ಇನ್ನೂ ಮೂರುದಿನ ಮಳೆ, ಜಲಾಶಯದ ನೀರಿನ ಮಟ್ಟ

Posted By: Gururaj
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 10 : ನೈಋತ್ಯ ಮುಂಗಾರು ಪ್ರಬಲವಾಗಿದ್ದು ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹರಪನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗಿದೆ.

48 ಗಂಟೆಗಳ ಕಾಲ ಮಳೆ ಮುನ್ಸೂಚನೆ, ಜಲಾಶಯದ ನೀರಿನ ಮಟ್ಟ

ಚಿತ್ರದುರ್ಗ, ಚಿಂತಾಮಣಿ, ಹರಪನಹಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಚಿತ್ರದುರ್ಗದಲ್ಲಿ 305 ಮಿ.ಮೀ ಮಳೆಯಾಗಿದೆ. ಹರಪನಹಳ್ಳಿಯಲ್ಲಿ 129.2 ಮಿ.ಮೀ ಮಳೆ ಸುರಿದಿದೆ. ಚಿಂತಾಮಣಿಯಲ್ಲಿ ಎರಡು ಬಸ್ಸುಗಳು ನೀರಿನಲ್ಲಿ ಮುಳುಗಿದ್ದವು.

Karnataka rain forecast and water level of dams Sep 9, 2017

'ರಾಜ್ಯದಲ್ಲಿ ನೈಋತ್ಯ ಮುಂಗಾರು ಪ್ರಬಲವಾಗಿದ್ದು ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಸೆ.10ರಿಂದ 12ರ ತನಕ ವೇಗವಾದ ಗಾಳಿ ಬೀಸಲಿದ್ದು, ಭಾರೀ ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಿತ್ರಗಳು : ಕೆಂಗೇರಿಯಲ್ಲಿ ರಸ್ತೆ ಜಲಾವೃತ, ಮೀನು ಹಿಡಿದ ಜನರು

ಉತ್ತರ ಭಾಗದ ಮರಾಠವಾಡದಿಂದ ಕೇರಳದ ದಕ್ಷಿಣ ಭಾಗದ ತನಕ ವಾಯುಭಾರ ಕುಸಿತ ಉಂಟಾಗಿದೆ. ಇದು ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನ ಮೂಲಕ ಹಾದು ಹೋಗಿದೆ. ಆದ್ದರಿಂದ ಮಳೆಯಾಗುತ್ತಿದೆ. ಅರಬ್ಬಿಸಮುದ್ರದ ಪೂರ್ವ ಮಧ್ಯಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದು ಕರಾವಳಿ ಭಾಗದ ಮಳೆಗೆ ಕಾರಣವಾಗಿದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1795.15
ಹಾರಂಗಿ 2859.00 2857.07
ಹೇಮಾವತಿ 2922.00 2890.40
ಕೆಆರ್ ಎಸ್ 124.80 103.01
ಕಬಿನಿ 2284.00 2278.57
ತುಂಗಭದ್ರಾ 1633.00 1624.89
ಘಟಪ್ರಭಾ 2175.00 2153.81
ಮಲಪ್ರಭಾ 2079.50 2055.05

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rain continue for another two days in Karnataka said Meteorological department. Water level in almost all dams in Karnataka has increased considerably.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ