ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಬಂತು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ

|
Google Oneindia Kannada News

ಬೆಂಗಳೂರು, ಮೇ 19; ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಗೊಂಡ ಬಳಿಕ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಕೋವಿಡ್ ವಿರುದ್ಧದ ಲಸಿಕೆಗೆ ರಾಜ್ಯದಲ್ಲಿ ಭಾರೀ ಬೇಡಿಕೆ ಇದೆ.

ರಾಜ್ಯಕ್ಕೆ 2 ಲಕ್ಷ ಡೋಸ್ ಕೋವಿಶೀಲ್ಡ್‌ ಲಸಿಕೆ ಆಗಮಿಸಿದೆ. ಈ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಲಸಿಕೆ ಕೊರತೆ ಕಾರಣ ರಾಜ್ಯದಲ್ಲಿ 18-44 ವರ್ಷ ವಯೋಮಿತಿಯವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು.

 ಭಾರತದ ಜನರನ್ನು ನಿರ್ಲಕ್ಷಿಸಿ ಲಸಿಕೆ ರಫ್ತು ಮಾಡಿಲ್ಲ; ಅದಾರ್ ಪೂನಾವಾಲಾ ಭಾರತದ ಜನರನ್ನು ನಿರ್ಲಕ್ಷಿಸಿ ಲಸಿಕೆ ರಫ್ತು ಮಾಡಿಲ್ಲ; ಅದಾರ್ ಪೂನಾವಾಲಾ

ಡಾ. ಸುಧಾಕರ್ ತಮ್ಮ ಟ್ವೀಟ್‌ನಲ್ಲಿ, "ರಾಜ್ಯ ಸರ್ಕಾರ ನೇರವಾಗಿ ಉತ್ಪಾದಕರಿಂದ ಖರೀದಿಸುತ್ತಿರುವ ಲಸಿಕೆಗಳ ಪೈಕಿ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯ ಮತ್ತೊಂದು ಕಂತು ಲಭ್ಯವಾಗಿದೆ. ಈವರೆಗೂ 9,50,000 ಕೋವಿಶೀಲ್ಡ್, 1,44,000 ಕೋವ್ಯಾಕ್ಸಿನ್ ಸೇರಿ ಒಟ್ಟು 10,94,000 ಡೋಸ್ ಕಂಪನಿಗಳಿಂದ ಪೂರೈಕೆಯಾಗಿದ್ದು, ಕೇಂದ್ರ ಸರ್ಕಾರದಿಂದ ಒಟ್ಟು 1,11,24,470 ಡೋಸ್ ಪೂರೈಕೆಯಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

6 ತಿಂಗಳ ಅಂತರದಲ್ಲಿ 2ನೇ ಡೋಸ್ ಲಸಿಕೆ ಪಡೆದರೂ ತೊಂದರೆಯಿಲ್ಲ; ತಜ್ಞರು6 ತಿಂಗಳ ಅಂತರದಲ್ಲಿ 2ನೇ ಡೋಸ್ ಲಸಿಕೆ ಪಡೆದರೂ ತೊಂದರೆಯಿಲ್ಲ; ತಜ್ಞರು

 Karnataka Received 2 Lakh Dose Of Covishied

18-44 ವಯೋಮಿತಿಯ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ. ಇದಕ್ಕಾಗಿ 2 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು 1 ಕೋಟಿ ಡೋಸ್ ಕೊವ್ಯಾಕ್ಸಿನ್ ಖರೀದಿ ಮಾಡಲು ಲಸಿಕೆ ಉತ್ಪದನಾ ಕಂಪನಿಗಳಿಗೆ ಸರ್ಕಾರ ಹಣ ಸಂದಾಯ ಮಾಡಿದೆ.

ಶೇ.100ರಷ್ಟು ಮಂದಿ ಲಸಿಕೆ ಪಡೆದರೆ ಆ ಗ್ರಾಮದ ಅಭಿವೃದ್ಧಿಗೆ 10 ಲಕ್ಷ ರೂ ಶೇ.100ರಷ್ಟು ಮಂದಿ ಲಸಿಕೆ ಪಡೆದರೆ ಆ ಗ್ರಾಮದ ಅಭಿವೃದ್ಧಿಗೆ 10 ಲಕ್ಷ ರೂ

ಕರ್ನಾಟಕದಲ್ಲಿ ಲಸಿಕೆ ಕೊರತೆ ಉಂಟಾಗಿತ್ತು. ಇದರಿಂದಾಗಿ ಸರ್ಕಾರ ಮೇ 14 ರಿಂದ 18-44 ವಯೋಮಿತಿಯ ಜನರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿತ್ತು. 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಲು ಸರ್ಕಾರ ಆದ್ಯತೆ ನೀಡಿದೆ.

ಗುಣಮುಖ ಸಂಖ್ಯೆ ಹೆಚ್ಚಳ; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮೇ 24ರ ತನಕ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ಅದನ್ನು ವಿಸ್ತರಣೆ ಮಾಡುವ ಕುರಿತು ಬುಧವಾರ ಸರ್ಕಾರ ತೀರ್ಮಾನವನ್ನು ಪ್ರಕಟಿಸಲಿದೆ.

ರಾಜ್ಯದಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖ ಪ್ರಮಾಣ ಹೆಚ್ಚಾಗಿದೆ. ಮೇ 18ರ ವರದಿಯಂತೆ 58,395 ಜನರು ರಾಜ್ಯದಲ್ಲಿ ಗುಣಮುಖಗೊಂಡಿದ್ದಾರೆ. ಇದು ರಾಜ್ಯದಲ್ಲಿ ಒಂದೇ ದಿನದಲ್ಲಿ ಚೇತರಿಕೆಗೊಂಡ ಅತಿ ಹೆಚ್ಚು ಸಂಖ್ಯೆಯಾಗಿದೆ.

Recommended Video

BCCI ಆಸ್ಟ್ರೇಲಿಯಾ ಆಟಗಾರರಿಗೆ ಹಣ ಖರ್ಚು ಮಾಡುತ್ತಿದೆ | Oneindia Kannada

24 ಗಂಟೆಯಲ್ಲಿ ರಾಜ್ಯದಲ್ಲಿ 30,309 ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 8,676 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31,795 ಜನರು 24 ಗಂಟೆಯಲ್ಲಿ ಗುಣಮುಖಗೊಂಡಿದ್ದಾರೆ.

English summary
In a tweet Karnataka health minister informed that state received 2,00,000 doses of Covishied as part of the order placed by government. So far state has received 9,50,000 Covishield & 1,44,000 Covaxin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X