ಆಪರೇಷನ್ ಕಮಲ ಮಾಡಲು ಆಗಲ್ಲ, ಬಹಳ ಗ್ಯಾಪ್ ಇದೆ: ಸತೀಶ್ ಜಾರಕಿಹೊಳಿ
ಬೆಳಗಾವಿ,ಮೇ 13: ಬಿಜೆಪಿಯವರು ಈ ಬಾರಿ ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಸರ್ಕಾರ ಮಾಡಲು 30 ರಿಂದ 40 ಸೀಟ್ ಅವರಿಗೆ ಬೇಕಾಗುತ್ತೆ, ಅದು ಅಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪರ ಇಡೀ ರಾಷ್ಟ್ರ, ರಾಜ್ಯದ ಸರ್ವೇ ಏಜೆನ್ಸಿ, ಪೊಲೀಸ್ ಗುಪ್ತಚರ, ನಮ್ಮದೇ ಪಕ್ಷದ ವರದಿ ಇವೆ. ನಾವು ಮುಂಚೆಯೇ ಹೇಳಿದ್ವಿ 120 ಗೆಲ್ಲುತ್ತೇವೆ ಎಂದು, ಅದೇ ವರದಿ ಎಕ್ಸಿಟ್ ಪೋಲ್‌ಗಳು ಕೊಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ 10 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ವಿ, 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಡಿಮೆ ಕ್ಷೇತ್ರ ಬಂದರೂ ಸರ್ಕಾರ ಮಾಡ್ತೀವಿ ಎಂಬ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ. ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡುವುದು ಸೂಕ್ತ, ಬಿಜೆಪಿ 75 ರಿಂದ 80 ಕ್ಷೇತ್ರ ಮಾತ್ರ ಬರುತ್ತೆ. ಅತಂತ್ರ ಫಲಿತಾಂಶ ನೂರಕ್ಕೆ ನೂರು ಬರಲ್ಲ. ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications