• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Breaking: ಕರ್ನಾಟಕದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಕೇಸ್

|

ಬೆಂಗಳೂರು, ಜೂನ್ 24: ಕರ್ನಾಟಕದಲ್ಲಿಂದು 397 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118 ಗಡಿ ದಾಟಿದೆ.

   New Married Couples Donated 50 Beds To A Mumbai Quarantine Centre | Oneindia Kannada

   ದೇಶದಲ್ಲಿ ಹತ್ತು ಸಾವಿರ ಕೊರೊನಾ ವೈರಸ್ ಪ್ರಕರಣ ವರದಿಯಾದ ಹನ್ನೊಂದನೇ ರಾಜ್ಯ ಕರ್ನಾಟಕ ಎನಿಸಿಕೊಂಡಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಹರ್ಯಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಸೋಂಕು ವರದಿಯಾಗಿದೆ.

   ಭಾರತದಲ್ಲಿ ಒಂದೇ ದಿನ 15,968 ಮಂದಿಗೆ ಕೊರೊನಾವೈರಸ್ ಪಾಸಿಟಿವ್!

   ಇಂದಿನ ವರದಿ ಪೈಕಿ ಬೆಂಗಳೂರಿನಲ್ಲಿ 173 ಜನರಿಗೆ ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದೆ. ಬಳ್ಳಾರಿಯಲ್ಲಿ 34 ಕೇಸ್, ಕಲಬುರಗಿಯಲ್ಲಿ 22 ಪ್ರಕರಣ, ರಾಮನಗರದಲ್ಲಿ 22 ಕೇಸ್, ಉಡುಪಿಯಲ್ಲಿ 14 ಪ್ರಕರಣ, ಯಾದಗಿರಿಯಲ್ಲಿ 13 ಜನರಿಗೆ ಸೋಂಕು ತಗುಲಿದೆ.

   ದಕ್ಷಿಣ ಕನ್ನಡದಲ್ಲಿ 12 ಕೇಸ್, ಧಾರವಾಡದಲ್ಲಿ 12 ಪ್ರಕರಣ, ಕೊಪ್ಪಳದಲ್ಲಿ 11 ಕೇಸ್, ರಾಯಚೂರಿನಲ್ಲಿ 9 ಕೇಸ್, ಉತ್ತರ ಕನ್ನಡದಲ್ಲಿ 9 ಕೇಸ್, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 8 ಪ್ರಕರಣ ದಾಖಲಾಗಿದೆ.

   ಇಂದು ಒಟ್ಟು 149 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 6151 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು 14 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ ರಾಜ್ಯದಲ್ಲಿ ಒಟ್ಟು 164 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ 3799 ಜನರು ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

   English summary
   Karnataka reports 397 new COVID19 positive cases and 14 deaths today, taking the total number of positive cases to 10118.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X