Narendra Modi: ಕುಟುಂಬ ರಾಜಕೀಯದ ಗ್ಯಾರಂಟಿಯನ್ನಷ್ಟೇ ನೀಡಬಲ್ಲದು! ಕಾಂಗ್ರೆಸ್ ವಾರಂಟಿ ಈಗಾಗಲೇ ಎಕ್ಸ್‌ಪೈರ್: ಮೋದಿ
ಬೆಂಗಳೂರು,ಏಪ್ರಿಲ್27: ಕಾಂಗ್ರೆಸ್ ಆಡಳಿತ ವಿರುವ ರಾಜ್ಯಗಳಲ್ಲಿ ಸುಳ್ಳು ಆಶ್ವಾಸನೆ ನೀಡಿದೆ. ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕೀಯದ ಗ್ಯಾರಂಟಿಯನ್ನಷ್ಟೇ ನೀಡಬಲ್ಲದು. ಕಾಂಗ್ರೆಸ್ ವಾರಂಟಿ ಈಗಾಗಲೇ ಎಕ್ಸ್ ಪೈರ್ ಆಗಿದೆ ಎಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೋದಿ ವ್ಯಂಗ್ಯವಾಡಿದ್ದಾರೆ.
ಗುರುವಾರ ಲೈವ್ ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಾಗುವ ದ್ವಿಗುಣ ಗೌರವ. ಜವಾಬ್ದಾರಿಯೂ ಹೆಚ್ಚಾಗಿದೆ. ಬಸವಣ್ಣನವರ ನಾಡು ನಿಮ್ಮದು. ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು.

ಕರ್ನಾಟಕದ ಎಲ್ಲಿ ಹೋದರೂ ಜನರ ಉತ್ಸಾಹ ಕಾಣುತ್ತಿದೆ. ಕರ್ನಾಟಕಕ್ಕೆ ಬಂದ ನಾಯಕರು, ಮುಖಂಡರು ಜನರ ವಿಶ್ವಾಸದ ಮಾತನಾಡುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ ಬಿಜೆಪಿಗೆ ಅಭಿನಂದನೆಗಳು. ಸಂಘಟನೆಯ ಶಕ್ತಿ ಅನಾವರಣಗೊಂಡಿದೆ. ಬಿಜೆಪಿಯನ್ನು ವಿಭಿನ್ನ ಪಕ್ಷವಾಗಿ ಗೆಲ್ಲಿಸಿ. ಬೂತ್‍ಗಳಲ್ಲಿ 10 ಮಹಿಳಾ, 10 ಪುರುಷ ಕಾರ್ಯಕರ್ತರನ್ನು ಜೊತೆಗೂಡಿಸಿ. ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಿ. ಹಿರಿಯರಿಗೆ ಗೌರವ ಸಲ್ಲಿಸಿ. ಕಿರಿಯರನ್ನು ಪ್ರೀತಿಯಿಂದ ಮಾತನಾಡಿಸಿ. ಬೂತ್ ಗೆಲುವು ಎಂದರೆ ಕುಟುಂಬಗಳ ಜೊತೆ ಮಾತುಕತೆ ಮತ್ತು ಜನರ ಒಲವಿನ ಗೆಲುವಾಗಲಿ ಎಂದು ಆಶಿಸಿದರು.
25 ವರ್ಷಗಳಲ್ಲಿ ಬಡತನಮುಕ್ತ, ವಿಕಸಿತ ದೇಶ ನಮ್ಮ ಗುರಿ. ಕೇವಲ ಅಧಿಕಾರ ಪಡೆಯುವುದಷ್ಟೇ ನಮ್ಮ ವಿರೋಧಿಗಳ ಗುರಿ ಎಂದು ತಿಳಿಸಿದರು. ಕರ್ನಾಟಕದಲ್ಲಿ ಬೆಂಗಳೂರಿನಂಥ ಅನೇಕ ಸ್ಟಾರ್ಟಪ್ ಹಬ್‍ಗಳ ನಿರ್ಮಾಣ ಆಗಲಿ. ಪೂರ್ಣ ಬಹುಮತದ ಸ್ಥಿರ ಸರಕಾರಕ್ಕಾಗಿ ಮತ ಕೇಳಬೇಕು. ದೆಹಲಿಯಲ್ಲಿ 9 ವರ್ಷಗಳಿಂದ ಸ್ಥಿರ ಸರಕಾರದಿಂದ ಆದ ಲಾಭ ಮತ್ತು ಅಸ್ಥಿರ ಸರಕಾರದ ವೈಫಲ್ಯಗಳನ್ನು ಅನಾವರಣಗೊಳಿಸಿ ಎಂದು ತಿಳಿಸಿದರು.

ಡಬಲ್ ಎಂಜಿನ್ ಸರಕಾರ ಎಂದರೆ ವಿಕಾಸದ ಹಾದಿ. ಡಬಲ್ ಎಂಜಿನ್ ಸರಕಾರ ಇದ್ದಾಗ ಬಡವರ ಕಲ್ಯಾಣದ ಕಾರ್ಯಕ್ರಮಗಳು ಬೇಗನೆ ಜನರನ್ನು ತಲುಪುತ್ತವೆ. ವಿಪಕ್ಷದ ಸರಕಾರ ಇದ್ದಾಗ ಕೇಂದ್ರದ ಯೋಜನೆಗಳು ವಿಫಲವಾಗುತ್ತವೆ. ಯೋಜನೆಯ ಹೆಸರು ಬದಲಿಸುವುದು, ಯೋಜನೆ ವಿಫಲ ಆಗುವಂತೆ ನೋಡಿಕೊಳ್ಳುತ್ತಾರೆ.ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್‍ನಡಿ ಪ್ರತಿ ಅರ್ಹ ರೈತರಿಗೆ ಒಟ್ಟು 10 ಸಾವಿರ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಗರಿಷ್ಠ ಲಾಭ ಲಭಿಸಿದೆ. ವಿಕಾಸದ ವೇಗ ವರ್ಧನೆಗೆ ಬಿಜೆಪಿ ಗೆಲ್ಲಬೇಕಿದೆ ಎಂದರು.
ಸ್ವಾಸ್ಥ್ಯ ಸೇವೆಯಲ್ಲಿ ಯುಪಿಎ ಸರಕಾರದ ನಿಧಾನಗತಿಯಿಂದ ಜನರಿಗೆ ಸಮಸ್ಯೆ ಆಗಿತ್ತು. ಏಮ್ಸ್ ಸಂಖ್ಯೆ ಗಮನಾರ್ಹ ಹೆಚ್ಚಳ (20ಕ್ಕೆ ಏರಿಕೆ), ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ 600ಕ್ಕೆ ಏರಿದೆ. ಭ್ರಷ್ಟಾಚಾರ ದೂರವಿಡಲು ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ. 2014ರ ಬಳಿಕ ಭ್ರಷ್ಟಾಚಾರ ದೂರವಿಡಲು ಜನ್‍ಧನ್, ಆಧಾರ್ ಮೂಲಕ ಡಿಬಿಟಿಯಡಿ ಹಣ ವರ್ಗಾವಣೆ ಆಗುತ್ತಿದೆ. ಭ್ರಷ್ಟಾಚಾರ ತಪ್ಪಿಸಿದ್ದೇವೆ ಎಂದು ತಿಳಿಸಿದರು.
ಕರ್ನಾಟಕವು ಭಾಷೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಆಧ್ಯಾತ್ಮಿಕತೆಗೆ ಸರಿಸಾಟಿ ಇಲ್ಲ. ಕನಕದಾಸರ ಭಕ್ತಿ, ಶಿವಶರಣರ ವಚನಗಳು ಸಮಾಜದ ನಿರ್ಮಾಣಕ್ಕೆ ಬಳಕೆ ಆಗಿವೆ. ಸಮಯದ ಜೊತೆ ಕೆಲವೊಮ್ಮೆ ಆಧುನಿಕತೆಯ ಜೊತೆಗೂಡಿ ಮುನ್ನಡೆಯುವ ಜನತೆ ಇಲ್ಲಿದ್ದಾರೆ. ಇಲ್ಲಿನ ಯುವಜನರು ಕನ್ನಡ ಸಾಹಿತ್ಯ ಓದುತ್ತಾರೆ. ನನ್ನ ಮತ್ತು ಕರ್ನಾಟಕದ ನಡುವಿನ ಬಾಂಧವ್ಯ ಹಲವು ದಶಕಗಳಷ್ಟು ಹಿಂದೆಯದು. ಪಕ್ಷದ ಕಾರ್ಯಕರ್ತನಾಗಿ ಭೇಟಿ ಕೊಡುತ್ತಿದೆ. ಇದಕ್ಕಾಗಿ ಮನ್ ಕಿ ಬಾತ್‍ನಡಿ ಕರ್ನಾಟಕದ ಪ್ರಸ್ತಾಪ ಮಾಡುತ್ತ ಇರುತ್ತೇನೆ ಎಂದರು.
ಕೆಲವು ಪಕ್ಷಗಳು ರಾಜಕೀಯವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿದ್ದವು. ಅವರಿಗೆ ಯುವಜನರ ಚಿಂತೆ ಇಲ್ಲ. ಸರಕಾರವು ವರ್ತಮಾನದ ಜೊತೆ ಭವಿಷ್ಯದ ಕುರಿತು ಚಿಂತಿಸಬೇಕು. ಸಂಪತ್ತಿನ ವೃದ್ಧಿ, ಜನಕಲ್ಯಾಣದ ಕುರಿತು ಯೋಚಿಸಬೇಕು. ಬಿಜೆಪಿ ಶಾರ್ಟ್ ಕಟ್ ಬದಲಾಗಿ ವಿಕಸಿತ ದೇಶಕ್ಕಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.












Click it and Unblock the Notifications