Karnataka Dam Water Level: ಕರ್ನಾಟಕದಲ್ಲಿ ರಣಭೀಕರ ಮಳೆ: ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ!
Karnataka Dam Water Level: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಚಂಡಮಾರುತದ ಪ್ರಸರಣ ಹಾಗೂ ವಾಯುಭಾರ ಕುಸಿತದ ಕಾರಣಕ್ಕೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ರಣಭೀಕರ ಮಳೆ ಮುಂದುವರಿದಿದೆ. ಇನ್ನೂ ಒಂದು ವಾರದ ಅವಧಿಗೆ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಭಾರೀ ಮಳೆಯಿಂದಾಗಿ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿದೆ.
ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನಿರಂತರ ಮಳೆಯಿಂದಾಗಿ ಕರ್ನಾಟಕದ ಜಲಾಯಶಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಕರ್ನಾಟಕದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಕ್ಟೋಬರ್ 11ರ ವರೆಗೆ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದಲೂ ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.

ಕಳೆದ ವಾರ ಬಂಗಾಳ ಕೊಲ್ಲಿಯಲ್ಲಿ ಏಕಕಾಲಕ್ಕೆ ಎರಡು ಚಂಡಮಾರುತ ರೂಪುಗೊಂಡಿತ್ತು. ಹೀಗಾಗಿ, ದೇಶದಾದ್ಯಂತ ಭಾರೀ ಮಳೆ ಆಗಿತ್ತು. ಇದೀಗ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಭಾರೀ ಮಳೆಯಿಂದ ವಿವಿಧ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ. ಕರ್ನಾಟಕದ ಜಲಾಶಯಗಳಿಗೆ ಜೀವಕಳೆ ಬಂದಿದೆ. ಇನ್ನು ಕರ್ನಾಟಕದಲ್ಲಿ ಇನ್ನೊಂದು ವಾರ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,626.06
ಒಳಹರಿವು: 14,037
ಹೊರಹರಿವು: 13,627
-----------
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50
ಇಂದಿನ ಮಟ್ಟ: 2,079.50
ಒಳಹರಿವು: 1,694
ಹೊರಹರಿವು:1,694
-----------
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.70
ಒಳಹರಿವು: 2,569
ಹೊರಹರಿವು: 2,085
-----------
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 519.59
ಒಳಹರಿವು: 42,410
ಹೊರಹರಿವು: 40,385
-----------
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 559.64
ಒಳಹರಿವು: 2,780.53
ಹೊರಹರಿವು: 4,634.57 ಕ್ಯೂಸೆಕ್ಸ್‌ಗಳಲ್ಲಿ
ರೈತರ ಮುಖದಲ್ಲಿ ಮಂದಹಾಸ: ಇನ್ನು ಕರ್ನಾಟಕದಲ್ಲಿ ಮಳೆ ಮುಂದುವರಿದಿರುವುದು ಹಾಗೂ ಮುಂಗಾರು ಮಳೆ ಅವಧಿ ವಿಸ್ತರಣೆ ಆಗಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಭಾರೀ ಮಳೆಯಿಂದ ರೈತರ ಬೆಳೆಯೂ ನಷ್ಟವಾಗಿದೆ. ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದ್ದು, ಇನ್ನೊಂದು ವಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ.












Click it and Unblock the Notifications