ಅತಂತ್ರ ಫಲಿತಾಂಶ ಬಂದರೆ ಕುಮಾರಸ್ವಾಮಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ: ಜಾರಕಿಹೊಳಿ ಸ್ಪೋಟಕ ಹೇಳಿಕೆ

ಬೆಂಗಳೂರು, ಮೇ 12: ಜನತಾದಳದ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಸುಳಿವು ನೀಡಿರುವ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಸರ್ಕಾರ ರಚನೆಗೆ ಎಚ್‌ಡಿ ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿ, 'ಅತಂತ್ರ ಅಸೆಂಬ್ಲಿ ಇರುವುದಿಲ್ಲ. 100 ಪ್ರತಿ ಶತದಷ್ಟು ನಾವೇ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದೇವೆ. ಒಂದು ವೇಳೆ, ಅತಂತ್ರ ಫಲಿತಾಂಶ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Karnataka Poll Results Satish Jarakiholi

2004 ಮತ್ತು 2018 ರಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಸರ್ಕಾರವನ್ನು ರಚಿಸಿತು. ಎರಡೂ ಸಂದರ್ಭಗಳಲ್ಲಿ, ಚುನಾವಣೋತ್ತರ ಮೈತ್ರಿಯು ಪೂರ್ಣಾವಧಿಯನ್ನು ಪೂರ್ಣಗೊಳಿಸುವ ಮೊದಲು ಕುಸಿಯಿತು.

ಗುರುವಾರ, ಬಿಜೆಪಿ ನಾಯಕ ಆರ್ ಅಶೋಕ್‌ ಅವರು ಫಲಿತಾಂಶದ ನಂತರ 'ಆಪರೇಷನ್ ಕಮಲ'ವನ್ನು ಮರುಪ್ರಾರಂಭಿಸುವ ಸುಳಿವು ನೀಡಿದ್ದಾರೆ. ಬಿಜೆಪಿಯು ಹಲವು ಸಂದರ್ಭಗಳಲ್ಲಿ ಬಳಸಿದ ತಂತ್ರ ಯಶಸ್ವಿಯಾಗಿದೆ.

'ನಾವು ಅದನ್ನು ಮಾಡಿದರೆ (ಬೇರೆ ಪಕ್ಷ ಅಥವಾ ಶಾಸಕರ ಬೆಂಬಲವನ್ನು ಪಡೆದರೆ), ಅದು ಆಪರೇಷನ್ ಕಮಲ, ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿದರೆ ಅದನ್ನು ಏನೆಂದು ಕರೆಯುತ್ತೀರಿ? ಬಿಜೆಪಿಯಿಂದ ಮಾತ್ರ ಸುಸ್ಥಿರ ಸರ್ಕಾರ ಕೊಡಲು ಸಾಧ್ಯ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಆದ್ದರಿಂದ, ನಾವು ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನೋಡುತ್ತೇವೆ ಮತ್ತು ಕಾರ್ಯತಂತ್ರವನ್ನು ಯೋಜಿಸುತ್ತೇವೆ' ಎಂದು ಬಿಜೆಪಿ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ಅಶೋಕ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಬಿಜೆಪಿ 80 ಸ್ಥಾನಗಳನ್ನು ದಾಟುವುದಿಲ್ಲ. ಹೀಗಾಗಿ 'ಆಪರೇಷನ್ ಕಮಲ' ಹಗಲು ಗನಸು. ಅವರಿಗೆ ಕನಿಷ್ಠ 35-40 ಸೀಟುಗಳು ಬೇಕಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ 'ಆಪರೇಷನ್ ಕಮಲ'ವನ್ನು ಕಾರ್ಯಗತಗೊಳಿಸುವುದು ಅಸಾಧ್ಯ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ನೀವು ನನ್ನನ್ನು ಕೇಳಿದರೆ, ಅವರು ಪ್ರತಿಪಕ್ಷ ಎಂದು ಒಪ್ಪಿಕೊಳ್ಳಬೇಕು ಮತ್ತು ನಮ್ಮ ಸರ್ಕಾರಕ್ಕೆ ಸಲಹೆ ನೀಡಬೇಕು. 'ಆಪರೇಷನ್ ಕಮಲ' ಯಾವಾಗಲೂ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸರದಿ ಇದೆ ಎಂದು ಜಾರಕಿಹೊಳಿ ಹೇಳಿದರು.

ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗವು (ಇಸಿಐ) ಮೇ 13 ರ ಶನಿವಾರದಂದು ಪ್ರಕಟಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+