Karnataka Rains: ಜೂನ್-ಸೆಪ್ಟಂಬರ್ ಮಧ್ಯ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ, ಯಾವ ಜಿಲ್ಲೆಗೆ ಹೆಚ್ಚಾಗಿದೆ!

ಬೆಂಗಳೂರು, ಅಕ್ಟೋಬರ್ 02: ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ 2024ರ ಸಾಲಿನ ಮುಂಗಾರು ಅವಧಿಯಲ್ಲಿ ನಿರೀಕ್ಷಿತ ವಾಡಿಕೆಗಿಂತು ತುಸು ಹೆಚ್ಚೆ ಮುಂಗಾರು ಮಳೆ ದಾಖಲಾಗಿದೆ. ಹವಾಮಾನದಲ್ಲಿನ ನಿರಂತರ ಬದಲಾವಣೆಗಳಿಮದ ರಾಜ್ಯದ ಎಲ್ಲ ಭಾಗಗಳ ಜಿಲ್ಲೆಗಳಲ್ಲಿಯೂ ಭಾರೀ ದಾಖಲಾಗಿದೆ. ಇದರಿಂದ ಬೇಸಾಯಕ್ಕೆ, ರೈತರ ಬೆಳೆಗಳಿಗೆ ಅಗತ್ಯ ನೀರು ಸಿಕ್ಕಂತಾಗಿದೆ.

ಜೂನ್ 1ರಿಂದ ಜುಲೈ ಸೆಪ್ಟಂಬರ್ 30ರವರೆಗೆ ಮುಂಗಾರು ಅವಧಿಯಾಗಿದೆ. ಈ ವೇಳೆ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 15ರಷ್ಟು ಅತ್ಯಧಿಕ ಮಳೆ ದಾಖಲಾಗಿದೆ. ಸದ್ಯ ಮುಂಗಾರು ಮಳೆ ಅಂತ್ಯಗೊಂಡಿದ್ದು, ಹಿಂಗಾರು ಮಳೆ ಶುರುವಾಗಲಿದೆ. ಇನ್ಮುಂದೆ ಚಳಿ ಸಹಿತ ಆಗಾಗ ಗುಡುಗು, ಮಿಂಚು ಸಹಿತ ರಾಜ್ಯದಲ್ಲಿ ಭಾರೀ ಆರಂಭವಾಗಲಿದೆ. ಮತ್ತೊಂದೆಡೆ ರೈತರು ಹಿಂಗಾರು ಹಂಗಾಮು (ರಾಬಿ ಬೆಳೆ) ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.

Karnataka Rain Karnataka Sees 15 Percent More Monsoon Rain Than Normal This Season 2024

ಹವಾಮಾನ ಇಲಾಖೆ ಪ್ರಕಾರ ಜೂನ್‌ನಿಂದ ಅಕ್ಟೋಬರ್ ರೆಗಿನ ಮುಂಗಾರು ಅವಧಿಯಲ್ಲಿ ಕರಾವಳಿ, ಮಲೆನಾಡು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಒಟ್ಟು 852 ಮಿಲಿ ಮೀಟರ್ ವಾಡಿಕೆ ಮಳೆ ಆಗಬೇಕು. ಅದಕ್ಕಿಂತಲೂ ಹೆಚ್ಚು ಅಂದರೆ 977 ಮಿಲಿ ಮೀಟರ್ ಮಳೆ (ಶೇ.15) ಅಧಿಕ ದಾಖಲಾಗಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ಅತ್ಯಧಿಕ ಮಳೆ ದಾಖಲಾಗಿದ್ದೆಲ್ಲಿ?

ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳನ್ನು ಒಳಗೊಂಡ ಕರಾವಳಿಯ ಭಾಗಕ್ಕೆ ವಾಡಿಕೆ 3010 ಮಿಲಿ ಮೀಟರ್ ಮಳೆ ಆಗಬೇಕಿದ್ದು, ಆದರೆ ಇಲ್ಲಿ ವಾಡಿಕೆಗಿಂತ 3736 ಮಿಲಿ ಮೀಟರ್ (ಶೇಕಡಾ 20) ಅಧಿಕ ಮಳೆ ಬಿದ್ದಿದೆ ಎಂದು ಐಎಂಡಿ ಮಾನ್ಸೂನ್ ವರದಿ ತಿಳಿಸಿದೆ.

Karnataka Rain Karnataka Sees 15 Percent More Monsoon Rain Than Normal This Season 2024

ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ರಾಜ್ಯದ ಮಲೆನಾಡು ಭಾಗದಲ್ಲಿ ಅತ್ಯಧಿಕ ಮಳೆ ಆಗಿದೆ. ಇಲ್ಲಿ ವಾಡಿಕೆ 1556 ಮಿಲಿ ಮೀಟರ್ ಮಳೆ ಆಗಬೇಕು. ಅದಕ್ಕಿಂತಲೂ ಹೆಚ್ಚು ಅಂದರೆ 1755 ಮಿಲಿ ಮೀಟರ್ ಮಳೆ (ಶೇ. 13) ಹೆಚ್ಚು ದಾಖಲಾಗಿದೆ.

ಕೊನೆ ಕೊನೆಗೆ ಉತ್ತರ ಕರ್ನಾಟಕಕ್ಕೆ ಭರ್ಜರಿ ಮಳೆ

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪು, ಬಾಲಗಕೋಟೆ, ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳನ್ನು ಒಳಗೊಂಡ ಉತ್ತರ ಒಳನಾಡಿನ ಕಪ್ಪು ಮಣ್ಣು ಹಾಗೂ ಬಯಸಲು ಸೀಮೆ ಪ್ರದೇಶಗಳಲ್ಲಿ ಮುಂಗಾರು ಅಂತ್ಯಕ್ಕೆ ಉತ್ತಮ ಮಳೆ ಆಯಿತು.

ಉತ್ತರ ಕರ್ನಾಟಕದ ಭಾಗದಲ್ಲಿ ವಾಡಿಕೆ 479 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಆದರೆ ಅದಕ್ಕಿಂತಲೂ ಹೆಚ್ಚು ಅಂದರೆ 534 ಮಿಲಿ ಮೀಟರ್ ಮಳೆ (12) ಹೆಚ್ಚು ಮಳೆ ಸುರಿದಿದೆ ಎಂದು ಐಎಂಡಿ ತಿಳಿಸಿದೆ.

ಈ ವರ್ಷ ಕಡಿಮೆ ಮಳೆಯ ಜಿಲ್ಲೆಗಳು

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ವಿಜಯನಗರ ಒಳಗೊಂಡ ದಕ್ಷಿಣ ಒಳನಾಡಿನ ಭಾಗದಲ್ಲಿ ಪ್ರತಿ ವರ್ಷಕ್ಕಿಂತ ಈ ವರ್ಷ ಕಡಿಮೆ ಮಳೆ ಆಗಿದೆ. ಪ್ರತಿ ವರ್ಷ ನಿರೀಕ್ಷೆಗೂ ಮೀರಿ ಈ ಭಾಗದಲ್ಲಿ ಮಳೆ ಆಗುತ್ತಿತ್ತು.

ಈ ವರ್ಷ ದಕ್ಷಿಣದ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಅಂದರೆ ವಾಡಿಕೆ 369 ಮಿಲಿ ಮೀಟರ್ ಮಳೆಗಿಂತ ಕೊಂಚ ಅಂದರೆ 408 ಮಿಲಿ ಮೀಟರ್ ಮಳೆ (ಕೇವಲ ಶೇ.11) ರಷ್ಟು ಅಧಿಕ ಮಳೆ ದಾಖಲಾಗಿದೆ.

ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆ ಬಾರದೇ ಮಳೆಗಾದಲ್ಲೂ ಬಿಸಿಲಿನ ವಾತಾವರಣ ಸೃಷ್ಟಿ ಮಾಡಿದೆ, ತಿಂಗಳು ಬರುವ ಮಳೆ ಒಂದೇ ವಾರದಲ್ಲಿ ಸುರಿದಿದ್ದು ಉಂಟು. ಅದೇ ರೀತಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿ ಆಗಸ್ಟ್ ನಲ್ಲಿ ಮಳೆ ಸುರಿಯಲೇ ಇಲ್ಲ. ಜೂನ್ ತಿಂಗಳಲ್ಲಿ ಬೆಂಗಳೂರು ಶೂನ್ಯ ಮಳೆ ದಿನ ಎದುರಿಸಿದೆ.

ರಾಜ್ಯಕ್ಕೆ ಮಳೆ ಮುನ್ಸೂಚನೆ ಏನಿದೆ?

ನಿರೀಕ್ಷೆಯ ಪ್ರಕಾರ, ಅಕ್ಟೋಬರ್ 01ರಿಂದ ಹಿಂಗಾರು ಮಳೆ ಸುರಿಸುವ ಮಾರುತಗಳು ಸಕ್ರಿಯಗೊಳ್ಳಬೇಕು. ಈ ಬಗ್ಗೆ ಐಎಂಡಿ ಅಧಿಕೃತ ಮಾಹಿತಿ ನೀಡಬೇಕಿದೆ. ಸದ್ಯ ಮುನ್ಸೂಚನೆ ನೋಡಿದರೆ, ಮುಂದಿನ ಮೂರು ದಿನ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಿಸಿಲಿನ ಆರ್ಭಟವು ಕಂಡು ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+