Rain Alert: ರಾಜ್ಯದಲ್ಲಿ ಮುಂದಿನ ಮೇ 7ರತನಕ ಭಾರೀ ಮಳೆ! 4 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'

ಬೆಂಗಳೂರು, ಮೇ 01: ಕರ್ನಾಟಕ ರಾಜ್ಯದಲ್ಲಿ ಅರ್ಧ ಕಡೆಗೆ ಬಿಸಿಲು, ಇನ್ನರ್ಧ ಕಡೆಗೆ ತಾಪಮಾನ ಹೆಚ್ಚಾಗಿದೆ. ಈಕಾರಣದಿಂದಾಗಿ ಕೆಲವೆಡೆ ಮಳೆಗಾಲ, ಕೆಲವೆಡೆ ಬೇಸಿಗೆ ಅನುಭವವಾಗುತ್ತಿದೆ. ಪೂರ್ವ ಮುಂಗಾರು ಮಳೆ ಆರಂಭವಾದಾಗಿನಿಂದ ಚುರುಕಿನಿಂದ ಕೂಡಿದ್ದು, ಅಬ್ಬರ ಮುಂದುವರಿಸಿದೆ. ಮುಂದಿನ ಮೇ 07ರವರೆಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರ ಮಳೆ, ಜೋರು ಮಳೆ ಬರಲಿದೆ. 04 ಜಿಲ್ಲೆಗಳಿಗೆ ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ 'ಯೆಲ್ಲೋ ಅಲರ್ಟ್' ಘೋಷಣೆ ಮಾಡಲಾಗಿದೆ.

ಕರ್ನಾಟಕ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನ ಪ್ರಕಾರ, ಮುಂದಿನ ಆರೇಳು ದಿನಗಳಲ್ಲಿ ಒಂದೊಂದು ಕಡೆ ಒಂದೊಂದು ದಿನ ಮಳೆ ಸಕ್ರಿಯವಾಗರಲಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಒಣ ಹವೆ ಜೊತೆಗೆ ಜೊತೆಗೆ ಅಲ್ಲಲ್ಲಿ ಸಾಧಾರಣದಿಂದ ಜೋರು ಮಳೆ ಆಗಲಿದೆ. ಈ ವಾರ ರಾಜ್ಯದ ಒಳನಾಡು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.

Karnataka Rains IMD Prediction Heavy Rain for Karnataka These Parts untill May 7 Yellow Alert

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಭಾಗದ ವಿವಿಧೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಪ್ರಯುಕ್ತ ಮೇ 2ರಂದು ಶುಕ್ರವಾರ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

Take a Poll

ಬೇರೆ ಬೇರೆ ಜಿಲ್ಲೆಗಳ ಮಳೆ ಪರಿಸ್ಥಿತಿ ಹೇಗೆ?

ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ರಾಯಚೂರು, ಗದಗ, ಯಾದಗಿರಿ ಮತ್ತು ಕೊಪ್ಪಳ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆ, ಕೆಲವೆಡೆ ಗುಡುಗು ಸಹಿತ ಜೋರು ಮಳೆ ಸುರಿಯವ ಸಾಧ್ಯತೆ ಇದೆ. ಪ್ರತಿ ಗಂಟೆಗೆ 50-60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಲಿದ್ದು, ಒಣಹವೆ ಮುಂದುವರಿಯಲಿದೆ.

ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಮೈಸೂರು, ಚಿಕ್ಕಮಗಳೂರು, ಶಿಮವೊಗ್ಗ, ಹಾಸನ ಜಿಲ್ಲೆಗಳಲ್ಲಿ ಹಾಗೂ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಇಲ್ಲಿ ಗಾಳಿಯ ವೇಗ ಗಂಟೆಗೆ 50-60 ಕಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rains IMD Prediction Heavy Rain for Karnataka These Parts untill May 7 Yellow Alert

ಹವಾಮಾನ ವೈಪರೀತ್ಯಗಳ ತೀವ್ರತೆ ಕುಸಿತ..

ಕರಾವಳಿ ಪ್ರದೇಶಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ ಅಥವಾ ಲಘು ಮಳೆ ಆಗಲಿದೆ. ಉಳಿದಂತೆ ಎಂದಿನಂತೆ ಸೆಕೆಯ ವಾತಾವರಣ ಕಂಡು ಬರಲಿದೆ. ಇದರ ಹೊರತು ಈ ಭಾಗಗಳಲ್ಲಿ ಯಾವುದೇ ತೀವ್ರ ಸ್ವರೂಪದ ಮಳೆ ಆಗಲಿ, ಹವಾಮಾನ ವೈಪರೀತ್ಯಗಳಾಲಿ ಸದ್ಯಕ್ಕೆ ಇಲ್ಲ ಎಂದು ವರದಿ ತಿಳಿಸಿದೆ.

ಏಪ್ರಿಲ್ ತಿಂಗಳಪೂರ್ತಿ ಚಂಡಮಾರತ ಪ್ರಸರಣ, ವಾಯುಭಾರ ಕುಸಿತವು ಎರಡು ಮೂರು ಕಡೆಗಳಲ್ಲಿ ಕಂಡು ಬಂದಿತ್ತು. ಅಲ್ಲದೇ ಸುಮಾರು ನಾಲ್ಕು ವಾರಗಳ ಕಾಲ ಅದರ ತೀವ್ರತೆಯಲ್ಲಿ ಏರು ಪೇರಾಗುತ್ತಿತ್ತು. ಹೀಗಾಗಿಯೇ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶದ ಭಾಗಗಳಲ್ಲಿ ಆಗಾಗ ಭಾರೀ ಮಳೆ ದಾಖಲಾಗಿತ್ತು. ಸದ್ಯ ವೈಪರೀತ್ಯಗಳ ಪ್ರಭಾವ ಕುಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಶಾಖದ ಅಲೆ ನಿರ್ಮಾಣವಾಗುವ ಸಂಭವವಿದೆ.

ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿ, ವಿಜಯಪುರ, ಹಾವೇರಿ, ಕೊಪ್ಪಳ, ಕಾರವಾರದಲ್ಲಿ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+