ಮುಂಗಾರು ಪೂರ್ವ ಮಳೆ ಅಬ್ಬರ : ರಾಜ್ಯಾದ್ಯಂತ ಒಂದೇ ದಿನ ಮಳೆಗೆ 9 ಮಂದಿ ಬಲಿ.!

ಬೆಂಗಳೂರು, ಮೇ 14: ಕರ್ನಾಟಕದಾದ್ಯಂತ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೇಸಿಗೆ ಬಿಸಿಲಿಗೆ ಕಾದು ಕೆಂಡದಂತಾಗಿದ್ದ ಭೂಮಿ ವರುಣಾನ ಆಗಮನದಿಂದಾಗಿ ತಂಪಾಗಿದೆ. ಇತ್ತ ಕೃಷಿ ಚಟುನಟಿಕೆಯನ್ನ ಆರಂಭಿಸಿದ್ದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಕರ್ನಾಟಕದಾದ್ಯಂತ ನಿನ್ನೆ(ಮಂಗಳವಾರ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಈ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಸುರಿದ ಅಬ್ಬರ ಮಳೆಯಿಂದಾಗಿ ಹಲವು ಮಳೆಗಳು ಕುಸಿದಿದ್ದು, ಕೆಲವು ಕಡೆ ತಗ್ಗು ಪ್ರದೇಶಗಳ ಮಳೆಗಳಿಗೆ ನೀರು ನುಗ್ಗಿದೆ. ಇನ್ನೊಂದು ಕಡೆ ಬೇಸಿಗೆ ಬೆಲೆ ಕಟಾವಿಗೆ ಬಂದಿದ್ದು, ನಿನ್ನೆ ಸುರಿದ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿದೆ. ಮಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಸಿಡಿಲು ಬಡಿದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯಾದ್ಯಂತ ಸುರಿದ ಧಾರಕಾರ ಮಳೆಯಿಂದಾಗಿ 9 ಜನರು ಸಾವನ್ನಪ್ಪಿದ್ದಾರೆ.

Karnataka Rain 9 people killed by Lightning Strikes across the state

ಚಿಕ್ಕಮಗಳೂರು-1, ವಿಜಯಪುರದಲ್ಲೂ ಸಹ ಓರ್ವ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಬಳ್ಳಾರಿ, ವಿಜಯಪುರ ಹಾಗೂ ಹಾವೇರಿಯ ತಲಾ ಒಬ್ಬರು, ರಾಯಚೂರು, ಕೊಪ್ಪಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬರು ಹಾಗು ಗದಗದಲ್ಲಿ ಒಬ್ಬೊಬ್ಬರು ಸಿಡಿಲು ಬಡಿದು ಸಾವನಪ್ಪಿದ್ದಾರೆ. ಮಳೆ ನೀರಿಗೆ ಗದಗನಲ್ಲಿ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಮತ್ತೊಂದಡೆ ಗೋಕಾಕ್ನಲ್ಲಿ ವ್ಯಕ್ತಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ.

ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಸವಾರ ಶರಣಪ್ಪ ಹಡಗಲಿ (39) ಕೊಚ್ಚಿಕೊಂಡು ಹೋಗಿದ್ದಾನೆ. ಶರಣಪ್ಪ ಪತ್ನಿಯ ತವರು ಮನೆ ಬೆನಕೊಪ್ಪಕ್ಕೆ ಹೊರಟ್ಟಿದ್ದರು. ಸಂಜೆ ಸುರಿದ ಭಾರಿ ಮಳೆಗೆ ತುಂಬಿ ಹಳ್ಳ ಹರಿಯುತ್ತಿತ್ತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಬೈಕ್ ಓಡಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ತಾಳಿಕೋಟೆ (47) ಮೃತಪಟ್ಟಿದ್ದಾರೆ. ಮಲ್ಲಪ್ಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದೆ. ಮತ್ತೊಂದೆಡೆ ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದಲ್ಲಿ ರೈತ ಸಿದ್ದಪ್ಪ ಉಂಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊಂತಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಗೆದ್ಲೆಹಳ್ಳಿ‌ಗ್ರಾಮದ ಲೋಕೇಶಪ್ಪ (65) ಮೃತಪಟ್ಟಿದ್ದಾರೆ. ಇನ್ನು, ಸಿಡಿಲು ಬಡಿದು ಬಳ್ಳಾರಿಯಲ್ಲಿ ಇಬ್ಬರು, ವಿಜಯಪುರದಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಓರ್ವ ಹಾಗೂ ಕೊಪ್ಪಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಇನ್ನೂ ಕಳೆದ ಎರಡ್ಮೂರು ದಿನದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್ ಸುತ್ತಮುತ್ತ ಭಾಗದಲ್ಲಿ ಮಳೆಯಾಗುತ್ತಿದೆ. ಭರ್ಜರಿ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರಿನಲ್ಲಿ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಬಿಬಿಎಂಪಿ 8 ವಲಯದಲ್ಲಿ 27ಕ್ಕೂ ಹೆಚ್ಚು ಮರ ಹಾಗೂ 94 ಕೊಂಬೆಗಳು ಧರೆಗುರುಳಿರುವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+