ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಬಂದ್‌ಗೆ ಖಾಸಗಿ ಶಾಲೆಗಳ ಬೆಂಬಲ: ಆನ್‌ಲೈನ್ ಕ್ಲಾಸ್ ಸ್ಥಗಿತ

|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಡಿಸೆಂಬರ್ 8 ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಇದಕ್ಕೆ ಖಾಸಗಿ ಶಾಲೆಗಳು ಬೆಂಬಲ ಸೂಚಿಸಿವೆ.

ಡಿಸೆಂಬರ್ 8 ರಂದು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ. ಈ ಕುರಿತು ಕ್ಯಾಮ್ಸ್ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.

ಡಿಸೆಂಬರ್ 8 ರಂದು ಭಾರತ ಬಂದ್: ಕರ್ನಾಟಕ ರೈತ ಸಂಘ ಬೆಂಬಲಡಿಸೆಂಬರ್ 8 ರಂದು ಭಾರತ ಬಂದ್: ಕರ್ನಾಟಕ ರೈತ ಸಂಘ ಬೆಂಬಲ

ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಪರೀಕ್ಷೆಗಳನ್ನು ಹೊರತುಪಡಿಸಿ ಆನ್‌ಲೈನ್ ತರಗತಿ ಸ್ಥಗಿತಗೊಳಿಸಲಾಗುತ್ತದೆ. ಖಾಸಗಿ ಅನುದಾನರಹಿತ ಶಾಲೆಗಳಿಂದ ಬೆಂಬಲ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Karnataka Private Schools To Suspend Online Classes On Dec 8 In Support Of Bharat Bandh

ಕೊರೊನಾದಿಂದ ಆರ್ಥಿಕವಾಗಿ ಪೆಟ್ಟು ಬಿದ್ದಿರುವಾಗ ಪದೇ ಪದೇ ಬಂದ್ ನಡೆಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬ ಉದ್ದೇಶದಿಂದ ಕೆಲ ಸಂಘಟನೆಗಳು ನಾಳೆಯ ಭಾರತ್ ಬಂದ್​ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ.

ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಎಪಿಎಂಸಿ ನಾಳೆಯ ಭಾರತ್ ಬಂದ್ ಆಚರಣೆಯಿಂದ ಹಿಂದೆ ಸರಿದಿವೆ. ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ತಾನು ರೈತರ ಹೋರಾಟಕ್ಕೆ ನೈತಿಕ ಬೆಂಬಲವಷ್ಟೇ ನೀಡುವುದಾಗಿ ತಿಳಿಸಿದೆ.

ಆಗಾಗ ಬಂದ್​ಗಳು ನಡೆಯುತ್ತಲೇ ಇವೆ. ಹೋಟೆಲ್ ಮಾಲೀಕರು ಈಗ ಯಾವುದೇ ಬಂದ್​ಗೆ ಬೆಂಬಲ ನೀಡುವುದಿಲ್ಲ. ಡಿಸೆಂಬರ್ 8 ರಂದು ಮಂಗಳವಾರ ಎಲ್ಲಾ ಹೋಟೆಲ್​ಗಳು ತೆರೆದಿರುತ್ತವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಕರವೇಯ ಒಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ತಮ್ಮ ಸಂಘಟನೆ ನಾಳೆ ಬಂದ್​ನಲ್ಲಿ ಬೀದಿಗಿಳಿದು ಹೋರಾಟ ಮಾಡೋಕೆ ಆಗಲ್ಲ.

ತಾವು ಮೊದಲಿಂದಲೂ ರೈತರಿಗೆ ಬೆಂಬಲ ಕೊಡುತ್ತಾ ಬಂದಿದ್ದೇವೆ. ಈ ಬಾರಿ ಹೋಟೆಲ್ ಉದ್ಯಮ, ಖಾಸಗಿ ಸಾರಿಗೆ ಉದ್ಯಮ ಸೇರಿದಂತೆ ಬಹಳಷ್ಟು ಮಂದಿ ನಷ್ಟದಲ್ಲಿದ್ದಾರೆ. ಪದೇ ಪದೇ ಬಂದ್ ಮಾಡೋಕೆ ಆಗಲ್ಲ. ಹೀಗಾಗಿ, ನಾಳೆಯ ಬಂದ್​ಗೆ ತಾವು ನೈತಿಕ ಬೆಂಬಲವಷ್ಟೇ ಕೊಡುತ್ತೇವೆ ಎಂದಿದ್ದಾರೆ.

Recommended Video

ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

English summary
Karnataka Private schools extended their support to Bharat Bandh, Suspend Online Classes On Dec 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X