DK Shivakumar: ಶೋಭಕ್ಕನೂ ಸೇರಿಸ್ಕೊಂಡು ಯಡಿಯೂರಪ್ಪರನ್ನು ಮುಗಿಸಲು ಏನು ಮಾಡ್ತಿದ್ದಾರೆ ಅನ್ನೋದು ಜಗಜ್ಜಾಹಿರು: ಡಿಕೆಶಿ
ಬೆಂಗಳೂರು,ಏಪ್ರಿಲ್22: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಿಂದಾಗಿ ಬಂಡಾಯದ ಬೆಂಕಿ ಹೆಚ್ಚಾಗಿ, ಹಲವು ಜನ ನಾಯಕರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಇತ್ತ ಬಿಜೆಪಿ ಇಬ್ಬರು ಲಿಂಗಾಯಕ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿಯಿಂದ ಬಿಜೆಪಿ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರ್ಪಡೆಯಾಗಿರುವುದು ಲಿಂಗಾಯತ ಮತಗಳ ವಿಭಜನೆಗೆ ಕಾರಣವಾಗಲಿದ್ಯಾ ಎಂಬ ಆತಂಕ ಬಿಜೆಪಿ ನಾಯಕರಿಗೆ ಎದುರಾಗಿದೆ.

ಇತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿದ್ದು, ಇವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದು, ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ಇಬ್ಬರೂ ಕೂಡ ಯಾರು ಯಾರನ್ನ ಮುಗಿಸುವುದಕ್ಕೆ ಹೊರಟಿದ್ದಾರೆ ಅಂತ ಡಿಟೇಲಾಗಿ ಹೇಳುತ್ತಿದ್ದಾರೆ. ಇದೀಗ ಶೋಭಕ್ಕನೂ ಸೇರಿಸ್ಕೊಂಡು ಯಡಿಯೂರಪ್ಪರನ್ನು ಮುಗಿಸಲು ಏನು ಮಾಡ್ತಿದ್ದಾರೆ ಅನ್ನೋದು ಜಗಜ್ಜಾಹಿರಾಗಿದೆ. ಶೋಭಕ್ಕನೂ ಸೇರಿದಂತೆ ಯಡಿಯೂರಪ್ಪರನ್ನು ಮುಗಿಸಲು ಯಾರೆಲ್ಲ ಪ್ರಯತ್ನ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಸದಾಶಿವನಗರದ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಚಿತ್ತಾಪುರದಲ್ಲಿ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಅರವಿಂದ ಅವರು ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರೂ ಈ ವೇಳೆ ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಡಿ ಕೆ ಶಿವಕುಮಾರ್ ಬರಮಾಡಿಕೊಂಡರು.

ಇನ್ನೂ ಈ ವೇಳೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ನಾಯಕರು. ಸ್ಟಾರ್ ಕ್ಯಾಂಪೆನೇರ್, ಅವರ ವಿರುದ್ಧ ಯಾವ ಷಡ್ಯಂತ್ರ ನಡೆಯಲ್ಲ. ಬಿಜೆಪಿ ಡ್ಯಾಮ್ ಈಗಾಗಲೇ ಒಡೆದು ನೀರು ಬರ್ತಾ ಇದೆ. ಇಲ್ಲಿ ಬಂದಿದೆ ನೋಡಿ ಬಿಜೆಪಿ ನೀರು ಎಂದು ಪಕ್ಕದಲ್ಲಿ ಇದ್ದ ಮಾಜಿ ಶಾಸಕರನ್ನು ತೋರಿಸಿ ಮಾತು ಮುಂದುವರೆಸಿದ ಡಿ ಕೆ ಶಿವಕುಮಾರ್, ಬಿಜೆಪಿ ಕೆರೆ,ಬಾವಿ ಎಲ್ಲ ನೀರು ಖಾಲಿಯಾಗುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ನಿಮ್ಮ ಅರ್ಜಿ ತಿರಸ್ಕಾರಕ್ಕೆ ಯಾರು ಒತ್ತಡ ಹಾಕಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅರ್ಜಿಯನ್ನು ಎಷ್ಟು ಮಂದಿ ಡೌನ್ಲೋಡ್ ಮಾಡಿಕೊಂಡು, ಅರ್ಜಿ ತಿರಸ್ಕಿರಿಸಬೇಕು ಎಂದು ದೊಡ್ಡ ಕಾನೂನು ತಜ್ಞರ ತಂಡವನ್ನೇ ಬಿಜೆಪಿ ನಿಯೋಜಿಸಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು 2 ಲಕ್ಷ ಪಡೆದಿದ್ದು, ಹೀಗಾಗಿ 224 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನೀಡಿರುವ ಹೇಳಿಕೆ ಉತ್ತರಿಸಿ, ಶೋಭಕ್ಕಾ ನಾನು 40% ಕಮಿಷನ್ ಪಡೆದಿಲ್ಲ. ನಿಮ್ಮ ಕಮಿಷನ್ ಗೆ ನಿಮ್ಮ ಪಕ್ಷದ ನಾಯಕರಾದ, ಓಲೇಕಾರ್, ಯತ್ನಾಳ್, ವಿಶ್ವನಾಥ್, ಗೂಳಿಹಟ್ಟಿ ಶೇಖರ್, ಈಶ್ವರಪ್ಪ, ಮಾಡಾಳ್ ವಿರೂಪಾಕ್ಷಪ್ಪ ಅವರು ಸಾಕ್ಷಿ ನೀಡಿದ್ದಾರೆ. ನಾವು ಅರ್ಜಿ ಶುಲ್ಕ 5 ಸಾವಿರ, ಇನ್ನು ಪಕ್ಷದ ಕಟ್ಟಡಕ್ಕೆ 2 ಲಕ್ಷ ದೇಣಿಗೆ ಅಧಿಕೃತವಾಗಿ ಸಂಗ್ರಹಿಸಿದ್ದೇವೆ. ನಿಮ್ಮ ಪಕ್ಷದಲ್ಲಿ ಯಾರಿಗೆ ಏನು ಒತ್ತಡ ಹಾಕಲಾಗಿದೆ' ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ 40% ಭ್ರಷ್ಟಾಚಾರ. ನೇಮಕಾತಿ ಹಗರಣ, ಬೆಲೆ ಏರಿಕೆ, ರಾಜ್ಯಕ್ಕೆ ಉತ್ತಮ ಆಡಳಿತ ನೀಡಿ, ರಾಜ್ಯದಲ್ಲಿ ಅಭಿವೃದ್ಧಿ ಬದಲಾವಣೆ ತರುವ ವಿಷಯಗಳು ಪ್ರಮುಖ ಅಂಶಗಳು. ಈ ಸರ್ಕಾರದ ಅವಧಿ ಇನ್ನು 20 ದಿನಗಳು ಮಾತ್ರ. ಮುಖ್ಯಮಂತ್ರಿಗಳು ಅದಕ್ಕಿಂತ ಮುಂಚಿತವಾಗಿ ರಾಜೀನಾಮೆ ನೀಡುವುದು ಉತ್ತಮ ಎಂದು ತಿಳಿಸಿದರು.












Click it and Unblock the Notifications