• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತೃಪ್ತ ಶಾಸಕರಿಗೆ ಡಿ ಕೆ ಶಿವಕುಮಾರ್ ಕೊಟ್ಟಿದ್ದು ಸಲಹೆನೋ, ವಾರ್ನಿಂಗೋ?

|
   ಅತೃಪ್ತರಿಗೆ ಕೊನೆಗೂ ವಾರ್ನಿಂಗ್ ಕೊಟ್ಟ ಡಿಕೆಶಿ..? | Oneindia Kannada

   ಇದ್ದಬದ್ದ ಅಸ್ತ್ರಶಸ್ತ್ರಗಳನೆಲ್ಲಾ ಬಳಸಿ, 'ಶಸ್ತ್ರತ್ಯಾಗ'ಕ್ಕೂ ಮುನ್ನ, ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಲು ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಮಾಧ್ಯಮದವರನ್ನು ಸೋಮವಾರ (ಜುಲೈ ) ಬಳಸಿಕೊಂಡಿದ್ದ ರೀತಿ ವಿಶೇಷವಾಗಿತ್ತು.

   ಥೇಟ್ ಕಾನೂನು ಪಂಡಿತರ ರೀತಿಯಲ್ಲಿ ಕೈಯಲ್ಲಿ ಕಾನೂನು/ಸಂವಿಧಾನದ ಪುಸ್ತಕವನ್ನು ಇಟ್ಟುಕೊಂಡು, ವಿಧಾನಸಭೆಗೆ ಹಾಜರಾಗದಿದ್ದರೆ, ಎದುರಿಸಬೇಕಾದ ಪರಿಣಾಮವನ್ನು ವಿವರಿಸಲು ಡಿಕೆಶಿ, ಮಾಧ್ಯಮದವನ್ನು ಕೋರ್ಟ್ ಹಾಲ್ ನಂತೆ ಬಳಸಿಕೊಂಡರು.

   ತಾನು ನೀಡುತ್ತಿರುವುದು ಸಲಹೆ ಎಂದು ಒತ್ತಿಒತ್ತಿ ಡಿ ಕೆ ಶಿವಕುಮಾರ್ ಹೇಳುತ್ತಿದ್ದರೂ, ಅದನ್ನು ಸಲಹೆ ಎನ್ನುವ ಬದಲು ಎಚ್ಚರಿಕೆಯೆಂದೇ ಹೇಳಬಹುದು. ಡಿಕೆಶಿ ಎಚ್ಚರಿಕೆಯ ನಂತರವೂ ಅತೃಪ್ತರು ಸದನಕ್ಕೆ ಹಾಜರಾಗುತ್ತಾರೋ, ಇಲ್ಲವೋ ಎನ್ನುವುದು ಆಮೇಲಿನ ಪ್ರಶ್ನೆಯಾದರೂ, ಡಿಕೆಶಿ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಿರುವುದು ಸ್ಪಷ್ಟವಾಗಿದೆ.

   ರಾಜಕೀಯ ಜೀವನ ಕಳೆದುಕೊಳ್ಳಬೇಡಿ: ಅತೃಪ್ತರಿಗೆ ಡಿಕೆಶಿ ಮನವಿ

   ಯಾವ ಕಾರಣಕ್ಕೂ, ವಾಣಿಜ್ಯ ನಗರದಲ್ಲಿರುವ ಅತೃಪ್ತರು ಬೆಂಗಳೂರಿಗೆ ಬರುವ ಲಕ್ಷಣ ಕಾಣಿಸದೇ ಇರುವ ಹಿನ್ನಲೆಯಲ್ಲಿ ಟ್ರಬಲ್ ಶೂಟರ್ ಡಿಕೆಶಿ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಅದುವೇ ವಿಪ್ ಉಲ್ಲಂಘನೆ. ಇದರಿಂದ ಅತೃಪ್ತ ಶಾಸಕರ ರಾಜಕೀಯ ಜೀವನಕ್ಕಾಗುವ ತೊಂದರೆ ಏನು ಎನ್ನುವುದನ್ನು ಡಿಕೆಶಿ ಬಿಡಿಸಿ ಬಿಡಿಸಿ ಹೇಳಿದ್ದಾರೆ.

   ಅತೃಪ್ತ ಶಾಸಕರಿಗೆ ಮತ್ತೆಮತ್ತೆ ಮನವಿ ಮಾಡಿದ ಡಿಕೆಶಿ

   ಅತೃಪ್ತ ಶಾಸಕರಿಗೆ ಮತ್ತೆಮತ್ತೆ ಮನವಿ ಮಾಡಿದ ಡಿಕೆಶಿ

   ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮತ್ತೆಮತ್ತೆ ಮನವಿ ಮಾಡಿದ ಡಿಕೆಶಿ, ನಿಮ್ಮ ರಾಜಕೀಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಸ್ಪೀಕರ್ ರೂಲಿಂಗ್ ನೀಡಿದ್ದಾರೆ, ಅನರ್ಹಗೊಂಡರೆ ನಿಮ್ಮ ರಾಜಕೀಯ ಜೀವನ ದಾಟ್ಸ್ ಆಲ್.. ಎಂದಿದ್ದಾರೆ.

   ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಡಿಕೆಶಿ ಎಚ್ಚರಿಕೆ

   ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಡಿಕೆಶಿ ಎಚ್ಚರಿಕೆ

   ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು (The Constituion of India 1950) ಸೆಕ್ಷನ್ 164IB ಪ್ರಕಾರ ಏನು ಕ್ರಮವನ್ನು ನಾವು ತೆಗೆದುಕೊಳ್ಳಬಹುದು ಎನ್ನುವುದನ್ನು ಪುಸ್ತಕ ಖರೀದಿಸಿ ಒಮ್ಮೆ ಓದಿ ಎಂದಿರುವ ಡಿಕೆಶಿ, ಆ ಸೆಕ್ಷನ್ ನಲ್ಲಿ ಬರೆದಿರುವುದನ್ನು ಇಂಗ್ಲಿಷ್ ಸಾಲುಗಳನ್ನು ತಾನೇ ಒದಿದರು.

   ಬಿಜೆಪಿಯ ಅಧಿಕಾರದಾಹದ ಬಗ್ಗೆ ಪ್ರಶ್ನಿಸಿದ ಡಿ.ಕೆ.ಶಿವಕುಮಾರ್

   ಮೂವತ್ತು, ನಲವತ್ತು ವರ್ಷಗಳ ರಾಜಕೀಯ ಭವಿಷ್ಯವನ್ನು ಮುಗಿಸಲು ಬಿಜೆಪಿ ಪ್ರಯತ್ನ

   ಮೂವತ್ತು, ನಲವತ್ತು ವರ್ಷಗಳ ರಾಜಕೀಯ ಭವಿಷ್ಯವನ್ನು ಮುಗಿಸಲು ಬಿಜೆಪಿ ಪ್ರಯತ್ನ

   ನೀವು ಅನರ್ಹರಾದರೆ ನೀವು ಮತ್ತೆ ಶಾಸಕರಾಗಲು ಸಾಧ್ಯವಿಲ್ಲ. ಮೂವತ್ತು, ನಲವತ್ತು ವರ್ಷಗಳ ರಾಜಕೀಯ ಭವಿಷ್ಯವನ್ನು ಮುಗಿಸಲು ಬಿಜೆಪಿಯವರು ನಿಮಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಇದಕ್ಕೆ ಮರುಳಾಗಬೇಡಿ, ಬೆಂಗಳೂರಿಗೆ ಬಂದು ನಿಮ್ಮ ಕರ್ತವ್ಯವನ್ನು ಮಾಡಿ. ಇಲ್ಲಾಂದರೆ, ನಾಳೆ ಸಾಯಂಕಾಲ ಸ್ಪೀಕರ್ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ - ಡಿ ಕೆ ಶಿವಕುಮಾರ್.

   ನೀವು ಎಲ್ಲಿದ್ದರೋ, ಬೆಂಗಳೂರಿಗೆ ಬನ್ನಿ, ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ

   ನೀವು ಎಲ್ಲಿದ್ದರೋ, ಬೆಂಗಳೂರಿಗೆ ಬನ್ನಿ, ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ

   ನೀವು ಎಲ್ಲಿದ್ದರೋ, ಬೆಂಗಳೂರಿಗೆ ಬನ್ನಿ, ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ನಿಮಗೆ, ನಿಮ್ಮ ಕ್ಷೇತ್ರದ ಮುಖಂಡರಿಗೆ, ಕಾರ್ಯಕರ್ತರಿಗೆ ನಾನು ಹೇಳಲು ಬಯಸುತ್ತಿದ್ದೇನೆಂದು ಡಿಕೆಶಿ ಹೇಳಿದ್ದಾರೆ. ಇದು ವಾರ್ನಿಂಗ್ ಅಲ್ಲ, ಅವರಿಗೆ ತಿಳುವಳಿಕೆ ನೀಡುತ್ತಿದ್ದೇನೆ ಎಂದು ಹೇಳಲು ಡಿಕೆಶಿ ಮರೆಯಲಿಲ್ಲ.

   ಸ್ಪೀಕರ್ ನೀಡಿರುವ ಸೂಚನೆಗೆ ಕಾಲಾವಕಾಶ ನೀಡುವಂತೆ ಅತೃಪ್ತ ಶಾಸಕರ ಮನವಿ

   ಸ್ಪೀಕರ್ ನೀಡಿರುವ ಸೂಚನೆಗೆ ಕಾಲಾವಕಾಶ ನೀಡುವಂತೆ ಅತೃಪ್ತ ಶಾಸಕರ ಮನವಿ

   ಇವೆಲ್ಲದರ ನಡುವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೀಡಿರುವ ದೂರಿನ ಅನ್ವಯ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ನೀಡಿರುವ ಸೂಚನೆಗೆ ಕಾಲಾವಕಾಶ ನೀಡುವಂತೆ ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka political crisis: Minister DK Shivakumar request to dissident MLAs. He was referring the constituion book and asked them to come to Bengaluru complete the formalities.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more