ವರ್ ಅನ್ನು ಇಟ್ಟುಕೊಳ್ಳಬಹುದು.












Click it and Unblock the Notifications