ಪ್ರೀತಂ ಗೌಡನ್ನ ಸೋಲಿಸೋದಕ್ಕೆ ಬಹಳ ಕಷ್ಟ ಪಡಬೇಕಿಲ್ಲ, ನಾನೇ ನಾಳೆ ಹೋಗ್ತೀನಿ: ಎಚ್‌ ಡಿ ಕುಮಾರಸ್ವಾಮಿ

ರಾಮನಗರ,ಏಪ್ರಿಲ್30:‌ ಪ್ರೀತಂ ಗೌಡನ್ನ ಸೋಲಿಸೋದಕ್ಕೆ ಬಹಳ ಕಷ್ಟ ಪಡಬೇಕಿಲ್ಲ, ನಾನೇ ನಾಳೆ ಹೋಗುತ್ತೇನೆ ಅವನನ್ನ ತೆಗಿಯೋದಕ್ಕೆ ಹಾಸನದ ಮಹಾ ಜನತೆಯೇ ಸಾಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು.

ಈ ಕುರಿತು ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ ಸ್ವರೂಪ್ ಗೆಲ್ಲೋದು ಅಷ್ಟೆ ಸತ್ಯ. ಭವಾನಿ ಮನೆ ಮಗನಿಗಿಂತ ಹೆಚ್ಚಾಗಿ ಬೆನ್ನಿಗಿಟ್ಕೊಂಡು ಸುತ್ತುತ್ತಿದ್ದಾರೆ. ಪ್ರೀತಮ್ ಗೌಡ ಸೋಲೋದು ಶತಃಸಿದ್ದ, ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಗೆಲುವು ಖಚಿತ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

 Karnataka Poll: JDS Candidate Is Sure To Win In Hassan Says HD Kumaraswamy

ಈ ವೇಳೆ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು ಮಾತನಾಡಿ, ಚನ್ನಪಟ್ಟಣ ಕುಮಾರಸ್ವಾಮಿಯರ ಕರ್ಮಭೂಮಿ ಇದು. ಕುಮಾರಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ನಿಲ್ಲಲೇಬೇಕು ಅಂತಾ ಒತ್ತಡ ಇತ್ತು. ಚನ್ನಪಟ್ಟಣದಲ್ಲಿ ನನ್ನ ಕರ್ಮಭೂಮಿ ಇಲ್ಲಿ ಬಿಟ್ಟು ಬೇರೆ ಕಡೆ ಎಲ್ಲೂ ನಿಲ್ಲಲ್ಲ ಅಂತ ಹೇಳಿದ್ರು. ಚನ್ನಪಟ್ನದಲ್ಲೇ ನನ್ನ ಅಂತಿಮ ಪ್ರಾಣ ಬಿಡ್ತೀನಿ ಎನ್ನುವ ಮಾತು ಮಾತು ಹೇಳಿದ್ರು ಇಡೀ ಹಿಂದೂಸ್ಥಾನದಲ್ಲಿ ಕುಮಾರಸ್ವಾಮಿ ಕೊಟ್ಟಂಥ ಯೋಜನೆಗಳೇ ಹೆಚ್ಚು ಎಂದು ಹೇಳಿದರು.

ಇಡೀ ಇಂಡಿಯಾದಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಘೋಷಿಸಿದ್ರೆ ಅದು ಕುಮಾರಸ್ವಾಮಿ ಮಾತ್ರ. ಇಡೀ ಇಂಡಿಯಾದಲ್ಲಿ ಎಲ್ಲೂ ಮಾಡದ ಕಾರ್ಯಕ್ರಮ ಅಳವಡಿಸಿಕೊಂಡಿದ್ದಾರೆ, ಎರಡು ಬಾರಿ ಸಂಕಷ್ಟದಲ್ಲೇ ಮುಖ್ಯಮಂತ್ರಿ ಆದರೂ, ಬಿಜೆಪಿಯವರು ಏನು ಸಂಕಷ್ಡ ಕೊಟ್ರು, ಕಾಂಗ್ರೆಸ್ ನವರು ಏನು ತೊಂದರೆ ಕೊಟ್ರು ಅದನ್ನೆಲ್ಲ ಸಹಿಸಿಕೊಂಡಿದ್ದಾರೆ.

 Karnataka Poll: JDS Candidate Is Sure To Win In Hassan Says HD Kumaraswamy

ಸಿದ್ದರಾಮಯ್ಯ ಮಾಡಲಾಗದ ಸಾಲ ಮನ್ನ ಮಾಡಿದ್ದು ಕುಮಾರಸ್ವಾಮಿ, ನನ್ನ ಪಾರ್ಥಿವ ಶರೀರ ಇಲ್ಲೇ ಬಂದು ಹೋಗ್ಲಿ ಅಂತಾ ಎಚ್ ಡಿ ಕೆ ಚನ್ನಪಟ್ಟಣದಲ್ಲೇ ನಿಂತಿದ್ದಾರೆ. ಕುಮಾರಸ್ವಾಮಿಯವರಿಗೆ ಯಾರು ಏನೇ ಮಾಡಿದ್ರು ಚನ್ನಪಟ್ಟಣದ ಜನ ಬಿಟ್ಟುಕೊಡುವುದಿಲ್ಲ , ಉಳಿಸಿಕೊಳ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಭಾವುಕರಾದರು.

ಬಿಜೆಪಿ ಹಾಗೂ ಕಾಂಗ್ರೆಸ್ ನವರು ಏನು ಮಾಡ್ತಿದ್ದಾರೆ ಅಂತಾ ಜನಕ್ಕೆ ಗೊತ್ತಾಗಿದೆ. ವರುಣಾದಲ್ಲಿ ಯಡಿಯೂರಪ್ಪ ಅವರ ಮಗನ್ನ ನಿಲ್ಲಿಸ್ತೀವಿ ಅಂತಾ ಹೇಳಿದ್ರು, ಅಮೇಲೆ ನಿಲ್ಲಿಸಲಿಲ್ಲ.ಇದರ ಅರ್ಥ ಏನು? ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಎಂದು ಹೇಳಿದರು.

ಪಂಚರತ್ನ ಯಾತ್ರೆಯ ಯಶಸ್ಸಿನಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಏನೇನು ಮಾಡ್ತಿವೆ ಅಂತಾ ಗೊತ್ತಿದೆ. ಕೊಟ್ಟ ಮಾತು ಯಾರಾದ್ರು ಉಳಿಸಿಕೊಂಡಿದ್ರೆ ಅದು ಕುಮಾರಸ್ವಾಮಿ ಮಾತ್ರ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+