ಕರ್ನಾಟಕದಲ್ಲಿ OPS ಶೀಘ್ರವೇ ಜಾರಿಗೊಳಿಸಿ ಆದೇಶ: ಶಿಕ್ಷಕರಿಗೆ ಜಿ.ಪರಮೇಶ್ವರ್ ಭರವಸೆ

ತುಮಕೂರು: ಕರ್ನಾಟಕ ರಾಜ್ಯ ಸರ್ಕಾರ ಶಿಕ್ಷಕರಿಗಾಗಿ ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಪ್ರಾರಂಭಿಸಿದೆ. 15,000 ನೇಮಕಾತಿಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು, ಒಪಿಎಸ್ (ಹಳೆ ಪಿಂಚಣಿ ವ್ಯವಸ್ಥೆ) ಸಹ ಜಾರಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಶನಿವಾರ ಜಿಲ್ಲೆಯ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ವಿಜೇತ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

Karnataka OPS

ಆರ್ಥಿಕ ಇಕ್ಕಟ್ಟಿನ ಸ್ಥಿತಿಯಲ್ಲಿ ಒಪಿಎಸ್ ಜಾರಿ ನಿರ್ಧಾರ

ಕಾಂಗ್ರೆಸ್‌ ಪ್ರಣಾಳಿಕೆ ಬರೆಯುವ ಸಂದರ್ಭದಲ್ಲಿ ಒಪಿಎಸ್ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೆ. ಒಪಿಎಸ್ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಕೂಡ ಈ ತೀರ್ಮಾನವನ್ನು ನಿಮಗಾಗಿ ತೆಗೆದುಕೊಂಡಿದ್ದೇವೆ ಎಂದು ಸರ್ಕಾರದ ಬದ್ಧತೆಯ ಕುರಿತು ಅವರು ವಿವರಿಸಿದರು.

ನೀವೆಲ್ಲಾ ಪ್ರಜ್ಞಾವಂತರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಸಮಾಜಕ್ಕೆ ಬಹಳ ಮುಖ್ಯ. ಯುವಕರ ಆಸೆ, ಆಕಾಂಕ್ಷೆಗಳು ಬದಲಾಗಿವೆ. ಯುವಕರು ದಾರಿ ತಪ್ಪದೇ ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ಯಶಸ್ಸಿಗಾಗಿ ಕವಲುದಾರಿ ಹಿಡಿಯುವಂತ ಮಾರ್ಗದರ್ಶನ ಮಾಡಬಾರದು, ಅದರಿಂದ ಯುವಕರು ದಾರಿ ತಪ್ಪುತ್ತಾರೆ ಎನ್ನುವ ಎಚ್ಚರಿಕೆ ನೀಡಿದರು.

ಜನರ ಸೇವೆ ಮಾಡುವುದೇ ನಮ್ಮ‌ ಕರ್ತವ್ಯ. ಇದಕ್ಕಾಗಿಯೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ, ಈ ವಿಚಾರದಲ್ಲಿ ನಾವು ಬದ್ಧರಾಗಿ ಮುಂದುವರೆಯುತ್ತೇವೆ ಎನ್ನುವ ಮಾತುಗಳನ್ನಾಡಿ, ಕಾರ್ಯಕ್ರಮದ ಅರ್ಥಪೂರ್ಣ ಆಯೋಜನೆಗಾಗಿ ಧನ್ಯವಾದ ಸಲ್ಲಿಸಿದರು.

ದೇಶದ ಗುರು ಪರಂಪರೆ ಸ್ಮರಣೆ

ಭಾರತದಂತೆ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಗುರುವಿಗೆ ಗೌರವಿಸಿರುವ ಉದಾಹರಣೆಗಳನ್ನು ನೋಡಲು ಸಾಧ್ಯವಿಲ್ಲ. ನಮ್ಮದು ಇಂತಹ ಉದಾತ್ತ ಆದರ್ಶಗಳನ್ನು ಹೊಂದಿರುವ ಸಮಾಜ ಎಂದು ಭಾರತೀಯ ಶ್ರೀಮಂತ ಪರಂಪರೆಯನ್ನು ಅವರು ಸ್ಮರಿಸಿದರು. ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಒಬ್ಬ ಗುರುವಿದ್ದಾನೆ. ಆ ಗುರುವಿನಿಂದ ಕಲಿತ ಅನೇಕ ವಿಚಾರಗಳು ಅವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದರು.

ನಾನು ಗೊಲ್ಲಹಳ್ಳಿಯಲ್ಲಿ ಓದುವಾಗ ರಾಮಣ್ಣ ಎಂಬ ಕನ್ನಡ ಮೇಷ್ಟ್ರು ಇದ್ದರು.‌ ಕನ್ನಡ ಪಾಠ ಮಾತ್ರ ಮಾಡಿದ್ದರೆ ಅವರನ್ನು ಓರ್ವ ಸಾಮಾನ್ಯ ಶಿಕ್ಷಕರಾಗಿ ಸೀಮಿತ ಮಾಡಬಹುದಿತ್ತು. ಅದರೆ, ಅವರು ಕಲಿಸಿದ ಅನೇಕ ವಿಚಾರಗಳನ್ನು, ಜೀವನ ಪಾಠವನ್ನು ನಾನು ನಿತ್ಯ ಸ್ಮರಿಸುತ್ತೇನೆ. ಎರಡನೇಯವರು ವಿಶ್ವವಿದ್ಯಾಲಯದಲ್ಲಿ ಕೃಷ್ಣಶಾಸ್ತ್ರಿ ಅವರು. ಒಂದು ವೇಳೆ ಇವರು ನನ್ನನ್ನು ತಿದ್ದದೆ ಹೋಗಿದ್ದರೆ, ಈ ಸ್ಥಾನದಲ್ಲಿ ನಾನು ಇರುತ್ತಿರಲಿಲ್ಲ. ನನ್ನ ಜೀವನ ಪಯಣದ ಶ್ರೇಯವನ್ನು ಅವರಿಗೆ ಮುಡಿಪಾಗಿಟ್ಟಿದ್ದೇನೆ ಎಂದು ತಮ್ಮ ಬದುಕಿನಲ್ಲಿ ಬಂದುಹೋದ ಗುರುಗಳನ್ನು ಸ್ಮರಿಸಿದರು.

ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮಗೆ ತಿಳಿದ ವಿಚಾರಧಾರೆಗಳನ್ನು ಪ್ರಪಂಚದ ಮುಂದೆ ಇಟ್ಟರು. ಅಂತಾರಾಷ್ಡ್ರೀಯ ಮಟ್ಟದ ವಿಚಾರವಂತರು, ತಿಳಿದಂತವರು ರಾಧಾಕೃಷ್ಣನ್ ಅವರನ್ನು ಕೊಂಡಾಡುವುದನ್ನು ನೋಡಿದರೆ ಸಮಾಜಕ್ಕೆ ಅವರ ಕೊಡುಗೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಶಿಕ್ಷಕರು ರಾಧಾಕೃಷ್ಣನ್ ಆದರ್ಶ ಪಾಲಿಸಬೇಕು

ಪ್ರತಿಯೊಬ್ಬ ಶಿಕ್ಷಕನು ಕೂಡ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಬೇಕು. ತನ್ನ ವಿದ್ಯಾರ್ಥಿಗೆ ಜೀವನದ ಮೌಲ್ಯಗಳನ್ನು ಅರ್ಥೈಸಬೇಕು, ಬದುಕಿನ ದಾರಿ ಮತ್ತು ಆತನೊಳಗಿನ ಸಾಮಾರ್ಥ್ಯವನ್ನು ತೋರಿಸುವುದು ಬಹಳ ಮುಖ್ಯ. ಅದಕ್ಕಾಗಿ ಶಿಕ್ಷಕರಿಗೆ ಗುರುವಿನ, ದೇವರ ಸ್ಥಾನ ಕೊಟ್ಟಿದ್ದಾರೆ ಎಂಬುದಾಗಿ ಶಿಕ್ಷಕ ವೃತ್ತಿಗಿರುವ ಘನತೆ - ಮೌಲ್ಯವನ್ನು ವಿವರಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ

ಆಧುನಿಕ ಜಗತ್ತಿನಲ್ಲಿ ಜ್ಯೋತಿಬಾ ಫುಲೆ ಅವರಿಂದ ಹಿಡಿದು ಲಕ್ಷಾಂತರ ಶಿಕ್ಷಕರು ದೇಶವನ್ನು ಕಟ್ಟಿದ್ದಾರೆ. ಭಾರತ ಬಲಿಷ್ಠ ಭಾರತವಾಗಿ ತಯಾರಾಗುತ್ತಿದ್ದರೆ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರು ಹಾಕಿಕೊಟ್ಟ ದಾರಿಯಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಿರುವುದರಿಂದ ಭಾರತ ಈ ಸ್ಥಾನದಲ್ಲಿ ನಿಂತಿದೆ ಎಂಬುದಾಗಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆಯನ್ನು ನೆನೆದರು.

ಪ್ರತಿವರ್ಷ ಭಾರತ 10 ಲಕ್ಷ ಇಂಜಿನಿಯರ್‌ಗಳು, 10 ಲಕ್ಷ ವೈದ್ಯರನ್ನು ಉತ್ಪಾದಿಸುತ್ತಿದೆ. ಯಶಸ್ವಿ ಪದವೀಧರನ ಹಿಂದೆ ಹತ್ತಾರು ಗುರುಗಳು ನಿಂತಿದ್ದಾರೆ. ಭಾರತ ಇಷ್ಟೊಂದು ಬಲಿಷ್ಠವಾಗಿ ಬೆಳೆಯುತ್ತಿರುವುದಕ್ಕೆ ಮೂಲ ಕಾರಣ ಶಿಕ್ಷಕರು ಎಂದು ಶ್ಲಾಘಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+