ಕರ್ನಾಟಕ ಹವಾಮಾನ ವರದಿ: 3 ಭಾಗಗಳಿಗೂ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಜೂನ್ 06: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯು ಚೆಲ್ಲಾಟವಾಡುತ್ತಿದೆ. ಕಾರಣ ಬದಲಾಗುತ್ತಿರುವ ಹವಾಮಾನದಿಂದಾಗ ಒಂದು ದಿನ ಜೋರು ಮಳೆ ಬಂದರೆ, ಮತ್ತೊಂದು ದಿನ ಸಾಧಾರಣ ಮಟ್ಟದಿಂದ ಕಡಿಮೆ ಮಳೆ ಆಗುತ್ತಿದೆ. ಇತ್ತ ಹವಾಮಾನ ಇಲಾಖೆ ಭಾರೀ ಮಳೆ ಎಂದು ಮುನ್ಸೂಚನೆ ಕೊಡುತ್ತಲೇ ಇದೆ.
ಹವಾಮಾನ ಬದಲಾವಣೆಯ ಏರಿಳಿತವು ಮುಂದುವರಿದೆ. ನೆನ್ನೆಯಷ್ಟೇ ಒಂದು ವಾರ ಭಾರೀ ಮಳೆ ಎಂದು ಹೇಳಲಾಗಿತ್ತು. ಆದರೆ ಅದೀಗ ಮುಂದಿನ ಮೂರು ದಿನಕ್ಕೆ ಇಳಿಕೆ ಆಗಿದೆ. ಈ ಪೈಕಿ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನಗಳ ಪೈಕಿ ಮೊದಲ ಎರಡು ದಿನ ಸಾಮಾನ್ಯ ಮಳೆ, ನಂತರ ಮೂರು ಭಾರೀ ಮಳೆ ಅಬ್ಬರಿಸಲಿದೆ.

ಹೀಗಾಗಿ ಕರ್ನಾಟಕ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಜೂನ್ 09ರಿಂದ ಮೂರು ದಿನ 'ಹಳದಿ ಎಚ್ಚರಿಕೆ' ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲೂ ಮಳೆ ಅಬ್ಬರ: ಹಳದಿ ಎಚ್ಚರಿಕೆ
ಮುಂಗಾರು ಮಳೆ ಆರಂಭವಾದರೂ ಬಿರು ಬೇಸಿಗೆಯ ವಾತಾವರಣ ಅನುಭವಿಸುತ್ತಿದ್ದ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಅಲ್ಲಲ್ಲಿ ಸಾಮಾನ್ಯ ಮಳೆ ಆಗಿದೆ. ಒಂದೆರಡು ಕಡೆ ಮಾತ್ರ ಆಗಾಗ ಸಾಧಾರಣ ಮಳೆ ಆಗಿದೆ.
ಉತ್ತರ ಕರ್ನಾಟಕದ ಮುಂದಿನ ಐದು ದಿನಗಳ ಪೈಕಿ ಮೊದಲ ಮೂರು ದಿನ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಇವುಗಳ ಜೊತೆ ದಿನ ಬಿಟ್ಟು ದಿನ ಬೀದರ್, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಭಾರೀ ಮಳೆ ಆಗಲಿದೆ. ಈ ಜಿಲ್ಲೆಗಳಿಗೆ ಆಯಾ ದಿನ 'ಹಳದಿ ಎಚ್ಚರಿಕೆ' ಘೋಷಿಸಲಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಹೇಗಿದೆ ಮಳೆ?
ಇನ್ನೂ ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಮಾತ್ರ ಮಳೆ ಸಕ್ರಿಯವಾಗಿರಲಿದೆ ಎಂದು ಸದ್ಯದ ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ. ದಕ್ಷಿಣ ಕರ್ನಾಟಕದ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರದಲ್ಲಿ ಮೂರು ದಿನವೂ ಧಾರಾಕಾರ ಮಳೆ ಆಗಲಿದೆ.
ಇದೇ ಅವಧಿಯಲ್ಲಿ ನಿರಂತವಾಗಿ ಅಲ್ಲದೇ ದಿನ ಬಿಟ್ಟು ದಿನ ಮೈಸೂರು, ರಾಮನಗರ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ವ್ಯಾಪಕ ಮಳೆ ಆಗಲಿದ್ದು, ಇವುಗಳಿಗೆ 'ಹಳದಿ ಎಚ್ಚರಿಕೆ' ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.
#indiametdept ಮುಂದಿನ 7 ದಿನಗಳ ಜಿಲ್ಲಾವಾರು #ಬಿಸಿಗಾಳಿ & #ಮಳೆ #ಮುನ್ಸೂಚನೆ (ದಿನಾಂಕ 06.06.24). 7 days District-wise #heatwave & #rainfall #Forecast pic.twitter.com/gNWQoO0HtN
— Karnataka State Natural Disaster Monitoring Centre (@KarnatakaSNDMC) June 6, 2024
ಇಂದು ವಿವಿಧೆಡೆ ಮಳೆ ಅಬ್ಬರ, ಬಿತ್ತನೆ ಶುರು
ಉತ್ತರ ಕರ್ನಾಟಕದ ಹಾವೇರಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಗುರುವಾರ ಭರ್ಜರಿ ಮಳೆಯ ಸಿಂಚನವಾಗಿದೆ. ಕಾದ ಭೂಮಿಗೆ ಮುಂಗಾರು ತಂಪೆರೆದಿದೆ. ಮುಂಗಾರು ಬಿತ್ತನೆ ಆಗಲು ಅತ್ಯಗತ್ಯವಾಗಿದ್ದ ಮಳೆರಾಯ ಇಂದು ದರ್ಶನ ಕೊಟ್ಟಿದ್ದಾನೆ. ಈ ವಾರಾಂತ್ಯಕ್ಕೆ ಬಿತ್ತನೆ ಆಗುವ ಸಾಧ್ಯತೆ ಇದೆ.
ಸದ್ಯ ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ. ಕನಿಷ್ಠ ತಾಪಮಾನವು ಸಹಜವಾಗಿದ್ದು, ಬೇಸಿಗೆ ತತ್ತರಿಸಿದ್ದ ರಾಯಚೂರು, ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ಕಲಬುರಗಿ, ಬೀದರ್ ಜಿಲ್ಲೆಗಳ ಜನರು ನಿಟ್ಟುಸಿರುವ ಬಿಡುವಂತಾಗಿದೆ. ಇಲ್ಲಿ ತಾಪಮಾನ ಇಳಿಕೆ ಆಗಿದೆ.
ಇನ್ನೂ ಕರ್ನಾಟಕದಲ್ಲಿ ಗುರುವಾರದ ಮಾಹಿತಿ ಪ್ರಕಾರ, ಗುಡಗು, ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ವರದಿ ಆಗಿದೆ. ಮಳೆ, ಜೋರು ಗಾಳಿ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲುವುದು, ಜಮೀನುಗಳಲ್ಲಿ ಕೆಲಸ ಮಾಡುವುದನ್ನು ಬಿಡಬೇಕು. ಸುರಕ್ಷಿತ ಸ್ಥಗಳಲ್ಲಿ ಇರುವಂತೆ ಐಎಂಡಿ ಸೂಚನೆ ಇದೆ.












Click it and Unblock the Notifications