Karnataka Elections: ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್ vs ಬಿಜೆಪಿ vs ಜೆಡಿಎಸ್- ತ್ರಿಕೋನ ಸ್ಪರ್ಧೆ ಪಕ್ಕಾ
ಬೀದರ್, ಏಪ್ರಿಲ್ 29: ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ ಬೀದರ್‌ನ ದಕ್ಷಿಣ ಕ್ಷೇತ್ರವೂ ಒಂದಾಗಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶ್ರೀಮಂತ ಉದ್ಯಮಿ ಅಶೋಕ್ ಖೇಣಿ ಇಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಬೀದರ್ ದಕ್ಷಿಣ ಕ್ಷೇತ್ರವು ರಾಜ್ಯದ ಗಮನ ಸೆಳೆದಿದೆ. ಅವರು 2013 ರಲ್ಲಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಸ್ಪರ್ಧಿಸಿದ್ದರು. ಆದರೆ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅಶೋಕ್ ಖೇಣಿ ಅವರ ವಿರುದ್ಧ ಜೆಡಿಎಸ್‌ನಿಂದ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಹಾಗೂ ಬಿಜೆಪಿಯಿಂದ ಶೈಲೇಂದ್ರ ಬೈಲ್ದಾಳೆ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಅಶೋಖ್ ಖೇಣಿಯವರು ಬೀದರ್ ತಾಲೂಕಿನ ರಂಜೋಲ್ ಖೇಣಿ ಗ್ರಾಮದ ಸಾಂಪ್ರದಾಯಿಕ ಲೇವಾದೇವಿಗಾರರು ಮತ್ತು ಭೂಮಾಲೀಕರ ಕುಟುಂಬದಿಂದ ಬಂದವರು. ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. 2013 ರಲ್ಲಿ ರಾಜಕೀಯ ರಂಗಕ್ಕೆ ಬಂದ ಖೇಣಿ ಅವರು ಬೀದರ್ ದಕ್ಷಿಣದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ, ಈ ಬಾರಿ ಅವರ ಗೆಲುವು ಅಷ್ಟೊಂದು ಸುಲಭವಾಗಿಲ್ಲ.

ಜೆಡಿಎಸ್- ಬಿಜೆಪಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ಅವರು ಅಪಾರ ಬೆಂಬಲಿಗರನ್ನು ಹೊಂದಿರುವ ಕುರುಬ ಸಮುದಾಯಕ್ಕೆ ಸೇರಿದವರಾಗಿದೆ. 2004ರಲ್ಲಿ ಬೀದರ್ ಮತ್ತು 2008ರಲ್ಲಿ ಬೀದರ್ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಅಶೋಕ್ ಖೇಣಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಇನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಗುತ್ತಿಗೆದಾರರಾಗಿರುವ ಡಾ. ಬೆಲ್ದಾಳೆ ಅವರು ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಗಳು ಎಂದು ಹೇಳಲಾಗತ್ತಿದೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಡಾ ಬೆಲ್ದಾಳೆ ಅವರು ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಬಂಡೆಪ್ಪ ಕಾಶಂಪೂರ್ ಅವರು ಗೆಲುವು ಸಾಧಿಸಿದ್ದರು. ಡಾ ಶೈಲೆಂದ್ರ ಬೆಲ್ದಾಳೆ ಅವರು ಎರಡನೇ ಸ್ಥಾನದಲ್ಲಿದ್ದರು.
ಕ್ಷೇತ್ರದ ಮಾಹಿತಿ
ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಶೇ.15ರಷ್ಟು ಲಿಂಗಾಯತ ಮತದಾರರಿದ್ದಾರೆ. ಎಸ್ಸಿ ಮತದಾರರು ಸರಿಸುಮಾರು 48,271 ಆಗಿದ್ದು, 2011 ರ ಜನಗಣತಿಯ ಪ್ರಕಾರ ಶೇ 23.68 ರಷ್ಟಿದ್ದಾರೆ.
ಎಸ್ಟಿ ಮತದಾರರು ಸರಿಸುಮಾರು 37,386 ರಷ್ಟಿದ್ದು, 2011 ರ ಜನಗಣತಿಯ ಪ್ರಕಾರ ಶೇ 18.34 ರಷ್ಟಿದ್ದಾರೆ.
ಮುಸ್ಲಿಂ ಮತದಾರರು ಸರಿಸುಮಾರು 53,816 ಆಗಿದ್ದು, ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 26.4 ರಷ್ಟಿದ್ದಾರೆ.
ಗ್ರಾಮೀಣ ಮತದಾರರು ಸರಿಸುಮಾರು 2,03,847 ರಷ್ಟಿದ್ದು, ಇದು 2011 ರ ಜನಗಣತಿಯ ಪ್ರಕಾರ ಸುಮಾರು ಶೇ 100 ರಷ್ಟಾಗಿದೆ.
2019 ರ ಸಂಸತ್ ಚುನಾವಣೆಯ ಪ್ರಕಾರ ಬೀದರ್ ದಕ್ಷಿಣ ವಿಧಾನಸಭೆಯ ಒಟ್ಟು ಮತದಾರರು 203847 ರಷ್ಟಿದ್ದಾರೆ. ಮತಗಟ್ಟೆಗಳ ಸಂಖ್ಯೆ 229 ರಷ್ಟಿವೆ. 2019 ರ ಸಂಸತ್ ಚುನಾವಣೆಯಲ್ಲಿ ಬೀದರ್ ದಕ್ಷಿಣ ವಿಧಾನಸಭೆಯ ಮತದಾರರ ಮತದಾನ ಶೇ 64.89 ಆಗಿದೆ.












Click it and Unblock the Notifications