ಆದಿಚುಂಚನಗಿರಿ ಶ್ರೀಗಳಿಗೆ ಕೊಡಬಾರದ ಕಷ್ಟ ಕೊಟ್ಟಿದ್ದ ಎಚ್ಡಿಕೆ?
ಬೆಂಗಳೂರು, ಜುಲೈ 21: ಒಕ್ಕಲಿಗ ಸಮುದಾಯದ ಇಬ್ಬರು ಪ್ರಭಾವಿ ರಾಜಕೀಯ ಮುಖಂಡರಾದ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ರಾಜಕೀಯ ಮೇಲಾಟ ಇಂದು ನಿನ್ನೆಯದಲ್ಲ.
ಇವರಿಬ್ಬರ ನಡುವಿನ ವಾಗ್ಯುದ ವೈಯಕ್ತಿಕ ಮಟ್ಟಕ್ಕೂ ಹೋದ ಉದಾಹರಣೆ ಪ್ರತೀ ಅಸೆಂಬ್ಲಿ ಅಧಿವೇಶನದಲ್ಲೂ ನಡೆಯುತ್ತದೆ. ಮಾತಿನ ಭರಾಟೆಯಲ್ಲಿ ತಮ್ಮ ತಮ್ಮ ಕುಟುಂದವರನ್ನೂ ಎಳೆದು ತರುತ್ತಾರೆ.[ಎಚ್ಡಿಕೆ vs ಡಿಕೆಶಿ ಡುಶುಂ ಡುಶಂ ಸದನ 'ಬಲಿ' ಚಿತ್ರ]
ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಅಧಿವೇಶನದಲ್ಲೂ ಇಬ್ಬರ ನಡುವೆ ಮಾತಿನ ಸಮರವೇ ನಡೆದಿತ್ತು. ಪ್ರಸಕ್ತ ಮಳೆಗಾಲದ ಅಧಿವೇಶನದಲ್ಲೂ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟ ಚರ್ಚೆ, ವೈಯಕ್ತಿಕ ಮಟ್ಟಕ್ಕಿಳಿದು ಸಮಾಜ, ಮಠ, ಮಠಾಧೀಶರ ಕಡೆ ಹೊರಳಿತ್ತು. (ಆದಿಚುಂಚುನಗಿರಿ ಸ್ವಾಮೀಜಿ ವಿಧಿವಶ)
ನಮ್ಮ ಸಮಾಜದ ಸ್ವಾಮೀಜಿಯವರಿಗೆ ಒಸಿ ತೊಂದ್ರೆ ಕೊಟ್ಟಿದ್ದೀರಾ ನೀವು ಎಂದು ಡಿ ಕೆ ಶಿವಕುಮಾರ್, ಕುಮಾರಸ್ವಾಮಿ ವಿರುದ್ದ ಗಂಭೀರ ಆರೋಪ ಹೊರಿಸಿದ್ದಾರೆ.
ಆದಿಚುಂಚನಗಿರಿ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳು ಜನವರಿ 13, 2013ರಂದು ಕೊನೆಯುಸಿರೆಳೆದಿದ್ದರು.
ಕುಮಾರಸ್ವಾಮಿ ಮತ್ತು ಡಿಕೆಶಿ ನಡುವೆ ಸೋಮವಾರ (ಜು 20) ಅಸೆಂಬ್ಲಿಯಲ್ಲಿ ಮಾತಿನ ಚಕಮಕಿ ತಾರಕ್ಕೇರಿದಾಗ ಮುಗುಳ್ನಗುತ್ತಾ ಸಿಎಂ ಸಿದ್ದರಾಮಯ್ಯ ಗಮನಿಸುತ್ತಿದ್ದದ್ದು ವಿಶೇಷವಾಗಿತ್ತು.

ಆದಿಚುಂಚನಗಿರಿ ಸ್ವಾಮೀಜಿ
ನಮ್ಮ ಸಮಾಜದ ಸ್ವಾಮೀಜಿ (ಶಿವೈಕ್ಯರಾದ ಬಾಲಗಂಗಾಧರನಾಥ ಸ್ವಾಮೀಜಿ) ಅವರಿಗೆ ಕೊಟ್ಟ ತೊಂದರೆ ಒಂದೆರಡಲ್ಲ. ನೀವು ಏನು ಮಾಡಿದ್ದೀರಿ ಎಂದು ಎಲ್ಲವೂ ನಮಗೆ ತಿಳಿದಿದೆ ಎಂದು ಡಿಕೆಶಿ, ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡರು.

ಕೊರಗಿನಲ್ಲೇ ಸ್ವಾಮೀಜಿ ನಿಧನರಾಗಿದ್ದು
ಸ್ವಾಮೀಜಿಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದಿರಿ. ಸ್ವಾಮೀಜಿಯವರನ್ನು ರಾಜಕಾರಣಿ ಮಾಡಲು ಹೊರಟಿದ್ದು, ನಾನಾ ನೀವಾ? ಸ್ವಾಮೀಜಿಯವರ ಮೇಲೆ ಮೊಕದ್ದಮೆ ದಾಖಲಿಸಿದಿರಿ. ಈ ಕೊರಗಿನಿಂದಲೇ ಸ್ವಾಮೀಜಿ ನಿಧನರಾಗಿದ್ದು ಎಂದು ಡಿಕೆಶಿ, ಎಚ್ಡಿಕೆ ವಿರುದ್ದ ಹರಿಹಾಯ್ದರು.

ಮಾತಿನ ಚಕಮಕಿ ನಡುವೆ ಕಾಲೆಳೆದ ರಮೇಶ್ ಕುಮಾರ್
ಇಬ್ಬರು ಒಕ್ಕಲಿಗ ಸಮುದಾಯದವರ ಮಾತಿನ ಸಮರ ಜೋರಾಗಿದ್ದಾಗ ಸಿದ್ದರಾಮಯ್ಯ ಅದನ್ನು ನೋಡಿ ನಗುತ್ತಿದ್ದರು. ಇದನ್ನು ಗಮನಿಸಿದ ಶಾಸಕ ರಮೇಶ್ ಕುಮಾರ್, ಸಿದ್ದರಾಮಯ್ಯನವರಿಗೆ ತಾನು ಸಿಎಂ ಆದ ದಿನಕ್ಕಿಂತಲೂ ಇಂದು ಬಹಳ ಸಂತೋಷ ತಂದ ದಿನವಾಗಿರ ಬಹುದು ಎಂದು ಲೇವಡಿ ಮಾಡಿದರು.

ವಿಫಲವಾದ ಕುಮಾರಸ್ವಾಮಿ
ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಸಂಬಂಧ ನಡುವೆ ನಡೆದ ಚರ್ಚೆಯಲ್ಲಿ ಜೆಡಿಎಸ್ ಮುಖಂಡರು ಸುಮಾರು ಮೂರು ತಾಸು ಮಾತಾನಾಡಿದರೂ, ಸಿದ್ದರಾಮಾಯ್ಯ ಸರಕಾರವನ್ನು ಮುಜುಗರಕ್ಕೀಡು ಮಾಡುವಲ್ಲಿ ವಿಫಲರಾದರು.

ಡಿ ಕೆ ಶಿವಕುಮಾರ್ ಮತ್ತು ಅವರ ಹೆಂಡತಿ
ಬಳ್ಳಾರಿಯಲ್ಲಿ ನನ್ನ ಹೆಂಡತಿ ಗಣಿಗಾರಿಕೆ ಮಾಡಿದ್ದಾಳೆಂದು ಕೇಸು ದಾಖಲಿಸಿದ್ದೀರಾ. ಅವಳು ಅಲ್ಲಿ ಬಳ್ಳಾರಿಗೆ ಹೋಗಿ ಗಣಿಗಾರಿಕೆ ಮಾಡಿದ್ಲಾ ಎಂದು ಡಿಕೆಶಿ ಖಾರವಾಗಿ ಪ್ರಶ್ನಿಸುತ್ತಿರಬೇಕಾದರೆ, ನಿಮ್ಮ ಹೆಂಡತಿ ಗಣಿಗಾರಿಕೆ ಮಾಡಿರುವುದಕ್ಕೆ ರೆಕಾರ್ಡ್ ಇದೆ. ಸರಕಾರಿ ಕಚೇರಿಯನ್ನು ನಿಮ್ಮ ಲಾಭಕ್ಕೆ ಬಳಸಿಕೊಂಡಿರುವುದಕ್ಕೆ ನಮ್ಮಲ್ಲಿ ಪ್ರೂಫ್ ಇದೆ ಎಂದು ಕುಮಾರಸ್ವಾಮಿ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯುತ್ತರ ನೀಡಿದ್ದರು.












Click it and Unblock the Notifications