Mettur Dam: ತಮಿಳುನಾಡಿಗೆ 70,000 ಕ್ಯೂಸೆಕ್ಸ್ ನೀರು; ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?
ಕರ್ನಾಟಕದ ಕೊಡಗು, ಮೈಸೂರು ಪಶ್ಚಿಮಘಟ್ಟಗಳು ಮತ್ತು ಕೇರಳದ ವಯನಾಡಿಯನಲ್ಲಿ ಭಾರಿ ಮಳೆಯಾಗುತ್ತಿದ್ದು ಕಬಿನಿ ಸೇರಿದಂತೆ ಕಾವೇರಿ ಕೊಳ್ಳದ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಅದರಲ್ಲೂ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ಒಳಹರಿವು ಇದ್ದು, ತಮಿಳುನಾಡಿಗೆ ಅನುಕೂಲವಾಗಿದೆ.
ರಾಜ್ಯದಿಂದ ತಮಿಳುನಾಡಿಗೆ 11,500 ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ಕೊಟ್ಟಿತ್ತು, ಇದಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ 8,000 ಕ್ಯೂಸೆಕ್ಸ್ ಮಾತ್ರ ನೀರು ಬಿಡುತ್ತೇವೆ ಎಂದು ಹೇಳಿತ್ತು. ಆದರೆ ಪ್ರಕೃತಿಯ ಆಲೋಚನೆಯೇ ವಿಭಿನ್ನವಾಗಿತ್ತು.

11,500 ಕ್ಯೂಸೆಕ್ಸ್ ನೀರು ಬಿಡಲು ಹೇಳಿದ್ದರೂ, ಸದ್ಯ ರಾಜ್ಯದಿಂದ ತಮಿಳುನಾಡಿಗೆ 70,000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಮೆಟ್ಟೂರು ಜಲಾಶಯಕ್ಕೆ ಇನ್ನೆರಡು ದಿನಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುವುದು ಖಚಿತವಾಗಿದೆ.
Inview of heavy inflow to Kabini Dam due to Wayanad rains.
— ರವಿ ಕೀರ್ತಿ ಗೌಡ (@ravikeerthi22) July 18, 2024
Kabini Dam outflow is now 65,000 cusecs.
Nugu also outflowing 5000 cusecs.
So 70,000 cusecs in Kabini River.
Bridges along Kabini downstream in Bidarahalli , Madapura , Hommaragalli , Nanjangudu Old Bridge & Suttur…
ಕಬಿನಿ ಜಲಾಶಯದಿಂದ ಅಪಾರ ನೀರು
ಗುರುವಾರ ಬೆಳಗ್ಗೆ ಕಬಿನಿ ಜಲಾಶಯದಿಂದ 65000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ಈ ನೀರು ತಮಿಳುನಾಡಿಗೆ ಹರಿಯಲಿದೆ. ವಯನಾಡಿನಲ್ಲಿ ಭಾರಿ ಮಳೆಯಾದ ಕಾರಣ ಸದ್ಯ ಕಬಿನಿ ಜಲಾಶಯಕ್ಕೆ 46,649 ಕ್ಯೂಸೆಕ್ಸ್ ನೀರು ಒಳಹರಿವು ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿರುವ ನುಗು ಜಲಾಶಯ ಕೂಡ ಭರ್ತಿಯಾಗಿದ್ದು 5,000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಈ ನೀರು ಕೂಡ ತಮಿಳುನಾಡಿಗೆ ಹರಿಯಲಿದೆ. ಒಟ್ಟಾರೆ 70,000 ಕ್ಯೂಸೆಕ್ಸ್ ನೀರು ಹರಿಯಲಿದೆ. ಗುರುವಾರ ಬೆಳಗ್ಗೆ ಬಿಳಿಗುಂಡ್ಲುವಿನಲ್ಲಿ 32,000 ಕ್ಯೂಸೆಕ್ಸ್ ಹರಿವು ದಾಖಲಾಗಿದೆ.
ಕಬಿನಿಯಿಂದ ಬಾರಿ ಪ್ರಮಾಣದ ನೀರು ಹೊರಬಿಟ್ಟಿರುವ ಕಾರಣ, ಬಿದರಹಳ್ಳಿ, ಮಾದಾಪುರ, ಹೊಮ್ಮರಗಳ್ಳಿ, ನಂಜನಗೂಡು ಹಳೆ ಸೇತುವೆ ಮತ್ತು ಸುತ್ತೂರು ಸೇತುವೆ ಮುಳುಗಡೆಯಾಗಲಿವೆ.
ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?
ಮೆಟ್ಟೂರು ಜಲಾಶಯದ ಒಳಹರಿವು ಸದ್ಯ 23,989 ಕ್ಯೂಸೆಕ್ಸ್‌ಗೆ ಹೆಚ್ಚಳವಾಗಿದೆ. ಜಲಾಶಯದಿಂದ 1000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 120 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 50.030 ಅಡಿ ನೀರು ಸಂಗ್ರಹವಾಗಿದೆ.
ಜಗಳ ತಪ್ಪಿಸಿದ ಮಳೆ!
ಕಳೆದ ವರ್ಷ ಮಳೆ ಇಲ್ಲದ ಕಾರಣ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ವಿವಾದ ಶುರುವಾಗಿತ್ತು. ರಾಜ್ಯದಿಂದ ತಮಿಳುನಾಡಿಗೆ ನೀರು ಬಿಟ್ಟ ಕಾರಣ, ರಾಜ್ಯದ ರೈತರಿಗೆ ಬೆಳೆ ಬೆಳೆಯಲು ಕೂಡ ನೀರಿಲ್ಲದಂತಾಗಿತ್ತು. ಈ ಬಾರಿ ಎರಡೂ ರಾಜ್ಯಗಳ ಸಮಸ್ಯೆಯನ್ನು ಮಳೆ ಬಗೆಹರಿಸುವ ಸೂಚನೆ ಕೊಟ್ಟಿದೆ. ತಮಿಳುನಾಡು ಕೇಳಿದ್ದಕ್ಕಿಂತ ಹೆಚ್ಚಿನ ನೀರು ಈಗಾಗಲೇ ಮೆಟ್ಟೂರು ಜಲಾಶಯಕ್ಕೆ ಹರಿಯುತ್ತಿದೆ.












Click it and Unblock the Notifications