ದೀಪಾವಳಿ ಹಬ್ಬ: ಪರಿಸರ ಸ್ನೇಹಿ ಪಟಾಕಿ ಹೊಡೆಯಲು ಮಾತ್ರ ಅವಕಾಶ: ಮಾಲಿನ್ಯ ಮಂಡಳಿಯಿಂದ ಶಾಕ್

ಬೆಂಗಳೂರು, ಅಕ್ಟೋಬರ್ 17: ಕೊರೋನಾ ನಂತರ ಎದುರಾದ ಮೊದಲು ದೀಪಾವಳಿ ಹಬ್ಬವನ್ನು ಪಟಾಕಿ ಹಾರಿಸಿ ಅದ್ಧೂರಿ ಆಚರಣೆ ಮುಂದಾಗಿದ್ದ ಜನರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ನೀಡಿದೆ.

ಕಳೆದ ಎರಡು ವರ್ಷದಿಂದ ಕೊರೊನಾ ಕಾರಣಕ್ಕೆ ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳು ಆಚರಣೆ ಸರಳವಾಗಿತ್ತು. ಆದರೆ ಈ ವರ್ಷ ಎಲ್ಲ ಹಬ್ಬಗಳು ಅದ್ಧೂರಿಯಾಗಿ ನೆರವೇರಿವೆ. ಅದರಂತೆ ದೀಪಾವಳಿಗೆ ಹೆಚ್ಚು ಪಟಾಕಿ ಸಿಡಿಸಿ ಆಚರಿಸಬೇಕು ಎಂಬ ಜನರ ಕನಸಿಗೆ ಮಂಡಳಿಯ ಆದೇಶ ಅಡ್ಡಿಯಾದಂತಿದೆ. ಹಬ್ಬಕ್ಕೆ ಮಾಲಿನ್ಯ ಕಾರಕ ಪಟಾಕಿಗಳನ್ನು ನಿಷೇಧಿಸಿ, ಪರಿಸರಸ್ನೇಹಿ ಪಟಾಕಿಗೆ ಮಾತ್ರ ಅವಕಾಶ ನೀಡಿದೆ.

ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಮಾಲಿನ್ಯ ಹೆಚ್ಚಾಗದಂತೆ ಪರಿಸರ ಮಾಲಿನ್ಯ ಮಂಡಳಿಯಿಂದ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹಬ್ಬಕ್ಕೆ ಕೇವಲ ಹಸಿರು ಪಟಾಕಿಯನ್ನು ಮಾರಾಟ ಮಾಡಲು ಮಾತ್ರವೇ ಅವಕಾಶ ಕಲ್ಪಿಸಿದೆ. ಈ ನಿಯಮ ಮೀರಿ ಬೇರೆ ಪಟಾಕಿ ಮಾರಾಟ ಕಂಡು ಬಂದರೆ ಅವುಗಳನ್ನು ವಶಕ್ಕೆ (ಸೀಜ್) ಮಾಡುವುದಾಗಿ ಮಂಡಳಿ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಂಬಂಧಿತ ಇಲಾಖೆಗೆ ಸೂಚಿಸಿದೆ.

Karnataka Pollution Control Board has Allow only Eco-friendly firecrackers for Deepavali Festival

ಪಟಾಕಿ ಹೊಡೆಯಲು ಹಬ್ಬದಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿದೆ. ಅಲ್ಲದೇ ಪರಿಸರ ಸ್ನೇಹಿ ಪಾಟಾಕಿಗಳನ್ನು ಹೊಡೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿಬೇಕು. ದೀಪಾವಳಿಗೂ ಮೊದಲು ಹಾಗೂ ನಂತರ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ಎಷ್ಟು ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಗಿದೆ ಎಂದು ಪತ್ತೆ ಮಾಡಲು ಮಾಪನ ಅಳವಡಿಸಲಾಗಿದೆ.

ಮುಖ್ಯವಾಗಿ ಮಕ್ಕಳಲ್ಲಿ ಪಟಾಕಿ ಕುರಿತು ಅರಿವ ಮೂಡಿಸಲು ಶಿಕ್ಷಣ ಇಲಾಖೆ ವಿಶೇಷ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಇನ್ನು ಪೊಲೀಸ್ ಇಲಾಖೆ ಪಟಾಕಿ ಮಳಿಗೆಗಳ ಮೇಲೆ ಹದ್ದಿನ ಕಣ್ಣು ಇರಿಸಲಿದೆ. ಪಟಾಕಿ ಹೊಡೆದ ಮೇಲೆ ಆಗುವ ತ್ಯಾಜ್ಯದ ವಿಲೇವಾರಿಗೆ ವಾಹನಗಳ ನೇಮಕ ಮಾಡಲು ಸೂಚಿಸಲಾಗಿದೆ. ಅದಲ್ಲದೇ ಪಟಾಕಿಯಿಂದ ಯಾವುದೇ ಹಾನಿ ಉಂಟಾಗದಂತೆ ತಡೆಯಲು ಮುಂಜಾಗೃತ ದೃಷ್ಟಿಯಿಂದ ಮಂಡಳಿ ಅಗ್ನಿಶಾಮಕ ಇಲಾಖೆ ಜತೆ ಚರ್ಚಿಸಿದೆ. ಅಗತ್ಯ ಕ್ರಮವಹಿಸುವಂತೆ ಕೋರಿದೆ.

Karnataka Pollution Control Board has Allow only Eco-friendly firecrackers for Deepavali Festival

ಹಸಿರು ಪಟಾಕಿಗೆ ಮಾತ್ರವೇ ಅವಕಾಶ ಏಕೆ?

ಸಾಮಾನ್ಯ ಪಟಾಕಿಗಳಿಗಿಂತ ಈ ಹಸಿರು ಪಟಾಕಿಗಳು ಕಡಿಮೆ ಬೆಳಕು ಹಾಗೂ ಶಬ್ದವನ್ನು ಹೊರ ಸೂಸುತ್ತವೆ. ಸಾಮಾನ್ಯ ಪಟಾಕಿಗಳಿಗಿಂತಲೂ ಹಸಿರು ಪಟಾಕಿ ಶೇ. 40-50ರಷ್ಟು ಕಡಿಮೆ ಶಬ್ದದಲ್ಲಿ ಸಿಡಿಯುತ್ತವೆ. ಈ ವೇಳೆ ನೈಟ್ರೋಜನ್, ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಹೊರಚಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎನ್ನುತ್ತಾರೆ. ಇವುಗಳಲ್ಲಿ ಅಪಾಯಕಾರಿ ರಸಾಯನಿಕಗಳ ಬಳಕೆ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ಇವುಗಳು ಪರಿಸರದ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕೆ ಈ ಹಸಿರು ಪಟಾಕಿಗಳಿಗೆ ಮಾತ್ರ ಹಬ್ಬಗಳಲ್ಲಿ ಅವಕಾಶ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+