ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಆರಂಭ; ಪ್ರಮುಖ ವಿದ್ಯಮಾನಗಳು
ಬೆಂಗಳೂರು, ಆಗಸ್ಟ್ 05: ಇಂದು ಶುಕ್ರವಾರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು, ಅಲ್ಲದೇ ರಾಜಕೀಯ ಪಕ್ಷಗಳ ಬೆಳವಣಿಗೆಗಳು ಏನೇನಿವೆ ಎಂಬುದನ್ನು ಇಲ್ಲಿ ಪರಿಶೀಲಿಸಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗ್ಗೆ 11ಕ್ಕೆ ಕರ್ನಾಟಕ ತೋಟಗಾರಿಕೆ ಮತ್ತು ಮೈಸೂರು ಉದ್ಯಾನ ಕಲಾಸಂಘ ಆಯೋಜಿಸಿರುವ '75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಶೇಷ-ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ, ಸ್ಥಳ: ಗಾಜಿನ ಮನೆ ಲಾಲ್ ಬಾಗ್, ಬೆಂಗಳೂರು.
ಬೆಳಗ್ಗೆ 11.30: ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿರುವ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಂಗಳೂರು.

ಮಧ್ಯಾಹ್ನ 12: 'ಹರ್ ಘರ್ ತಿರಂಗಾ' ವಿಡಿಯೋ ಸಂವಾದ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 01: ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 2.15: ವೇದಾಂತ ರಿಸೋರ್ಸ್ ಲಿಮಿಟೆಟ್ ಸಂಸ್ಥಾಪಕ ಅಧ್ಯಕ್ಷ ಅನಿಲ್ ಅಗರವಾಲ್ ಜತೆ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಮಧ್ಯಾಹ್ನ 3.30: ಯೋಜನಾ ಇಲಾಖೆ ವತಿಯಿಂದ ರಾಜ್ಯಮಟ್ಟದ ಪ್ರಥಮ 'ದಿಶಾ' ಸಮಿತಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 04.30: ಸ್ವಾತಂತ್ರ್ಯ ದಿನಾಚರಣೆ -2022 ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 5.30: ವಾಸ್ತುಶಿಲ್ಪ ಪರಿಷತ್ತು ಆಯೋಜಿಸಿರುವ 'ಸೆಂಟರ್ ಆಫ್ ಎಕ್ಸಲೆನ್ಸ್' ಸ್ಥಾಪನೆಗೆ ಅಡಿಗಲ್ಲು ಹಾಕುವುದು, ಸ್ಥಳ: ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು.
ಸಂಜೆ 6.30: ಬಿಸಿಐಸಿ ಬೆಂಗಳೂರು ಹಮ್ಮಿಕೊಂಡ 45ನೇ ವಾರ್ಷಿಕ ಪ್ರಧಾನ ಸಭೆ, ಸ್ಥಳ: ಹೋಟೆಲ್ ತಾಜ್ ವೆಸ್ಟ್ ಎಂಡ್, ರೇಸ್‌ಕೋರ್ಸ ರಸ್ತೆ, ಬೆಂಗಳೂರು.
ಎಎಪಿ:
ಬೆಳಗ್ಗೆ 9.30: ಆಮ್ ಆದ್ಮಿ ಪಕ್ಷ ಸೇರ್ಪಡೆ ಕಾರ್ಯಕ್ರಮ, ಜೆಡಿಎಸ್ ನಾಯಕ ಅಗಿಲೆ ಯೋಗೇಶ್ ಸೇರ್ಪಡೆ, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಭಾಗಿ, ಸ್ಥಳ: ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿ , ಕುಮಾರಕೃಪಾ ಈಸ್ಟ್, ಬೆಂಗಳೂರು.
ಮಧ್ಯಾಹ್ನ 12: ಆಮ್ ಆದ್ಮಿ ಪಕ್ಷ ಸೇರ್ಪಡೆ ಕಾರ್ಯಕ್ರಮ, ಸೌಂದರ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೌಂದರ್ಯ ಮಂಜಪ್ಪ ಸೇರ್ಪಡೆ, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಭಾಗಿ, ಸ್ಥಳ: ಹೋಟೆಲ್ ಪರಾಗ್, ಜಿಪಿಓ ವೃತ್ತ, ರಾಜಭವನ ಬಳಿ.












Click it and Unblock the Notifications